Monday, April 21, 2025
Google search engine

Homeರಾಜ್ಯಸುದ್ದಿಜಾಲಶಂಕರ್ ನಾಗ್ ನಾಡು ಕಂಡ ಅದ್ಭುತ ಪ್ರತಿಭೆ: ಸುರೇಶ್ ಎನ್ ಋಗ್ವೇದಿ

ಶಂಕರ್ ನಾಗ್ ನಾಡು ಕಂಡ ಅದ್ಭುತ ಪ್ರತಿಭೆ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ : ಶಂಕರ್ ನಾಗ್ ನಾಡು ಕಂಡ ಅದ್ಭುತ ಪ್ರತಿಭೆ . ಕನ್ನಡ ಚಿತ್ರರಂಗದ ದೂರದೃಷ್ಟಿಯ ಚಿಂತಕ .ಜ್ಞಾನಿ . ಕತೃತ್ವ ಶಕ್ತಿ ಹೊಂದಿದ್ದ ಶಂಕರ್ ನಾಗ್ ಕೋಟಿ ಕೋಟಿ ಕನ್ನಡಿಗರಲ್ಲಿ ಸದಾ ಕಾಲ ಇರುವ ನಟ ಎಂದು ಸಂಸ್ಕೃತಿ ಚಿಂತಕ , ಹಾಗು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ರವರು ತಿಳಿಸಿದರು.

ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಋಗ್ವೇದಿ ಯೂಥ್ ಕ್ಲಬ್ ಮತ್ತು ಜಿಲ್ಲಾ ಯುವ ಸಂಘಟನಾ ಒಕ್ಕೂಟ ಹಮ್ಮಿಕೊಂಡಿದ್ದ ಶಂಕರ್ ನಾಗ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶಂಕರ್ ನಾಗ್ ನಟರಾಗಿ ನಿರ್ದೇಶಕರಾಗಿ ,ನಿರ್ಮಾಪಕರಾಗಿ, ರಂಗಭೂಮಿ ನಟರಾಗಿ ಅದ್ಭುತ ಪೂರ್ವ ಅಭಿನಯದ ಮೂಲಕ ಮನಸೂರಗೊಂಡ ನಾಯಕರಾಗಿದ್ದರು. ಅವರ ಚಿತ್ರಗಳು ಕನ್ನಡದ ಹೊಸ ಚಿಂತನೆ ಹಾಗೂ ಸಮಗ್ರ ಬದಲಾವಣೆಯ ಸಂಕೇತವಾಗಿತ್ತು. ಬೆಂಗಳೂರಿಗೆ ಮೆಟ್ರೋ ಪರಿಕಲ್ಪನೆಯ ಹರಿಕಾರ. ಮೆಟ್ರೋ ಗಾಗಿ ಅವರ ಚಿಂತನೆ ಅಪಾರ .ಅವರ ಹೆಸರನ್ನು ಶಾಶ್ವತವಾಗಿ ಇಡಬೇಕು. ಆಟೋ ಚಾಲಕರಿಗೆ ಅಪಾರ ಗೌರವ ತಂದುಕೊಟ್ಟ ಶಂಕರ್ ನಾಗ್ ಆಟೋ ಚಾಲಕರ ಮಹಾನ್ ರತ್ನರಾಗಿದ್ದಾರೆ ಪ್ರತಿ ಹಳ್ಳಿಯ ಆಟೋಗಳಲ್ಲಿ ಶಂಕರ್ ನಾಗ್ ಚಿತ್ರವನ್ನು ಕಾಣಬಹುದಾಗಿದೆ. ಸರಳ ಸಜ್ಜನಿಕೆಯ ಮಾನವ ಪ್ರೀತಿಯ ನಟರಾಗಿದ್ದು ಸಾಮಾಜಿಕ ಕಳಕಳಿ ಹೊಂದಿದ್ದ ನಟರಾಗಿದ್ದ ಶಂಕರ್ ನಾಗ್ ನಮ್ಮೆಲ್ಲರಿಗೂ ಸದಾ ಕಾಲ ಆದರ್ಶವಾಗಿದ್ದಾರೆ ಎಂದರು.

ಉದ್ಘಾಟನೆಯನ್ನು ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡ ಮೊಳೆ ನೆಲೆವೇರಿಸಿದರು. ಶಂಕರ್ ನಾಗ್ ಕನ್ನಡದ ಶ್ರೇಷ್ಠ ನಟ. ಶಂಕರ್ ನಾಗ್ ರವರ ಪರಿಕಲ್ಪನೆಗಳು ಸಾವಿರಾರು. ಯೋಜನೆಯ ಮೂಲಕ ತಮ್ಮ ಎಲ್ಲಾ ಕಲ್ಪನೆಗಳನ್ನು ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ಅರ್ಪಿಸಿದ ಮಹಾನ್ ನಟ. ಕನ್ನಡ ಚಿತ್ರರಂಗಕ್ಕೆ ಅವರ ಹೆಸರು ಶಾಶ್ವತವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ವಾಮಿ, ಶ್ರಾವ್ಯ ಋಗ್ವೇದಿ, ವಿನಯ್, ಮಹದೇವ, ಮಂಜು, ಕಿರಣ , ಮುಂತಾದವರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular