Thursday, April 17, 2025
Google search engine

Homeರಾಜ್ಯಮಾನವೀಯತೆ ಮೆರೆದ ಬಸ್ ನಿರ್ವಾಹಕಿ ಶರಣಮ್ಮ ಗೌಡರ

ಮಾನವೀಯತೆ ಮೆರೆದ ಬಸ್ ನಿರ್ವಾಹಕಿ ಶರಣಮ್ಮ ಗೌಡರ

ಬಾಗಲಕೋಟ: ಹುನಗುಂದ ಹೊರವಲಯದ ಸಾಯಿಂಮದಿರ ಎದುರಿಗೆ ಎನ್ ಎಚ್ 50 ರಲ್ಲಿ ಲಾರಿಗೆ ಏಕಾಏಕಿ ಬೆಂಕಿ ಬಿದ್ದಿದ್ದನು  ಗಮನಿಸಿದ ಬಸ್ ನಿರ್ವಾಹಕಿ ಶರಣಮ್ಮ ಗೌಡರ  ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಅಗ್ನಿ ನಂದಿಸಲು ಸಹಕರಿಸಿ ಮಾನವೀಯತೆ ಮೆರೆದಿದ್ದಾರೆ.

ಹುನಗುಂದ ಹೊರವಲಯದ ಸಾಯಿಂಮದಿರ ಎದುರಿಗೆ ಎನ್ ಎಚ್ 50 ರಲ್ಲಿ ಕೆ ಎ – 29 ಎ – 9276 ನಂಬರಿನ ಲಾರಿ ಬಾಗಲಕೋಟೆ ಸಿಮೆಂಟ್ ಫ್ಯಾಕ್ಟರಿಯಿಂದ ತೋರಣಗಲ್ಲಿಗೆ ಜಲ್ಲಿಯನ್ನು ತುಂಬಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಲಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದದ್ದನ್ನು ಮಾರ್ಗ ಮಧ್ಯದಲ್ಲಿ ಶಹಾಪೂರ – ಇಲಕಲ್ಲ ಬಸ್ಸಿನ ನಿರ್ವಾಹಕಿ ಶರಣಮ್ಮ ಗೌಡರ  ತಕ್ಷಣ ಜಾಗೃತರಾಗಿ ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ಪರಿಣಾಮ ಸಮಯಕ್ಕೆ ಸರಿಯಾಗಿ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಡೀಸೆಲ್ ಟ್ಯಾಂಕಿಗೆ ಬೆಂಕಿ ತಗಲುತ್ತಿದ್ದ ಸಮಯಕ್ಕೆ ಸರಿಯಾಗಿ ಆಗಮಿಸಿ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿರುತ್ತಾರೆ.

ಲಾರಿ ಕ್ಯಾಬಿನ್ ಸಂಪೂರ್ಣವಾಗಿ ಸುಟ್ಟಿದ್ದು, ಡೀಸೆಲ್ ಟ್ಯಾಂಕ್ ನಿಂದ ಆಗಬಹುದಾದ  ದೊಡ್ಡ ಅನಾಹುತವನ್ನು ತಡೆಗಟ್ಟವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಪ್ರಭಾರ ಠಾಣಾಧಿಕಾರಿ ಜಗದೀಶ ಗಿರಡ್ಡಿ ನೇತೃತ್ವದ ತಂಡದಲ್ಲಿ ಭೀಮಪ್ಪ ವನಕಿಹಾಳ , ರಫೀಕ್ ವಾಲಿಕಾರ್, ರವಿ ಲಮಾಣಿ ಯಮನಪ್ಪ ಪೂಜಾರಿ, ಪ್ರಭುದೇವ್ ಬೆಳ್ಳಿಹಾಳ, ಸತೀಶ್ ರಾಥೋಡ್ ರವರ ತಂಡ ಯಾರಿಗೆ ಬಿದ್ದಿದ್ದ ಬೆಂಕಿಯನ್ನು ನಂದಿಸಿ ನೆರೆದಿದ್ದ ಸಾರ್ವಜನಿಕರಿಂದ ಸೈ ಎನಿಸಿಕೊಂಡರು.

RELATED ARTICLES
- Advertisment -
Google search engine

Most Popular