Friday, April 11, 2025
Google search engine

Homeಬ್ರೇಕಿಂಗ್ ನ್ಯೂಸ್ಲೈಂಗಿಕ ದೌರ್ಜನ್ಯ ಪ್ರಕರಣ: ಹೆಚ್​ಡಿ ರೇವಣ್ಣ ಬಂಧಿಸಿದ ಎಸ್​ಐಟಿ

ಲೈಂಗಿಕ ದೌರ್ಜನ್ಯ ಪ್ರಕರಣ: ಹೆಚ್​ಡಿ ರೇವಣ್ಣ ಬಂಧಿಸಿದ ಎಸ್​ಐಟಿ

ಬೆಂಗಳೂರು: ಪ್ರಕರಣವನ್ನು ಮುಚ್ಚಿ ಹಾಕಲು ಸಂತ್ರಸ್ಥೆಯ ಮಹಿಳೆಯನ್ನು ಅಪಹರಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೆಚ್ ಡಿ ರೇವಣ್ಣಗೆ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಹೆಚ್ ಡಿ ರೇವಣ್ಣ ಅವರನ್ನು ತಂದೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರ ಪದ್ಮನಾಭನಗರ ನಿವಾಸದಲ್ಲಿ ಅವರನನ್ನು ಬಂಧಿಸಿದ್ದಾರೆ.

ರೇವಣ್ಣ ಉಳಿದುಕೊಂಡಿರುವ ಬಗ್ಗೆ ಎಸ್‌ಐಟಿ ಗೆ ಮಾಹಿತಿ ಇತ್ತು. ಹೀಗಾಗಿ ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ನೇರವಾಗಿ ದೇವೇಗೌಡರ ನಿವಾಸಕ್ಕೆ ಎಸ್‌ಐಟಿ ತಂಡ ಬಂದಿತ್ತು. ಕೆ.ಆರ್.ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬಳಿಕ ರೇವಣ್ಣಗಾಗಿ ಎಸ್‌ಐಟಿ ತೀವ್ರ ಹುಡುಕಾಟ ನಡೆಸುತ್ತಿತ್ತು. ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದರೂ ಇದುವರೆಗೆ ರೇವಣ್ಣ ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗಿರಲಿಲ್ಲ. ನಿನ್ನೆ ಮೈಸೂರಿನಲ್ಲಿ ಕೂದಲೆಳೆಯ ಅಂತರದಲ್ಲಿ ಮಿಸ್ ಆಗಿದ್ದ ಹೆಚ್.ಡಿ.ರೇವಣ್ಣ ಬೆಳಗ್ಗೆಯಿಂದ ತಲೆಮರೆಸಿಕೊಂಡಿದ್ದರು. ಕೆ.ಆರ್.ನಗರ ಎಫ್‌ಐಆರ್ ವಿಷಯ ತಿಳಿದ ಕ್ಷಣದಿಂದ ತಲೆಮರೆಸಿಕೊಂಡಿದ್ದರು.

ಇಂದು ಜಾಮೀನು ನಿರಾಕರಣೆಯಾದ ಬೆನ್ನಲ್ಲೇ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿರುವ ಖಚಿತ ಮಾಹಿತಿ ಪಡೆದ ಎಸ್‌ಐಟಿ ತಂಡ ನೇರವಾಗಿ ಬಂದು ಬಂಧಿಸಿದೆ. ಇನ್ನೊಂದೆಡೆ ಜಾಮೀನು ಅರ್ಜಿ ವಿಚಾರಣೆ ಮೇ.೬ ರಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆಯಲಿದೆ. ಈಗ ಇವರ ಬಂಧನವಾಗಿದ್ದು, ಸದ್ಯ ಎಸ್‌ಐಟಿ ಇಂದು ವಿಚಾರಣೆಗೆ ತೆಗದುಕೊಳ್ಳಲಿದೆ.

RELATED ARTICLES
- Advertisment -
Google search engine

Most Popular