ಮಂಡ್ಯ : ಕೇರಳದ ವಯನಾಡಿನಲ್ಲಿ ಮಂಗಳವಾರ ಸಂಭವಿಸಿದ ಸರಣಿ ಭೂಕುಸಿತ ದುರಂತದಲ್ಲಿ ಮಂಡ್ಯ ಮೂಲದ ಇಬ್ಬರು ನಾಪತ್ತೆಯಾಗಿದ್ದರು. ಇದೀಗ ಅಜ್ಜಿ- ಮೊಮ್ಮಗನ ಮೃತ ದೇಹ ಪತ್ತೆಯಾಗಿದೆ .
ಭೂಕುಸಿತಕ್ಕೆ ಒಂದೇ ಕುಟುಂಬದ ಐವರು ನಾಪತ್ತೆಯಾಗಿದ್ದರು. ಅನಿಲ್, ಪತ್ನಿ ಝಾನ್ಸಿರಾಣಿ, ದೇವರಾಜ್ ಗೆ ಗಾಯವಾಗಿತ್ತು. ನಿಹಾಲ್, ಲೀಲಾವತಿ ನಾಪತ್ತೆಯಾಗಿದ್ದ ಅಜ್ಜಿ,ಮೊಮ್ಮಗ ಇದೀಗ ಇಬ್ಬರ ಮೃತ ದೇಹ ಪತ್ತೆ ಪತ್ತೆಯಾಗಿದೆ . ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಬ್ಬರನ್ನು ನೆನೆದು ಕಣ್ಣೀರಿಡುತ್ತಿರುವ ಲೀಲಾವತಿ ಕುಟುಂಬಸ್ಥರು. ಲೀಲಾವತಿ ಮಗಳು ಮಂಜುಳಾ ಹಾಗೂ ಕುಳ್ಳಮ್ಮ ಕುಟುಂಬಸ್ಥರನ್ನು ನೆನೆದು ಕಣ್ಣೀರು ಹಾಕಿದ್ದಾರೆ .
ತಹಶೀಲ್ದಾರ್ ಭೇಟಿ
ಕೇರಳ ವಯನಾಡಿನಲ್ಲಿ ಭೂಕುಸಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತ ಲೀಲಾವತಿ ಕುಟುಂಬಸ್ಥರ ರೋಧನ ಹಿನ್ನೆಲೆ ಲೀಲಾವತಿ ನಿವಾಸಕ್ಕೆ ಕೆಆರ್ ಪೇಟೆ ತಾಲೂಕಿನ ತಹಶೀಲ್ದಾರ್ ನಿಸರ್ಗ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳು ಮತ್ತು ಮೃತ ದೇಹಗಳನ್ನ ಕತ್ತರಘಟ್ಟಕ್ಕೆ ತಲುಪಿಸಲು ತಹಶೀಲ್ದಾರ್ ಮುಂದೆ ಲೀಲಾವತಿ ಕುಟುಂಬಸ್ಥರು ಮನವಿ ಮಾಡಿದರು. ಮೇಲಾಧಿಕಾರಿಗಳಿಗೆ ತಿಳಿಸೋದಾಗಿ ತಹಶೀಲ್ದಾರ್ ನಿಸರ್ಗ ಲೀಲಾವತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು .