Monday, April 21, 2025
Google search engine

Homeರಾಜ್ಯಶಾಂತವೇರಿ ಗೋಪಾಲಗೌಡರು ಅತ್ಯಂತ ಆದರ್ಶ ವ್ಯಕ್ತಿ: ಚಾ ರಂ ಶ್ರೀನಿವಾಸ ಗೌಡ

ಶಾಂತವೇರಿ ಗೋಪಾಲಗೌಡರು ಅತ್ಯಂತ ಆದರ್ಶ ವ್ಯಕ್ತಿ: ಚಾ ರಂ ಶ್ರೀನಿವಾಸ ಗೌಡ

ಚಾಮರಾಜನಗರ: ಶಾಂತವೇರಿ ಗೋಪಾಲಗೌಡರು ಅತ್ಯಂತ ಆದರ್ಶ ವ್ಯಕ್ತಿ. ಸತ್ಯ, ನಿಷ್ಠೆ ,ಪ್ರಾಮಾಣಿಕತೆಯ ಪ್ರತಿರೂಪ ಎಂದು ಅಖಿಲ ಕರ್ನಾಟಕ ಕನ್ನಡ ಮಹಾಸಭಾ ರಾಜ್ಯಾಧ್ಯಕ್ಷ  ಚಾ ರಂ ಶ್ರೀನಿವಾಸ ಗೌಡ ತಿಳಿಸಿದರು.

ಅವರು ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಶಾಂತವೇರಿ ಗೋಪಾಲಗೌಡರ ಜೀವನ ಮತ್ತು ಸಾಧನೆಯ ಬಗ್ಗೆ ಮಾತನಾಡುತ್ತಾ ಮಲೆನಾಡಿನ ಪ್ರದೇಶದ ಶಾಂತವೇರಿ ಗೋಪಾಲಗೌಡರು ಮೂರು ಬಾರಿ ಶಾಸಕರಾಗಿದ್ದು ,ಸಮಾಜವಾದಿ ಸಿದ್ಧಾಂತದ ಮೂಲಕ ಹೋರಾಟ ನಡೆಸಿದವರು .ಅತ್ಯಂತ ಪ್ರಾಮಾಣಿಕ ರಾಜಕೀಯ ಜೀವನ ಮಾಡಿದ ಶಾಂತವೇರಿ ಗೋಪಾಲಗೌಡರು ಸರ್ವರಿಗೂ ಆದರ್ಶವಾಗಿದ್ದಾರೆ. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಇವರ ಪಾತ್ರ  ಮರೆಯಲಾಗದು. ಶಾಸನಸಭೆಯಲ್ಲಿ ಮಹತ್ವಪೂರ್ಣ ಚರ್ಚೆಗಳನ್ನು ಮಾಡುವ ಮೂಲಕ ರೈತರ, ಕಾರ್ಮಿಕರ, ಬಡವರ, ಮಹಿಳೆಯರ ಮತ್ತು ಅಭಿವೃದ್ಧಿಯ ಬಗ್ಗೆ ಅತ್ಯಂತ ಕಳಕಳಿಯ ವಿಚಾರಧಾರೆಗಳನ್ನು ನೀಡಿದವರು.ಸತ್ಯದ ನಿಜ ಸ್ವರೂಪದ ಪ್ರತಿರೂಪವೇ ಶಾಂತವೇರಿ ಗೋಪಾಲಗೌಡರು. ಇವರ ಹೆಸರಿನಲ್ಲಿ ರಾಜ್ಯದ ಅನೇಕ ಕಡೆ ವೃತ್ತಗಳು, ಕಟ್ಟಡಗಳು ಇವೆ. ಐವತ್ತು 60ರ ದಶಕದ ಇವರ ಕಾರ್ಯ ಸಾಧನೆ ಇಂದಿಗೂ ಜನರ ಹೃದಯದಲ್ಲಿ ನೆಲೆಸಿದೆ ಎಂದರು.

ಸಭೆಯಲ್ಲಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್  ಎನ್ ಋಗ್ವೇದಿ, ಅತ್ಯಂತ ಬಡತನದಲ್ಲಿ ಬೆಳೆದ ಗೋಪಾಲಗೌಡರು ಬಹಳ ಬುದ್ಧಿವಂತರು ವಿವೇಚನಾ ಶಕ್ತಿಯುಳ್ಳವರು. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದ ಮಹಾನ್ ವ್ಯಕ್ತಿ.  ಕೆಲವೇ ಕೆಲವು ಜೊತೆ ವಸ್ತ್ರಗಳನ್ನು ಹೊಂದಿದ್ದ ಇವರ ಜೀವನ ಆದರ್ಶವಾದದ್ದು. ಸ್ವಾತಂತ್ರ್ಯ ಚಳುವಳಿಯ ನಂತರ ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಅಪಾರ ಪಾತ್ರವನ್ನು ವಹಿಸಿ ಕನ್ನಡ ಏಕೀಕರಣದ ಮೂಲಕ ಕನ್ನಡಿಗರಿಗೆ ಶಾಶ್ವತವಾದ ರಾಜ್ಯ ನಿರ್ಮಾಣ ಮಾಡಿದವರಲ್ಲಿ ಗೋಪಾಲಗೌಡರು ಒಬ್ಬರು. ಕನ್ನಡ ಸಂಘಟನೆಗಳು ಮರೆತುಹೋಗಿರುವ ಆದರ್ಶ ವ್ಯಕ್ತಿಗಳ ನೆನಪಿನ ಜೀವನ ಸಾಧನೆಯ ಕಾರ್ಯಕ್ರಮಗಳನ್ನು ರೂಪಿಸಿ ಯುವ ಪೀಳಿಗೆ ಅವರ ಬಗ್ಗೆ ತಿಳಿಯುವ ಮತ್ತು ಅಧ್ಯಯನ ಮಾಡುವ ಕುತೂಹಲ ಹೆಚ್ಚಿಸುವ ಅವರ ಜೀವಂತ ಘಟನೆಗಳು ಎಲ್ಲರಿಗೂ ಮಾದರಿಯಾದದು ಎಂದರು. ಕನ್ನಡಕ್ಕಾಗಿ ದುಡಿದ ಮಹನೀಯರನ್ನು ಎಲ್ಲರೂ ಸೇರಿ ಸ್ಮರಿಸೋಣ .ಅವರ ಜೀವನದ ಒಂದೊಂದು ಅಂಶಗಳು ನಮ್ಮಲ್ಲಿ ಬಹಳಷ್ಟು ಬದಲಾವಣೆಯನ್ನು, ಪರಿಣಾಮವನ್ನು ಉಂಟುಮಾಡುತ್ತದೆ ಎಂದರು.

ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ ಸರಳತೆಯ ಪ್ರಾಮಾಣಿಕ ವ್ಯಕ್ತಿಯಾಗಿದ್ದ ಶಾಂತವೇರಿ ಗೋಪಾಲಗೌಡರ ಆದರ್ಶದಲ್ಲಿ ಹಲವು ದಶಕಗಳ ಕಾಲ ರಾಜಕಾರಣವಿತ್ತು, ಇತ್ತೀಚೆಗೆ ರಾಜಕಾರಣ ಬಹಳಷ್ಟು ಬದಲಾವಣೆಯಾಗಿದೆ. ರಾಜಕಾರಣ ಸುಧಾರಣೆಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿಗಾರರಾದ   ಚಾ ವೆಮ್ ರಾಜ್ ಗೋಪಾಲ, ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ಕಹಳೆ, ಕನ್ನಡ ಸಂಘಟನೆಗಳ ಒಕ್ಕೂಟದ ಮಹೇಶ್ ಗೌಡ, .ಪುಣ್ಯದ ಹುಂಡಿ  ರಾಜು, ಪರಮೇಶ್ವರಪ್ಪ, ಸುರೇಶ್ ಗೌಡ,  ರವಿ, ಮೂಡಲಪುರ ಪ್ರಕಾಶ್ ಇದ್ದರು.

RELATED ARTICLES
- Advertisment -
Google search engine

Most Popular