ಬಾಗಲಕೋಟೆ: ಮೂರು ಲಾರಿಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಪಾದಚಾರಿಯೊಬ್ಬ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಬಸ್ ನಿಲ್ದಾಣ ಬಳಿ ನಡೆದಿದೆ.
ತುಳಸಿಗೇರಿ ಗ್ರಾಮದ ದಶರಥ ಜೋಗಿನ (52) ಮೃತ ದುರ್ದೈವಿ.
ಗದ್ದನಕೇರಿ ಕ್ರಾಸ್ ನಿಂದ ಲೋಕಾಪುರ ಕಡೆಗೆ ಹೊರಟಿದ್ದ ಲಾರಿಗಳು ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದಿವೆ.
ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.