Monday, April 21, 2025
Google search engine

Homeಸ್ಥಳೀಯಕನ್ನಡ ಭಾಷೆ ಹಾಗೂ ಕನ್ನಡ ಚಿತ್ರರಂಗದ ಪ್ರಗತಿಗೆ ಶಂಕರ್ ನಾಗ್ ಕೊಡುಗೆ ಅಪಾರ : ಎಂ...

ಕನ್ನಡ ಭಾಷೆ ಹಾಗೂ ಕನ್ನಡ ಚಿತ್ರರಂಗದ ಪ್ರಗತಿಗೆ ಶಂಕರ್ ನಾಗ್ ಕೊಡುಗೆ ಅಪಾರ : ಎಂ ಕೆ ಸೋಮಶೇಖರ್

ಮೈಸೂರು: ನಜರಾಬಾದ್ ಪೊಲೀಸ್ ಸ್ಟೇಷನ್ ವೃತ್ತದಲ್ಲಿ ಕನ್ನಡದ ಪ್ರಖ್ಯಾತ ನಟ ಶಂಕರ್ ನಾಗ್ ರವರ ಜನ್ಮದಿನಾಚರಣೆಯನ್ನು ಹೊಯ್ಸಳ ಟ್ರಸ್ಟ್ ಹಾಗೂ ಶ್ರೀ ಭುವನೇಶ್ವರಿ ಆಟೋ ನಿಲ್ದಾಣದ ವತಿಯಿಂದ ಪುಷ್ಪಾರ್ಚನೆ ಮಾಡಿ ಚಾಲಕರುಗಳಿಗೆ ಸಮವಸ್ತ್ರ ವಿತರಿಸಿ ಅರ್ಥಪೂರ್ಣವಾಗಿ ಆಚರಿಸಿದರು. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ರವರು ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಶಂಕರ್ ನಾಗ್ ಒಬ್ಬ ಕನ್ನಡದ ಪ್ರತಿಭಾನ್ವಿತ ಮೇರು ನಟ,ಕನ್ನಡ ಚಿತ್ರರಂಗದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ ಜನ ಮೆಚ್ಚಿದ ಕಲಾವಿದ.ಇವತ್ತಿನ ದಿನಗಳಲ್ಲಿ ಹೇಗೆ ಡಾ.ಪುನೀತ್ ರಾಜಕುಮಾರ್ ಅವರನ್ನು ಕೋಟ್ಯಾಂತರ ಅಭಿಮಾನಿಗಳು ಕಳೆದುಕೊಂಡು ಅವರ ನೆನಪಿನಲ್ಲಿಯೇ ದಿನಗಳನ್ನು ಕಳೆಯುತ್ತಿದ್ದಾರೆಯೋ ಅದೇ ರೀತಿ ಅಂದಿನ ಕಾಲಘಟ್ಟದಲ್ಲಿ ಕನ್ನಡ ಚಿತ್ರರಂಗದ ಬಹು ಎತ್ತರಕ್ಕೆ ಬೆಳೆದಿದ್ದ ಶಂಕರ್ ನಾಗ್ ರವರು ಅಸಂಖ್ಯಾತ ಅಭಿಮಾನಿಗಳಿಗೆ ಆರಾಧ್ಯ ಧೈವರಾಗಿದ್ದರು.ದುರಾದೃಷ್ಟವಸತ್ ಅವರು ಕೂಡ ಕಾಲವಾದರು.ಆಗಾಗಿ ಇವತ್ತಿಗೂ ಕೂಡ ಅಭಿಮಾನಿಗಳ ಕಣ್ಣಮುಂದೆ ಇದ್ದಾರೆ.

ಕನ್ನಡ ಭಾಷೆಯ ಅಭಿವೃದ್ಧಿಗೆ ಹಾಗೂ ಕನ್ನಡ ಚಿತ್ರರಂಗದ ಪ್ರಗತಿಗೆ ಕಂಕಣ ಬದ್ಧರಾಗಿದ್ದವರು.ಆಟೋ ರಾಜ ಚಿತ್ರದ ಮೂಲಕ ರಾಜ್ಯದ ಎಲ್ಲಾ ಆಟೋ ಚಾಲಕರಲ್ಲಿ ಇವತ್ತಿಗೂ ಕೂಡ ಪ್ರತಾಃಸ್ಮರಣೀಯರಾಗಿದ್ದಾರೆ.ಇವತ್ತಿಗೂ ಕೂಡ ಸಾಕಷ್ಟು ಆಟೋಗಳಲ್ಲಿ ಅವರ ಭಾವಚಿತ್ರವನ್ನು ಅಳವಡಿಸಿಕೊಂಡಿದ್ದಾರೆ.ಆ ಮುಖೇನ ಇವತ್ತಿನ ಜನಮಾನಸಕ್ಕು ಅವರ ನೆನಪನ್ನು ಸ್ಮರಿಸುವಂತ ಕೆಲಸವಾಗುತ್ತಿದೆ.ಶಂಕರ್ ನಾಗ್ ರವರ ಸಾಮಾಜಿಕ ಕಳಕಳಿ ಬದ್ಧತೆ,ರಂಗಭೂಮಿಯ ನಂಟು ಅವರು ಕಾಲವಾಗಿ ಇಷ್ಟು ವರ್ಷವಾದರೂ ಸಹ ಎಲ್ಲರ ಮನಸಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ.ಅಂತ ಮಹಾನುಭಾವರ ಜನ್ಮದಿನವನ್ನು ಕನ್ನಡ ರಾಜ್ಯೋತ್ಸವದ ಮಾಸದಲ್ಲಿ ಆಚರಣೆ ಮಾಡುತ್ತಿರುವುದು ಅತ್ಯಂತ ಅರ್ಥಪೂರ್ಣ ಎಂದು ತಿಳಿಸಿದರು.

ಪುಷ್ಪಾರ್ಚನೆ ಮಾಡುವ ಮೂಲಕ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾಂಗ್ರೆಸ್ ಮುಖಂಡ ಪಳನಿ ರಾಜೇಶ್ ಕೆಪಿಸಿಸಿ ಸದಸ್ಯ ನಜರಾಬಾದ್ ನಟರಾಜ್,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸೋಮಶೇಖರ್, ರವಿ ನಾಯಕ್,ವರುಣಾ ಮಹದೇವ್,ಡಾ ಸುಶ್ರುತ್ ಗೌಡ,ಉದ್ಯಮಿಗಳಾದ ಜೆಟ್ಟೌಹುಂಡಿ ಗೋಪಾಲ್,ಸುನೀಲ್ ನಾರಯಣ್,ಜೆ.ಜೆ.ಆನಂದ್,ಆಟೋ ಚಾಲಕರ ಸಂಘದ ಅಧ್ಯಕ್ಷರಾದ ಸ್ವಾಮಿ, ಲಕ್ಷ್ಮೀನಾರಯಣ್,ಅರಸು,ತಮ್ಮಯ್ಯಾ,ಲೋಕೇಶ್ ಮತ್ತಿತರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular