ಗುಂಡ್ಲುಪೇಟೆ: ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ ಏಳು ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆಬ್ಬೇಪುರ ಗ್ರಾಮದಲ್ಲಿ ನಡೆದಿದೆ.
ಕೆಬ್ಬೇಪುರ ಗ್ರಾಮದ ಮಾದಶೆಟ್ಟಿ ಎಂಬುವವರಿಗೆ ಸೇರಿದ ಕುರಿಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ವೇಳೆ ಕುರಿಗಳ ಹಿಂಡು ದಾಳಿ ನಡೆಸಿ ಏಳು ಕುರಿಗಳನ್ನು ಕಚ್ಚಿ ಕೊಂದು ಹಾಕಿವೆ. ಘಟನೆಯಿಂದ ಮಾಲೀಕ ಮಾದಶೆಟ್ಟಿ ಬೆಚ್ಚಿ ಬಿದ್ದಿದ್ದು, ಒಂದೇ ದಿನ ಏಳು ಕುರಿಗಳು ಸಾವನ್ನಪ್ಪಿರುವ ಹಿನ್ನಲೆ ತೀವ್ರ ನಷ್ಟ ಉಂಟಾಗಿದೆ.
ಕೆಬ್ಬೇಪುರ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿನ ಹೆಚ್ಚಿನ ರೀತಿಯಲ್ಲಿದ್ದು, ಆಗಾಗ್ಗೆ ಜನ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಲೇ ಇದೆ. ಆದ್ದರಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಜೊತೆಗೆ ಕುರಿ ಕಳೆದುಕೊಂಡ ರೈತನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕೇಂದು ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.