Wednesday, April 9, 2025
Google search engine

Homeಅಪರಾಧಹಾಸನದ ಚೋಲಗೆರೆ ಟೋಲ್ ಬಳಿ ಸರಣಿ ಅಪಘಾತ; 7 ಕಾರುಗಳು ಜಖಂ

ಹಾಸನದ ಚೋಲಗೆರೆ ಟೋಲ್ ಬಳಿ ಸರಣಿ ಅಪಘಾತ; 7 ಕಾರುಗಳು ಜಖಂ

ಹಾಸನ: ಚೋಲಗೆರೆ ಟೋಲ್ ಬಳಿ ಕಳೆದ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ 7 ಕಾರುಗಳು ಜಖಂಗೊಂಡಿವೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಈ ಅಪಘಾತ ಸಂಭವಿಸಿದ್ದು, ಹೊಸದಾಗಿ ಆರಂಭಗೊಂಡ ಚೋಲಗೆರೆ ಟೋಲ್ ಬಳಿ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಈ ವೇಳೆ ಅತಿ ವೇಗವಾಗಿ ಬಂದ ಕಾರೊಂದು ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಮುಂದಿದ್ದ 7 ಕಾರುಗಳು ಜಖಂಗೊಂಡಿವೆ.

ವೀಕೆಂಡ್ ಹಿನ್ನಲೆಯಲ್ಲಿ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿತ್ತು.ವಾಹನಗಳು ನಿಧಾನವಾಗಿ ಸಂಚರಿಸುತ್ತಿತ್ತು. ಸರಣಿ ಅಪಘಾತದಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು ಕೆಲಕಾಲ ಮಾತಿನ ಚಕಮಕಿಯೂ ನಡೆದಿದೆ.

ಸ್ಥಳಕ್ಕೆ ದಾವಿಸಿದ ಆಲೂರು ಠಾಣೆ ಪೊಲೀಸರು ಜಖಂಗೊಂಡ ವಾಹನವನ್ನು ತೆರವುಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಪಘಾತದಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.

RELATED ARTICLES
- Advertisment -
Google search engine

Most Popular