Friday, April 11, 2025
Google search engine

Homeಅಪರಾಧವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ: ಇಬ್ಬರು ಸಾವು

ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ: ಇಬ್ಬರು ಸಾವು

ಬೆಂಗಳೂರು: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯಲ್ಲಿ ಸೋಮವಾರ ತಡರಾತ್ರಿ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಲಾರಿ ಚಾಲಕ ಕುಲದೀಪ್ (42) ಹಾಗೂ ಇನ್ನೊವಾ ಕಾರು ಚಾಲಕ ಜಗದೀಶ್ (40) ಮೃತರು. ಅಪಘಾತದಲ್ಲಿ ಕೆಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಎಂಟಿಸಿ ಬಸ್‌, ಟ್ರಕ್‌ ಹಾಗೂ ಇನೋವಾ ಕಾರಿನ ಮಧ್ಯೆ ಸರಣಿ ಅಪಘಾತವಾಗಿದೆ. ಯಲಹಂಕ ಮೇಲ್ಸೇತುವೆ ಬಳಿ ಅಪಘಾತ ಸಂಭವಿಸಿದೆ.

ಮೇಲ್ಸೇತುವೆ ಬಳಿ ಸಿಮೆಂಟ್ ತುಂಬಿದ ಲಾರಿಯು ವೇಗವಾಗಿ ಬಂದು ಇನೊವಾ ಕಾರಿಗೆ ಡಿಕ್ಕಿ ಹೊಡೆದಿತ್ತು. ರಸ್ತೆಯ ಮಧ್ಯದಲ್ಲಿಯೇ ಕಾರು ಹಾಗೂ ಲಾರಿ ನಿಲ್ಲಿಸಿಕೊಂಡಿದ್ದ ಚಾಲಕರಿಬ್ಬರು ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು. ಇದೇ ವೇಳೆ ವಿಮಾನ ನಿಲ್ದಾಣ ಮಾರ್ಗವಾಗಿ ಬರುತ್ತಿದ್ದ ಬಿಎಂಟಿಸಿ‌ ವೋಲ್ವೊ ಬಸ್ ಟ್ರಕ್‌ಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು‌ ತಿಳಿಸಿದರು.

RELATED ARTICLES
- Advertisment -
Google search engine

Most Popular