ಬೆಂಗಳೂರು: ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್ ಅವರನ್ನು ಕರ್ನಾಟಕ ಸರಕಾರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗೆ ನೇಮಿಸಿ ಆದೇಶವನ್ನು ಹೊರಡಿಸಿದೆ.
ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ಆದೇಶದನ್ವಯ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧೀನ ಕಾರ್ಯದರ್ಶಿ ಆದಿನಾರಾಯಣ ಅವರು ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್ ಅವರನ್ನು ಅಡ್ವೊಕೇಟ್ ಜನರಲ್ ಹುದ್ದೆಗೆ ನೇಮಿಸಿ ಆದೇಶವನ್ನು ಹೊರಡಿಸಿದ್ದಾರೆ.
ದಿವಂಗತ ಕೆ. ಅಬ್ದುಲ್ ರಹಿಮಾನ್ ಮತ್ತು ನೆಬಿಸಾ ದಂಪತಿಯ ಪುತ್ರನಾದ ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್, ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ. ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಅವರ ಬಳಿ ವಕೀಲರಾಗಿ ಅಭ್ಯಾಸ ಮಾಡಿದ್ದ ಶಾಹುಲ್ ಹಮೀದ್ ರೆಹಮಾನ್ ಹಿರಿಯ ವಕೀಲರಾಗಿದ್ದಾರೆ.