ಬಳ್ಳಾರಿ : ದಿವಂಗತ ಎನ್ಟಿ ಆರ್(NTR) ಒಂದು ಶಕ್ತಿ ಇದ್ದಂತೆ. ಅವರ ಪ್ರತಿಮೆ ಎದುರು ನಿಂತು ಅಂದುಕೊಂಡರೆ ಕೆಲಸ ಆದಂತೆ ಎಂದು ಆಂದ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹೇಳಿದರು.
ಅವರಿಂದು ನಗರದ ಕಮ್ಮ ಭವನದಲ್ಲಿ ಸ್ಥಾಪಿಸಿರುವ 7 ಅಡಿ ಎತ್ತರದ ಸ್ವರ್ಣವರ್ಣದ ನಟ ಸಾರ್ವಭೌಮ ಎನ್.ಟಿ.ರಾಮರಾವ್ ಪ್ರತಿಮೆಯನ್ನು ಅನಾವರಣ ಮಾಡಿ ಮಾತನಾಡುತ್ತ, ಇಲ್ಲಿನ ಜನರ ಉತ್ಸಾಹ ನೋಡಿದ್ರೆ ಇದು ಆಂಧ್ರವೋ, ಕರ್ನಾಟಕವೋ ಗೊತ್ತಾಗ್ತಿಲ್ಲ. ಈ ವರ್ಷ ವಿಶೇಷವಾದದ್ದು ಕಾರಣ ಎನ್ಟಿಅರ್ ಅವರ ನೂರನೇ ಜಯಂತಿಯ ವರ್ಷಾಚರಣೆಯಾಗಿದೆ. ಈ ಸಂದರ್ಭದಲ್ಲಿ ಅವರ ಪ್ರತಿಮೆ ಅನಾವರಣ ಮಾಡ್ತಿರೋದು ಸಂತಸ ತಂದಿದೆ ಎಂದು ವ್ಯೆಕ್ತಪಡಿಸಿದ ಅವರು ತೆಲುಗು ಭಾಷೆ ಇರುವವರೆಗೂ ಎನ್ಟಿಅರ್ ಜೀವಂತವಾಗಿರುತ್ತಾರೆ.
ತೆಲುಗು ಸಿನಿಮಾ ರಂಗದಲ್ಲಿ ಮತ್ತೊಮ್ಮೆ ಎನ್ಟಿಅರ್ ಅಂತಹಾ ನಾಯಕ ನಟ ಹುಟ್ಟಿ ಬರೋದಿಲ್ಲ. ಅವರ ರಾಮ, ಭೀಮಾ, ವೆಂಕಟೇಶ್ವರ ಸ್ವಾಮಿ ಮೊದಲಾದ ಪಾತ್ರಗಳು ಜನನ ಮಾಸದಲ್ಲಿ ಇಂದಿಗೂ ಉಳಿದಿವೆಂದರು. ಎನ್ಟಿಅರ್ ಅವರು ಕೇವಲ ಆಂಧ್ರದವರೆಂದು ಭಾವಿಸಬೇಕಿಲ್ಲ. ಅವರು ಈ ಭಾರತ ದೇಶದ ಆಸ್ತಿ ಇದ್ದಹಾಗೆ. 1982ರಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ಪ್ರಸ್ತಾಪ ಮಾಡಿದ್ದನ್ನು ಪ್ರಸ್ತಾಪಿಸಿದರು. ಚಿತ್ರ ನಟರಾಗಿದ್ದ ಎನ್ಟಿಅರ್ ರಾಜಕೀಯದಲ್ಲಿ ಬರಲು ಆಂಧ್ರದ ಜನರ ಸಂಕಷ್ಟವೇ ಕಾರಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ. ನಗರ ಶಾಸಕ ನಾರಾ ಭರತ್ ರೆಡ್ಡಿ, ಕಮ್ಮ ಮಹಾಜನ ಸಂಘದ ಜಿಲ್ಲಾ ಅಧ್ಯಕ್ಷ ಮುಂಡ್ಲೂರು ಅನೂಪ್ ಕುಮಾರ್, ಕಾರ್ಯದರ್ಶಿ ದಾಮೋದರಿ ಚೌದರಿ, ಉಮೇಶ್, ಪಾಲಿಕೆ ಸದಸ್ಯರಾದ ಎಂ.ಪ್ರಭಂಜನಕುಮಾರ್, ಎಂ.ನಂದೀಶ್, ಪೇರಂ ವಿವೇಕ್, ಸೇರಿದಂತೆ ನೂರಾರು ಅಭಿಮಾನಿಗಳು ಬಾಗಿಯಾಗಿದ್ದರು.