Monday, April 21, 2025
Google search engine

Homeರಾಜ್ಯಶಾರದಾ ಕೃಪ ಉದ್ಘಾಟನಾ ಸಮಾರಂಭ: ವೇದ ಬ್ರಹ್ಮ ಶ್ರೀ ವಿಘ್ನೇಶ್ವರ ಐತಾಳ್ ನೇತೃತ್ವದಲ್ಲಿ ಋಗ್ವೇದ ಸಂಹಿತಾ...

ಶಾರದಾ ಕೃಪ ಉದ್ಘಾಟನಾ ಸಮಾರಂಭ: ವೇದ ಬ್ರಹ್ಮ ಶ್ರೀ ವಿಘ್ನೇಶ್ವರ ಐತಾಳ್ ನೇತೃತ್ವದಲ್ಲಿ ಋಗ್ವೇದ ಸಂಹಿತಾ ಯಾಗ

ಚಾಮರಾಜನಗರ: ತಾಲೂಕಿನ ಹೆಬ್ಬಸೂರಿನ ಶೃಂಗೇರಿ ಶಂಕರ ಮಠದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶಾರದಾ ಕೃಪ ಉದ್ಘಾಟನಾ ಸಮಾರಂಭದ ನಿಮಿತ್ತ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧು ಶೇಖರ ಭಾರತಿ ಸ್ವಾಮಿರವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಋಗ್ವೇದ ಸಂಹಿತಾ ಯಾಗ ವೇದ ಬ್ರಹ್ಮ ಶ್ರೀ ವಿಘ್ನೇಶ್ವರ ಐತಾಳ್ ನೇತೃತ್ವದಲ್ಲಿ ನಡೆಯುತ್ತಿದೆ.


ಲೋಕಕಲ್ಯಾಣ ಉದ್ದೇಶದಿಂದ ನಡೆಯುತ್ತಿರುವ ಋಗ್ವೇದ ಸಂಹಿತ ಯಾಗದಲ್ಲಿ ನೂರಾರು ಭಕ್ತರು ಭಾಗವಹಿಸುತ್ತಿದ್ದಾರೆ. 28ರಂದು ಸಂಜೆ ಶ್ರೀ ಶ್ರೀ ವಿಧು ಶೇಖರ ಭಾರತೀ ಸ್ವಾಮಿಗಳವರು ಆಗಮಿಸುತ್ತಿದ್ದು ,ಗ್ರಾಮದ ಅಗ್ರಹಾರದ ಸುತ್ತಲೂ ಬೃಹತ್ ಚಪ್ಪರ ನಿರ್ಮಿಸಲಾಗಿದೆ.

ಯಾಗ ಮಂಟಪ ಸಂಪೂರ್ಣ ಅಲಂಕಾರಗೊಂಡಿದ್ದು, ವೇದ ಮಂತ್ರಘೋಷ ನೂರಾರು ವೇದ ಪಂಡಿತರಿಂದ ನಡೆಯುತ್ತಿದೆ. ಗಣಪತಿ ಶಂಕರಚಾರ್ಯ ಶ್ರೀ ಶಾರದಾಂಬ ಶ್ರೀ ಸೀತಾರಾಮ ಲಕ್ಷ್ಮಣ ಹನುಮಂತ ಸಮೇತ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹಗಳಿಗೆ ವಿಶೇಷ ಪೂಜೆ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular