Sunday, April 6, 2025
Google search engine

Homeರಾಜ್ಯಸರಣಿ ರೈಲು ಅಪಘಾತ: ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

ಸರಣಿ ರೈಲು ಅಪಘಾತ: ಕೇಂದ್ರದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

ಕೋಲ್ಕತ್ತ: ಸರಣಿ ರೈಲು ಅಪಘಾತಗಳ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಕೇಂದ್ರ ಸರ್ಕಾರದ ಆಡಳಿತದ ವೈಫಲ್ಯವಾಗಿದೆ ಎಂದು ಇಂದು ಮಂಗಳವಾರ ಆರೋಪಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರತಿ ನಿತ್ಯ ರೈಲು ಅಪಘಾತಗಳು ವರದಿಯಾಗುತ್ತಿರುವುದು ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕಿಡಿಕಾರಿದ್ದಾರೆ. ಮತ್ತೊಂದು ರೈಲು ದುರಂತ,. ಜಾರ್ಖಂಡ್ನ ಸೆರೈಕೆಲಾ ಖಾರ್ಸಾ ವಾನ್ ಜಿಲ್ಲೆಯಲ್ಲಿ ಇಂದು ಮಂಗಳವಾರ ಮುಂಬೈ ಹೌರಾ ರೈಲು ಅಪಘಾತಗೀಡಾಗಿದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ರೈಲು ಅಪಘಾತಗಳ ವಿಚಾರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಮಮತಾ, ಸರಣಿ ರೈಲು ಅಪಘಾತಗಳು ಮುಂದುವರಿದಿವೆ. ಇದು ಆಡಳಿತವೇ, ಇನ್ನೆಷ್ಟು ದಿನ ಅಂತಹ ಬೇಜವಾಬ್ದಾರಿತನದ ಆಡಳಿತ ಎಂದು ಮಮತಾ ಕೇಂದ್ರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular