Monday, April 7, 2025
Google search engine

Homeರಾಜ್ಯಸುದ್ದಿಜಾಲಸರ್ವರ್ ಸಮಸ್ಯೆ :ಗೃಹಲಕ್ಷ್ಮಿ ಯೋಜನೆ ನೋಂದಣಿಗಾಗಿ ಮಹಿಳೆಯರ ಪರದಾಟ

ಸರ್ವರ್ ಸಮಸ್ಯೆ :ಗೃಹಲಕ್ಷ್ಮಿ ಯೋಜನೆ ನೋಂದಣಿಗಾಗಿ ಮಹಿಳೆಯರ ಪರದಾಟ

ವಿನಯ್ ದೊಡ್ಡಕೊಪ್ಪಲು

ಹೊಸೂರು : ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಸಲು ರಾತ್ರಿ ಹಗಲೆನ್ನದೇ ಸಾರ್ವಜನಿಕರು,ಮಹಿಳೆಯರು ಪರದಾಡುತ್ತಿರುವ ಸ್ಥಿತಿ ಗ್ರಾಮ ಒನ್ ಕೇಂದ್ರದಲ್ಲಿ ಕಂಡುಬರುತ್ತಿದ್ದು ಈ ಬಗ್ಗೆ ಗಮನ ಹರಿಸ ಬೇಕಾದ ತಾಲೂಕು ಆಡಳಿತ ಮೌನಕ್ಕೆ ಶರಣಾಗಿದೆ.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲ್ಲೋಕಿನ ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿ ಇರುವ ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರದಲ್ಲಿ ಬೆಳಿಗ್ಗೆ ೬ರಿಂದ ಸೇವೆ ಒದಗಿಸುತ್ತಿದ್ದು ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಟೋಕನ್ ನೀಡಿ ನಂಬರ್ ಪ್ರಕಾರ ಕಾಯ್ದು ಬೆಳಗಿನಿಂದ ಸಂಜೆವರೆಗೂ ಸೇವೆ ಸಲ್ಲಿಸುತ್ತಿದ್ದು ಆದರೂ ಜನಸಂದಣಿ ಕರಗಿದಂತೆ ಕಾಣುತ್ತಿಲ್ಲ. ತಾವು ಮೊದಲು ಅರ್ಜಿ ಸಲ್ಲಿಸಬೇಕು ಎಂಬ ಕಾರಣಕ್ಕೆ ಈ ಕೇಂದ್ರಗಳಲ್ಲಿ ಮೂರು ದಿನಗಳಿಂದ ಜಡಿಮಳೆಯಲ್ಲಿಯೇ ಮಹಿಳೆಯರು ಗ್ರಾಮ ಒನ್ ಹಾಗೂ ಬಾಪೂಜಿ ಕೇಂದ್ರಗಳತ್ತ ಮುಖಮಾಡಿದ್ದು ನಿತ್ಯ ಸರ್ವರ್ ಸಮಸ್ಯೆ ಹಾಗೂ ವಿಪರೀತ ಜನರನೂಕುನುಗ್ಗಲಿನಿಂದ ಕೇಂದ್ರಗಳ ಅಪರೇಟರ್ ಗಳ ಪಾಡು ಹೇಳತೀರದಾಗಿದೆ. ಆಗಸ್ಟ್ ೧೬ಕ್ಕೆ ಹಣ ಜಮಾವಣೆ ಆಗಬೇಕಾದಲ್ಲಿ ಅಷ್ಟರೊಳಗೆ ನೊಂದಣಿ ಆಗಬೇಕಾಗಿದೆ ಇಲ್ಲವಾದಲ್ಲಿ ನೊಂದಣಿ ಆಗುವವರೆಗಿನ ಹಣ ಬರುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿರುವ ಪರಿಣಾಮವಾಗಿ ಮಹಿಳೆಯರು ತಿಂಡಿ- ಊಟ ಬಿಟ್ಟು ನಿತ್ಯ ಇಲ್ಲಿಗೆ ಅಲೆದಾಡುವಂತಾಗಿದೆ.
ಸರ್ಕಾರವು ಗ್ರಾಪಗಳ ಬಾಪೂಜಿ ಸೇವಾ ಕೇಂದ್ರಗಳಿಗೆ ಅವಕಾಶ ನೀಡಿದ್ದರೂ ಗೃಹಲಕ್ಷ್ಮಿ ನೊಂದಣಿ ಕೆಲಸದ ಜವಬ್ದಾರಿಯನ್ನು ವಹಿಸಿದ್ದು ಇದರಿಂದ ಗ್ರಾಪಂ ಕಚೇರಿ ಕೆಲಸ ಎರಡೂ ಇದೇ ವೇಳೆ ಆಗಬೇಕಿದ್ದು ನೊಂದಣಿಗೆ ತೊಡಕಾಗುತ್ತಿರುವುದು ಇಲ್ಲಿ ಕಾಣಬಹುದಾಗಿದೆ. ಈ ಯೋಜನೆ ಈ ಎರಡು ತಾಲೂಕುಗಳಲ್ಲಿ ಸಮರ್ಪಕವಾಗಿ ಕಾರ್ಯಗತವಾಗಿ ಸರ್ಕಾರದ ಎರಡು ಸಾವಿರ “ಕೈ” ಸೇರಬೇಕಾದರೇ ಇನ್ನಷ್ಟು ನೊಂದಣಿ ಕೇಂದ್ರಗಳನ್ನು ತೆರೆಯಬೇಕು ಇಲ್ಲದಿದ್ದರೆ ಗೃಹಲಕ್ಷ್ಮಿಗಾಗಿ ಮಹಿಳಾ ಲಕ್ಷ್ಮಿಗಳ ಅಲೆದಾಟ ತಪ್ಪದು.

ಗೃಹಲಕ್ಷ್ಮಿ ಯೋಜನೆಗಾಗಿ ನಿಗದಿಪಡಿಸಿದ ದಾಖಲೆಗಳನ್ನು ತಂದು ಅರ್ಜಿಸಲ್ಲಿಸಲು ಹೋದರೇ ಈ ಕೇಂದ್ರಗಳಲ್ಲಿ ಸಮರ್ಪಕ ಸೇವೆ ದೊರೆಯದೇ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಇನ್ನಷ್ಟು ಈ ಕೇಂದ್ರಗಳನ್ನು ತೆರೆದು ಅನುಕೂಲ ಕಲ್ಪಿಸಲಿ.

ರೇಣುಕ ಶ್ರೀನಿವಾಸ್, ಹಳಿಯೂರು ಗ್ರಾ.ಪಂ.ಮಾಜಿ ಸದಸ್ಯರು, ಹೊಸೂರು.

.



RELATED ARTICLES
- Advertisment -
Google search engine

Most Popular