Saturday, April 19, 2025
Google search engine

Homeರಾಜ್ಯಸುದ್ದಿಜಾಲಆಯುಷ್ಮಾನ್ ಭವ ಅಭಿಯಾನದ ಸೇವೆ ಪಡೆದುಕೊಳ್ಳಿ: ವಿಜಯಕುಮಾರಿ

ಆಯುಷ್ಮಾನ್ ಭವ ಅಭಿಯಾನದ ಸೇವೆ ಪಡೆದುಕೊಳ್ಳಿ: ವಿಜಯಕುಮಾರಿ

ರಾಮನಗರ: ಮಾನವ ಅಭಿವೃದ್ಧಿಯಾಗಬೇಕಾದರೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಸರ್ಕಾರವು ಆರೋಗ್ಯ ಸೇವೆಗಳನ್ನು ಎಲ್ಲರಿಗೂ ನೀಡುವ ಮೂಲಕ ಹೆಚ್ಚು ವರ್ಷಗಳ ಕಾಲ ಆರೋಗ್ಯಕರ ಜೀವನ ನಡೆಸಲು ಆಯುಷ್ಮಾನ್ ಭವ ಅಭಿಯಾನವನ್ನು ಪ್ರಾರಂಭಿಸಿದ್ದು ಸಾರ್ವಜನಿಕರು ಆಯುಷ್ಮಾನ್ ಭವ ಅಭಿಯಾನದ ಸೇವೆ ಪಡೆದುಕೊಳ್ಳುವಂತೆ ರಾಮನಗರ ನಗರಸಭೆ ಅಧ್ಯಕ್ಷರಾದ ವಿಜಯಕುಮಾರಿ ಅವರು ತಿಳಿಸಿದರು.

ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಜಿಲ್ಲಾ ಆಸ್ಪತ್ರೆ ರಾಮನಗರ, ನಗರಸಭೆ, ವಿವಿಧ ಅಭಿವೃದ್ಧಿ ಇಲಾಖೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಆಯುಷ್ಮಾನ್ ಭವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಾಂತರಾಜು ಅವರು ಮಾತನಾಡಿ, ಭಾರತದಲ್ಲಿ ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು ಅಡಿಪಾಯ ಹಾಕುವ ಮೂಲಕ ಆರೋಗ್ಯಕರ ಗ್ರಾಮಗಳು ಮತ್ತು ಪಂಚಾಯಿತಿಗಳನ್ನು ರಚಿಸುವ ದೃಷ್ಠಿಯೊಂದಿಗೆ ಆಯುಷ್ಮಾನ್ ಭವ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

ಪ್ರತಿ ಹಳ್ಳಿ ಮತ್ತು ಪಟ್ಟಣವನ್ನು ಆಯುಷ್ಮಾನ್ ಭವ ಅಭಿಯಾನದ ಮೂಲಕ ಆರೋಗ್ಯ ಸೇವೆಗಳ ಸಂಪೂರ್ಣವಾಗಿ ತಲುಪಿಸಿ ಮಾದರಿ ಬದಲಾವಣೆ ತರುವ ಒಂದು ಮಹತ್ವಪೂರ್ಣ ದೂರದೃಷ್ಠಿ ಕಾರ್ಯಕ್ರಮ ಜಿಲ್ಲೆಯಾದ್ಯಂತ ಆಯುಷ್ಮಾನ್ ಭವ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ಆರೋಗ್ಯಕರ ಮತ್ತು ಕ್ಷೇಮ ಕೇಂದ್ರ, ಉಪಕೇಂದ್ರ, ತಾಲ್ಲೂಕು ಮಟ್ಟ, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಕೂಡ ಇಂದು ಕಾರ್ಯಕ್ರಮದ ಶುಭಾರಂಭಗೊಳಿಸಲಾಗಿದೆ ಎಂದು ತಿಳಿಸಿದರು.

ಸೆ.೧೭ ರಿಂದ ಅ.೦೨ ರವರೆಗೆ ನಡೆಯಲಿರುವ ಸೇವಾ ಪಕ್ವಾಡ್ ಸಮಯದಲ್ಲಿ ಯಾವುದೇ ಅಸಮಾನತೆಯಿಲ್ಲದೇ, ಯಾರು ವಂಚಿತರಾಗದಂತೆ ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯ ಸೇವೆಯನ್ನು ನೀಡುವುದು. ಆಯುಷ್ಮಾನ್ ಆಪ್‌ಕೇ-ದ್ವಾರ್ ಮನೆ-ಮನೆಗೆ ಕಾರ್ಡ್ ವಿತರಣೆ ಪ್ರತಿ ಮಂಗಳವಾರ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಮೇಳ ಅಕ್ಟೋಬರ್-೨ ರಂದು ಪ್ರತಿ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲಿ ಆಯುಷ್ಮಾನ್ ಸಭೆ ಆಯೋಜಿಸಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪದ್ಮಾ ಅವರು ಮಾತನಾಡಿ, ಆಯುಷ್ಮಾನ ಭವ ಅಭಿಯಾನದಲ್ಲಿ ಹೊರ ರೋಗಿಗಳಿಗೆ ಉಚಿತ ಔಷಧಿಗಳು ಮತ್ತು ನಿರ್ಣಾಯಕ ಸೇವೆಗಳು, ದೂರವಾಣಿ ಮೂಲಕ ಸಮಾಲೋಚನೆ ಮತ್ತು ಚಿಕಿತ್ಸೆ, ಕ್ಷಯ ಮತ್ತು ಅಸಾಂಕ್ರಾಮಿಕ ತಪಾಸಣೆ ಮತ್ತು ಚಿಕಿತ್ಸೆ ಬುಡಕಟ್ಟು ಪ್ರದೇಶಗಳಲ್ಲಿ ಸಿಕ್ಕರ್‌ಸೆಲ್ ಅನೀಮಿಯ ತಪಾಸಣೆ, ಯೋಗ, ಕ್ಷೇಮ ಶಿಬಿರಗಳ ಸೇವೆ, ಆಯೂಷ್ಮಾನ್ ಭಾರತ್ ಮತ್ತು ಆಯುಷ್ಮಾನ್ ಕಾರ್ಡ್ ವಿತರಣೆ ಸೌಲಭ್ಯಗಳು ದೊರೆಯಲಿದ್ದು ನಾಗರೀಕರು ಸೇವೆಗಳನ್ನು ಪಡೆದುಕೊಂಡು ಆರೋಗ್ಯಯುಕ್ತ ದೀರ್ಘಾವಧಿ ಜೀವನ ನಡೆಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷರಾದ ಸೋಮಶೇಖರ್, ಡಿ.ಎಲ್.ಒ ಡಾ. ಮಂಜುನಾಥ್, ಆರ್.ಸಿ.ಹೆಚ್. ಡಾ. ರಾಜು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್, ಆರೋಗ್ಯ ಮೇಲ್ವಿಚಾರಣಾಧಿಕಾರಿ ವಿನಯ್ ಕುಮಾರ್, ಜಿಲ್ಲಾ ಸಂಯೋಜಕಿ ಡಾ. ಶೃತಿಕನ್ನಂತ್, ಮನಶಾಸ್ತ್ರಜ್ಞ ಚಂದ್ರಶೇಖರ್, ಸಂಯೋಜಕರಾದ ಫಯಾಜ್ ಅಹಮದ್, ನಳಿನಾ, ಎನ್.ಸಿ.ಡಿ ವಿಭಾಗದ ಮೋಹನ್, ಪುರುಷೋತ್ತಮ್, ನೇತ್ರಾವತಿ, ಸುಮಲತಾ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular