Saturday, April 12, 2025
Google search engine

Homeರಾಜ್ಯಸುದ್ದಿಜಾಲಮಹಿಳೆಯರ ಸಬಲೀಕರಣಕ್ಕೆ ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿಗೆ

ಮಹಿಳೆಯರ ಸಬಲೀಕರಣಕ್ಕೆ ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿಗೆ

ಅಂತರಾಷ್ಟ್ರೀಯ ವಿಶೇಷ ಚೇತನರ ದಿನದ ಅಂಗವಾಗಿ ಗೋಳೂರಿನಲ್ಲಿ ಕಾನೂನು ಅರಿವು ನೆರವು‌ ಕಾರ್ಯಕ್ರಮ

ನಂಜನಗೂಡು:‌ ಮಹಿಳೆಯರ ಸಬಲೀಕರಣಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸ್ವಾವಲಂಬಿ ಬದುಕಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಕೆ.ಜಿ. ಸತೀಶ ಅವರು ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತ, ತಾಲೂಕು‌ ಪಂಚಾಯಿತಿ, ಹಾಗೂ ಮಹಿಳಾ ಮತ್ತು ಮಕ್ಕಳ‌ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆ ಬಿಳಿಗೆರೆ, ಇವರ ಸಹಯೋಗದಲ್ಲಿ ಬುಧವಾರ ಗೋಳೂರು ಗ್ರಾಮದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಮತ್ತು ಅಂತರಾಷ್ಟ್ರೀಯ ವಿಶೇಷ ಚೇತನರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಗಂಡನಿಂದ ಕಿರುಕುಳ, ದಬ್ಬಾಳಿಕೆ, ದೌರ್ಜನ್ಯದಂತಹ ಅಮಾಯಕ‌ ಕೃತ್ಯಗಳು ಹೆಂಡತಿಯ ಮೇಲೆ ನಡೆದರೆ ಅವರು ನ್ಯಾಯಾಲಯಕ್ಕಾಗಲಿ, ಪೊಲೀಸ್ ಇಲಾಖೆಗಾಗಲಿ ದೂರು ‌ನೋಡಿದರೆ ಅಂತವರ ವಿರುದ್ಧ ಕಲಂ 120 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಮಹಿಳೆಯರ ರಕ್ಷಣೆಗೆ ಉಚಿತ ಕಾನೂನು ನೆರವು ನೀಡಲಾಗುವುದು. ಪುರಷರಂತೆ ಮಹಿಳೆಯರು ಕೂಡ ಸಮಾನರು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆ, ಕಾಯಿದೆಗಳನ್ನು ಜಾರಿಗೊಳಿಸಿವೆ ಎಂದು ತಿಳಿಸಿದರು. ಮಹಿಳೆಯರಂತೆ ಪುರುಷರಿಗೂ ಉಚಿತ ‌ಕಾನೂನು ನೆರವು ನೀಡಲಿದೆ. ಆದರೆ, ಉಚಿತ ಕಾನೂನು ನೆರವು ಪಡೆಯುವ ವ್ಯಕ್ತಿ ಮೂರು ಲಕ್ಷಕ್ಕಿಂತ ಆದಾಯ ಕಡಿಮೆ ಆದಾಯ ಹೊಂದಿರಬೇಕು. ಇದು ಎಸ್ಸಿಎಸ್ಟಿ ಸಮುದಾಯದವರಿಗೂ ಅನ್ವಯಿಸುತ್ತದೆ ಎಂದರು.
.

ಬಾಲ್ಯ ವಿವಾಹ; ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಸಮಾಜದಲ್ಲಿ ಇದೊಂದು ಕೆಟ್ಟ ಆಚರಣೆಯಾಗಿದ್ದು, ಸಮಾಜಕ್ಕೆ ಇದೊಂದು ದೊಡ್ಡ ಪಿಡುಗಾಗಿ ಇವತ್ತಿಗೂ ಕಾಡುತ್ತಿದೆ. ಬಡತನ, ಅನಕ್ಷರಸ್ಥರು, ನಮ್ಮ ಹಳೆ ಸಂಬಂಧ ಅಂತ ಏನೇನೋ‌ ಕಥೆ ಕಟ್ಟಿ ಪ್ರಪಂಚದ ಜ್ಞಾನವೇ ಗೊತ್ತಿಲ್ಲದ ಮಕ್ಕಳಿಗೆ ವಿವಾಹ ಮಾಡುವ ಮೂಲಕ ಅವರ ಭವಿಷ್ಯದ ಉಜ್ವಲ ಬದುಕನ್ನು ನಾಶ ಮಾಡಬೇಡಿ ಎಂದು ಪೋಷಕರಿಗೆ ಸಲಹೆ ನೀಡಿದರು.

ಈ ಬಾಲ್ಯ ವಿವಾಹ ಮಾಡಿಕೊಂಡವರು, ಮಾಡುವವರು, ಪುರೋಹಿತರು, ಛತ್ರ ಕೊಟ್ಟವರು ಸೇರಿದಂತೆ ಇದಕ್ಕೆ ಉತ್ತೇಜನ ನೀಡುವವರಿಗೂ 1 ವರ್ಷ ಜೈಲು ಶಿಕ್ಷೆ ಹಾಗೂ 2 ಲಕ್ಷದಷ್ಟು ದಂಡ ವಿಧಿಸಬಹುದಾಗಿದೆ. ಹಾಗಾಗಿ, ಬಾಲ್ಯ ವಿವಾಹಕ್ಕೆ‌ಯಾರು ಪ್ರೋತ್ಸಾಹ ಮಾಡಬಾರದು.

ವಿಕಲಚೇತನರಿಗೆ ಆತ್ಮ ವಿಶ್ವಾಸ ಮೂಡಿಸಬೇಕು: ವಿಕಲಚೇತನರನ್ನು ಯಾವುದೇ ಕಾರಣಕ್ಕೂ ಕೀಳಾಗಿ‌ ಕಾಣಬಾರದು, ಅವರಲ್ಲಿಯೂ ಸಾಧನೆ ಮಾಡುವ ಎಲ್ಲ ರೀತಿಯ ಲಕ್ಷಣಗಳು, ಛಲ ಇದ್ದೇ ಇರುತ್ತದೆ. ಅವರಿಗೆ ಪ್ರೋತ್ಸಾಹ ಹಾಗೂ ಆತ್ಮ ವಿಶ್ವಾಸ ಮೂಡಿಸದರೆ ಸಾಕು ನಮ್ಮಂತೆಯೇ ಅವರು ಕೂಡ ಸಾಧನೆ ಮಾಡಬಲ್ಲರು‌ ಎಂದರು.

ಅಪ್ಪಿತಪ್ಪಿ ಅವರನ್ನು ಬೆದರಿಸುವುದು, ಅವಮಾನ ಮಾಡುವುದು, ಬಲಪ್ರಯೋಗ ಮಾಡುವುದು, ಅವರ ಸವಲತ್ತುಗಳನ್ನು ಮೋಸದಿಂದ ಬೇರೆಯವರು ಪಡೆದುಕೊಳ್ಳುವುದು ಜಾಗೂ ತೊಂದರೆ ಕೊಡುವುದನ್ನು ಮಾಡಿದರೆ ಅಂಗವಿಕಲ‌ ಹಕ್ಕು ಅಧಿನಿಯಮದ ಪ್ರಕಾರ ಕನಿಷ್ಟ 6 ತಿಂಗಳಿಂದ 5 ವರ್ಚದವೃಗೆ‌ ಶಿಕ್ಷೆ ವಿಧಿಸಬಹುದಾಗಿದೆ ಎಂದು ಎಚ್ಚರಿಸಿದರು.

ಮಹಿಳಾ‌ ದೌರ್ಜನ್ಯ ಮತ್ತು ಮಹಿಳೆಯರಿಗಾಗಿ ವಿವಿಧ ಕಾನೂನುಗಳು ಎಂಬ ವಿಷಯದ ಬಗ್ಗೆ ಆರ್. ಅಶ್ವಿನ್, ಬಾಲ್ಯ ವಿವಾಹ ಹಾಗೂ ಪೋಕ್ಸೋ ಕಾಯಿದೆ ಕುರಿತು ಸಿಡಿಪಿಒ ಕೆ.ಎಸ್. ಭವ್ಯಶ್ರೀ, ಮಹಿಳಾ ಆರೋಗ್ಯ ಹಾಗೂ ಹದಿಹರೆಯದ ಕಿಶೋರಿಯರ ಆರೋಗ್ಯದ ಕುರಿತು ಪ್ರಬಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಜ್ಜನ ರಾವ್ ಬೋಬಡೆ, ವಿಶೇಷ ಚೇತನರಿಗೆ ಇಲಾಖೆಯ ಸೌಲಭ್ಯಗಳ ಕುರಿತು ಪಿ. ರಂಗಸ್ವಾಮಿ ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಹನಿಯಂಬಳ್ಳಿ ಮಹದೇವಸ್ವಾಮಿ, ಉಪಾಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಶಿ ಎಂ.ಕೆ.ಬಸವಣ್ಣ, ಡಾ. ಅರ್ಚನಾ ಮಾತನಾಡಿದರು. ವಕೀಲರಾದ ಮುತ್ತುರಾಜು, ಸರಸ್ವತಿ, ಗ್ರಾ.ಪಂ.ಸದಸ್ಯ ಮುದ್ದುಮಾದಶೆಟ್ಟಿ, ಮುಖಂಡರಾದ ನಂಜಪ್ಪ, ಮಹದೇವು, ಸತೀಶ, ರೇಣುಕಾ ಸೇರಿದಂತೆ ಇತರರು ಇದ್ದರು.

ಗಮನ ಸೆಳೆದ ಪೌಷ್ಠಿಕ ಆಹಾರಗಳು: ಪೌಷ್ಟಿಕ ಆಹಾರ ಎಲ್ಲರ ಅಗತ್ಯತೆಯಾಗಿದೆ. ಪ್ರತಿಯೊಬ್ಬರು ಆರೋಗ್ಯದಿಂದಿರಲು, ರೋಗಗಳನ್ನು ತಡೆಗಟ್ಟಲು ಜೀವನದಲ್ಲಿ ಪ್ರಗತಿ ಸಾಧಿಸಲು ಪೌಷ್ಟಿಕ ಆಹಾರದ ಅಗತ್ಯತೆ ಬಹಳವಾಗಿದೆ. ಗರ್ಭಿಣಿ ಮಹಿಳೆಯು ತನ್ನ ಆರೋಗ್ಯ ಕಾಪಡಿಕೊಳ್ಳುವುದಲ್ಲದೆ ಗರ್ಭ ಶಿಶು (ಫೆತುಸ್) ಬೆಳವಣಿಗೆಗೂ ಗಮನಕೊಡಬೇಕಾಗುತ್ತದೆ. . ಗರ್ಭಧಾರಣೆಯ ಪ್ರಾರಂಭದ ದಿನಗಳಲ್ಲಿ ಮಕ್ಕಳು, ಗರ್ಭೀಣಿಯರು, ಬಾಣಂತಿಯರು ಆಹಾರದ ಗುಣಮಟ್ಟದ ಬಗ್ಗೆ ವಿಶೇಷ ಗಮನಹರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜನರಿಗೆ ಅರಿವು ಮೂಡಿಸುವ ಸಲುವಾಗಿ ಸೊಪ್ಪು, ತರಕಾರಿ, ಮೊಳಕೆ ಕಾಳು, ಹಣ್ಣು ಜ್ಯೂಸ್, ಸೇರಿದಂತೆ ಇತರೆ ಪದಾರ್ಥಗಳನ್ನು ಪ್ರದರ್ಶನಕ್ಕಿಟ್ಟಿದ್ದು ಎಲ್ಲರ ಗಮನ ಸೆಳೆಯಿತು.

RELATED ARTICLES
- Advertisment -
Google search engine

Most Popular