Friday, April 4, 2025
Google search engine

Homeವಿದೇಶಪಾಕ್ ಪ್ರಧಾನಿಯಾದ ಶೆಹಬಾಜ್ ಷರೀಫ್

ಪಾಕ್ ಪ್ರಧಾನಿಯಾದ ಶೆಹಬಾಜ್ ಷರೀಫ್

ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನ ಮಂತ್ರಿಯಾಗಿ ಶೆಹಬಾಜ್ ಷರೀಫ್ ನಿಯೋಜನೆಗೊಂಡಿದ್ದಾರೆ. ಪಿಎಂಎಲ್-ಎನ್ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಬೆಂಬಲದೊಂದಿಗೆ ಪಾಕ್‍ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಿಎಂಎಲ್-ಎನ್ ಅಧ್ಯಕ್ಷ ಶೆಹಬಾಜ್ ಅವರು ಮೂರು ಬಾರಿಯ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರರಾಗಿದ್ಧಾರೆ.

336 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಿಟಿಐ ಬೆಂಬಲಿತ 90 ಕ್ಕೂ ಹೆಚ್ಚು ಸ್ವತಂತ್ರ ಅಭ್ಯರ್ಥಿಗಳು ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆದ್ದಿದ್ದಾರೆ. ಆದಾಗ್ಯೂ, ಚುನಾವಣೋತ್ತರ ಮೈತ್ರಿಯಲ್ಲಿ, ಮುತಾಹಿದಾ ಕ್ವಾಮಿ ಮೂವ್‍ಮೆಂಟ್-ಪಾಕಿಸ್ತಾನ್ (ಎಂಕ್ಯೂಎಂ-ಪಿ), ಇಸ್ತೇಕಾಮ-ಎ-ಪಾಕಿಸ್ತಾನ್ ಪಾರ್ಟಿ, ಮತ್ತು ಪಾಕಿಸ್ತಾನ್ ಪೀಪಲ್ಸ ಪಾರ್ಟಿ (ಪಿಪಿಪಿ) ಎಲ್ಲರೂ ಪಿಎಂಎಲ್-ಎನ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.

ಸರ್ಕಾರ ರಚಿಸಲು ಪಕ್ಷವೊಂದು ಸ್ರ್ಪಧಿಸಿದ್ದ 265 ಸ್ಥಾನಗಳಲ್ಲಿ 133 ಸ್ಥಾನಗಳನ್ನು ಗೆಲ್ಲಬೇಕಿತ್ತು. ಕೆಲವು 70 ಸ್ಥಾನಗಳನ್ನು ಮಹಿಳೆಯರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಿಡಲಾಗಿದೆ, ಅನುಪಾತದ ಆಧಾರದ ಮೇಲೆ ಪಕ್ಷಗಳ ನಡುವೆ ವಿಂಗಡಿಸಲಾಗಿದೆ. ಫೆಬ್ರವರಿ 8 ರಂದು ನಡೆದ ಮತದಾನದಲ್ಲಿ, ಷರೀಫ್ ನೇತೃತ್ವದ ಪಕ್ಷವು ಸ್ಪಷ್ಟ ಬಹುಮತವನ್ನು ಗಳಿಸಲು ವಿಫಲವಾಗಿದೆ, ಆದರೂ ತಾಂತ್ರಿಕವಾಗಿ, ಇದು 265 ರಲ್ಲಿ 75 ಸ್ಥಾನಗಳನ್ನು ಹೊಂದಿರುವ ಅತಿದೊಡ್ಡ ಪಕ್ಷವಾಗಿದೆ.

ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಸಂಸತ್ತನ್ನು ವಿಸರ್ಜಿಸುವ ಮೊದಲು ಶೆಹಬಾಜ್ ಅವರು ಏಪ್ರಿಲ್ 2022 ರಿಂದ ಆಗಸ್ಟ್ 2023 ರವರೆಗೆ ಸಮ್ಮಿಶ್ರ ಸರ್ಕಾರದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular