Saturday, April 19, 2025
Google search engine

HomeUncategorizedರಾಷ್ಟ್ರೀಯಶಂಕರ್ ಮಹಾದೇವನ್​, ಜಾಕಿರ್ ಹುಸೇನ್​ ಅವರ ‘ಶಕ್ತಿ ಬ್ಯಾಂಡ್’ ಗೆ ಗ್ರ್ಯಾಮಿ ಪ್ರಶಸ್ತಿ: ರಿಕ್ಕಿ ಕೇಜ್...

ಶಂಕರ್ ಮಹಾದೇವನ್​, ಜಾಕಿರ್ ಹುಸೇನ್​ ಅವರ ‘ಶಕ್ತಿ ಬ್ಯಾಂಡ್’ ಗೆ ಗ್ರ್ಯಾಮಿ ಪ್ರಶಸ್ತಿ: ರಿಕ್ಕಿ ಕೇಜ್ ಅಭಿನಂದನೆ

ಲಾಸ್ ಏಂಜಲೀಸ್ (ಅಮೆರಿಕ): ಹಾಡುಗಾರ ಶಂಕರ್ ಮಹಾದೇವನ್​ ಹಾಗೂ ಜಾಕಿರ್ ಹುಸೇನ್​ ಅವರ ‘ಶಕ್ತಿ ಬ್ಯಾಂಡ್’ ಗೆ ಈ ಬಾರಿಯ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ದೊರಕಿದೆ.

‘ದಿಸ್ ಮೂಮೆಂಟ್’ ಹೆಸರಿನ ಆಲ್ಬಂಗೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ಪ್ರಶಸ್ತಿ ಬಂದಿದೆ.

ಭಾರತೀಯ ಸಂಗೀತ ಕಲಾವಿದರಾದ ಶಂಕರ್ ಮಹಾದೇವನ್ ಮತ್ತು ಜಾಕಿರ್ ಹುಸೇನ್​ಗೆ ಈ ಬಾರಿಯ ಗ್ರ್ಯಾಮಿ ಅವಾರ್ಡ್​ ಒಲಿದು ಬಂತು. ಲಾಸ್ ಏಂಜಲೀಸ್ ​ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶ್ವದೆಲ್ಲೆಡೆಯ ಸಂಗೀತ ಕಲಾವಿದರ ಸಮ್ಮುಖದಲ್ಲಿ ಭಾರತದ ಸಂಗೀತ ದಿಗ್ಗಜರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

8 ಜನ ಈ ಹಾಡನ್ನು ಸಂಯೋಜಿಸಿದ್ದಾರೆ. ಜಾನ್ ಮೆಕ್ಲಾಫ್ಲಿನ್ (ಗಿಟಾರ್), ಜಾಕಿರ್ ಹುಸೇನ್ (ತಬಲಾ), ಶಂಕರ್ ಮಹದೇವನ್ (ಗಾಯಕ), ವಿ. ಸೆಲ್ವಗಣೇಶ್ (ತಾಳವಾದ್ಯ), ಗಣೇಶ್ ರಾಜಗೋಪಾಲನ್ (ಪಿಟೀಲು ವಾದಕ) ‘ಶಕ್ತಿ ಬಾಂಡ್​​​’ ಅಲ್ಬಂಗಾಗಿ ಶ್ರಮಿಸಿದ್ದಾರೆ.

ರಿಕ್ಕಿ ಕೇಜ್ ಅಭಿನಂದನೆ

ಶಂಕರ್ ಮಹದೇವನ್ ಅವರು ಗ್ರ್ಯಾಮಿ ವೇದಿಕೆ ಮೇಲೆ ವಿನ್ನಿಂಗ್ ಸ್ಪೀಚ್ ನೀಡಿದ್ದಾರೆ. ಪತ್ನಿಗೆ ಅವರು ಧನ್ಯವಾದ ಹೇಳಿದ್ದಾರೆ. ‘ನನ್ನ ಮಿತ್ರರರು, ದೇವರು, ಗೆಳೆಯರು ಹಾಗೂ ಭಾರತಕ್ಕೆ ಧನ್ಯವಾದ. ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ನಾನು ಈ ಅವಾರ್ಡ್​ನ ನನ್ನ ಪತ್ನಿಗೆ  ಸಮರ್ಪಿಸುತ್ತೇನೆ. ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಅವರು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular