ಗುಂಡ್ಲುಪೇಟೆ: ಪಟ್ಣದ ಕಿತ್ತೂರು ರಾಣಿ ಚೆಬ್ಬಮ್ಮ ರಸ್ತೆಯಲ್ಲಿರುವ ಶ್ರೀ ರಾಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೂರನೇ ಆಷಾಢ ಶುಕ್ರವಾರದ ಪ್ರಯುಕ್ತ ಪಾರ್ವತಮ್ಮನವರಿಗೆ ಶಾಖಂಬರಿ ಅಲಂಕಾರ ಮಾಡಲಾಯಿತು.
ಪಾರ್ವತಮ್ಮನವರಿಗೆ ಮೂರ್ತಿಗೆ ವಿವಿಧ ಬಗೆ ಅಭಿಷೇಕ ಹಾಗು ನಾನಾ ತರಕಾರಿಗಳಿಂದ ದೇವಸ್ಥಾನದ ಅರ್ಚಕ ಶಂಕರ ನಾರಾಯಣ ಜೋಯಿಸಿ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದರು. ಈ ವೇಳೆ ವಿವಿಧ ತರಕಾರಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಪಾರ್ವತಮ್ಮನವರಿಗೆ ಮೂರ್ತಿಯನ್ನು ಭಕ್ತರು ಕಣ್ತುಂಬಿಕೊಂಡರು.
ಇನ್ನು ಆಷಾಢ ಶುಕ್ರವಾರದ ಪ್ರಯುಕ್ತ ಅಧಿಕ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು.