- ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಪಿರಿಯಾಪಟ್ಟಣ ತಾಲೂಕಿನ ಚಿಕ್ಕ ನೇರಳೆಯಲ್ಲಿ ನಡೆಯುವ ಹನುಮ ಜಯಂತಿ ಪ್ರಯುಕ್ತ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಸೋಮವಾರ ಶಾಂತಿ ಸಭೆ ನಡೆಸಲಾಯಿತು.
ಹುಣಸೂರು ಡಿವೈಎಸ್ಪಿ ಗೋಪಾಲಕೃಷ್ಣ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಇದೇ ತಿಂಗಳು 21ರ ಶನಿವಾರ ಚಿಕ್ಕ ನೇರಳೆ ಗ್ರಾಮದಲ್ಲಿ ನಾಲ್ಕನೇ ವರ್ಷದ ಹನುಮ ಜಯಂತೋತ್ಸವ ಅಂಗವಾಗಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶಾಂತಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಚಿಕ್ಕ ನೇರಳೆ, ದೊಡ್ಡ ನೇರಳೆ,ಹಾರನಹಳ್ಳಿ, ಬೆಟ್ಟದಪುರ, ಮಂಟಿಬಿಳಗೂಳಿ, ಬ್ಯಾಡರ ಬಿಲಗುಲಿ, ವಡೆಯರ ಹೊಸಳ್ಳಿ,ಸೇರಿದಂತೆ ಇನ್ನು ಹಲವಾರು ಗ್ರಾಮಸ್ಥರ ಮತ್ತು ಮುಸ್ಲಿಂ ಜನಾಂಗದ ಸಮ್ಮುಖದಲ್ಲಿ ಶಾಂತಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಗೋಪಾಲಕೃಷ್ಣ ಗ್ರಾಮದಲ್ಲಿ ಶಾಂತಿ ಕಾಪಾಡಿಕೊಂಡು ಹನುಮ ಜಯಂತಿಯನ್ನು ಆಚರಿಸಿದರೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದರು. ಯಾವುದೇ ಅಹಿತಕರೆ ಘಟನೆ ನಡೆಯದಂತೆ ಪ್ರಾಯೋಜಕರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಡಿಜೆ ಹಾಕಿಕೊಂಡು ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ ಎಂದರು.
ಬೈಲುಕೊಪ್ಪ ವೃತ್ತ ನಿರೀಕ್ಷಕ ದೀಪಕ್ ಮಾತನಾಡಿ ಗ್ರಾಮಗಳಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಸಹೋದರ ಭಾವನೆಯಿಂದ ಹಬ್ಬಗಳ ಆಚರಣೆ ಮಾಡುವುದರಿಂದ ಗ್ರಾಮಗಳಿಗೂ ಒಳ್ಳೆಯ ಹೆಸರು ಬರುತ್ತದೆ ಎಂದರು.
ಶಾಂತಿ ಕಾಪಾಡಿಕೊಂಡು ಹಬ್ಬ ಆಚರಿಸಲು ಒಮ್ಮತದ ತೀರ್ಮಾನಕ್ಕೆ ಗ್ರಾಮಸ್ಥರು ಒಪ್ಪಿಗೆ ನೀಡಿದರು.
ಈ ಸಂದರ್ಭದಲ್ಲಿ ಹಾರನಹಳ್ಳಿ ನಾಡಕಚೇರಿ ಉಪ ತಹಸಿಲ್ದಾರ್ ಮಹೇಶ್,ಕಂದಾಯ ನಿರೀಕ್ಷಕ ಆನಂದ್, ಚಿಕ್ಕ ನೇರಳೆ ಗ್ರಾಮ ಪಂಚಾಯಿತಿ ಪಿ ಡಿ ಓ ಮಂಜುನಾಥ್, ಬೆಟ್ಟದಪುರ ಠಾಣೆಯ ಪಿಎಸ್ಐ ಶಿವಶಂಕರ್,ಅಪರಾಧ ವಿಭಾಗದ ಪಿಎಸ್ಐ ಸುರೇಶ್ ನಾಯಕ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಹಮದ್ ಜಾನ್ ಬಾಬು, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟೇಶ, ಜ್ಯೋತಿ ಕುಮಾರ್, ಮಾಜಿ ಉಪಾಧ್ಯಕ್ಷರಾದ ಎಸ್ರಿಪ್ ಪಾಷಾ, ಸ್ಥಳೀಯ ಮುಖಂಡರಾದ ಪ್ರಕಾಶ್, ವಸಂತ್ ಕುಮಾರ್, ಸುರೇಶ್, ರಾಜಶೇಖರ್, ಕುಮಾರ್, ಮಾಧು, ಇಲಿಯಾಸ್ ಪಾಷಾ, ಆಫೀಸ್ ಖಾನ್, ಸೇರಿದಂತೆ ಮುಖಂಡರುಗಳು ಹಾಜರಿದ್ದರು.