Saturday, April 12, 2025
Google search engine

Homeಸ್ಥಳೀಯಶೇಕ್ ಆಲಿ ದೇಶ ವಿಭಜನೆ ವಿರೋಧಿಸಿದ್ದರು

ಶೇಕ್ ಆಲಿ ದೇಶ ವಿಭಜನೆ ವಿರೋಧಿಸಿದ್ದರು


ಮೈಸೂರು: ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶ ವಿಭಜನೆಯನ್ನು ಪ್ರೊ.ಬಿ.ಶೇಕ್ ಆಲಿ ಹಯಾತ್ ಔರ್ ಕಿದಾಮತ್ ತೀವ್ರವಾಗಿ ವಿರೋಧಿಸಿದ್ದರು ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ಮಹಿರ್ ಮನ್ಸೂರ್ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೊ.ಬಿ.ಶೇಕ್ ಆಲಿ ಹಯಾತ್ ಔರ್ ಕಿದಾಮತ್ ಅವರ ಬದುಕು ಮತ್ತು ದೃಷ್ಟಿಕೋನ ಎಂಬ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರಣ ಉದ್ಘಾಟಿಸಿ ಮಾತನಾಡಿದ ಅವರು, ಶೇಕ್ ಆಲಿ ಅಪರೂಪದ ಬಹುಮುಖ ಪ್ರತಿಭೆ. ಅವರೊಬ್ಬ ಉತ್ತಮ ಇತಿಹಾಸ ತಜ್ಞರಂತೆ, ಇತಿಹಾಸ ನಿರ್ಮಾತೃ ಸಹ ಆಗಿದ್ದಾರೆ. ಭಾರತದಲ್ಲಿ ಬ್ರಿಟಿಷರ ಆಡಳಿತ ಮುಕ್ತಾಯಗೊಂಡ ಬಳಿಕ ದೇಶವನ್ನು ಭಾರತ, ಪಾಕಿಸ್ತಾನವಾಗಿ ವಿಭಜನೆ ಮಾಡಬಾರದು ಎಂದು ಮೌಲಾನ ಅಬ್ದುಲ್ ಕಲಾಂ ಅಜಾದ್, ಮಿರ್ಜಾ ಇಸ್ಮಾಯಿಲ್‌ರಿಗೆ ತಮ್ಮ ನಿಲುವು ವ್ಯಕ್ತಪಡಿಸಿದ್ದರು ಎಂದು ಹೇಳಿದರು.
ಅವರು ರಚಿಸಿರುವ ೫೫ ಕೃತಿಗಳು ಬಹಳ ಅಪರೂಪವಾದ ಮಾಹಿತಿ ಒಳಗೊಂಡಿವೆ. ಉರ್ದು, ಕನ್ನಡ, ಹಿಂದಿ, ಇಂಗ್ಲೀಷ್ ಬಾಷೆಗಳಲ್ಲಿ ಅಪಾರ ಪರಿಣಿತಿ ಹೊಂದಿದ್ದರು. ಮೈಸೂರು ಸಂಸ್ಥಾನದಲ್ಲಿ ಬ್ರಿಟಿಷರ ಆಡಳಿತ ಕೃತಿಯೂ ಅಂದಿನ ಮೈಸೂರು ಸಂಸ್ಥಾನದಲ್ಲಿ ಆದ ಹಲವಾರು ಮಹತ್ತರ ಬದಲಾವಣೆಗಳ ಬಗ್ಗೆ ದಾಖಲಾತಿ ಒದಗಿಸುತ್ತವೆ. ಮಹಾರಾಜರು ಇವರ ಜ್ಞಾನ ಮತ್ತು ಸರಳತೆ ಕಂಡು ಶ್ಲಾಘನೆ ವ್ಯತ್ತಪಡಿಸಿದ್ದಾರೆ. ಅಂದೇ ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪಡೆದು ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿಯೂ ಪಿಎಚ್‌ಡಿ ಪದವಿ ಪಡೆದಿದ್ದರು. ಉರ್ದು ಭಾಷೆಯಲ್ಲಿ ಸುಮಾರು ೧೨ ಕೃತಿಗಳನ್ನು ರಚಿಸಿ ಭಾಷೆಯ ಬೆಳವಣಿಗೆಗೂ ಕೊಡುಗೆ ನೀಡಿದ್ದಾರೆ ಎಂದರು. ವಿಶ್ವವಿದ್ಯಾನಿಲಯದ ಹಣಕಾಸು ವಿಭಾಗದ ಖಾದರ್ ಪಾಷ ಮಾತನಾಡಿ, ಶೇಕ್ ಆಲಿ ಅವರು ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಿ ಮೈಸೂರಿನ ಗೌಶಿಯ ನಗರ ಹಾಗೂ ಇತರೆ ೮ ಕಡೆಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದಾರೆ. ಮೈಸೂರು ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು ೫೨ಕ್ಕೂ ಅಧಿಕ ಪುಸ್ತಕಗಳನ್ನು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಯದ ಉರ್ದು ವಿಭಾಗದಲ್ಲಿ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ಡೀನ್ ಪ್ರೊ.ಎನ್.ಲಕ್ಷ್ಮಿ ಮಾತನಾಡಿ, ಶೇಕ್ ಆಲಿ ದೇಶದ ಒಬ್ಬ ಅತ್ಯುತ್ತಮ ಶಿಕ್ಷಣ ತಜ್ಞ. ಅವರದು ಎಲ್ಲರನ್ನೂ ಒಳಗೊಳ್ಳುವ ಜಾತ್ಯಾತೀತ ವ್ಯಕ್ತಿತ್ವ. ಅವರ ವಿಚಾರಗಳ ಕುರಿತು ಒಂದು ದಿನ ವಿಶ್ಲೇಷಣೆ ಮಾಡಲು ಅಸಾಧ. ಹಿಂದಿ, ಉರ್ದು, ಇಂಗ್ಲಿಷ್ ಭಾಷೆಗಳಲ್ಲಿ ಅಪಾರ ಪರಿಣಿತಿ ಹೊಂದಿದ್ದ ಸರಳ ಸಜ್ಜನಿಕೆಯ ವ್ಯಕ್ತಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ.ಶರಣಪ್ಪ ವಿ.ಹಲಸೆ, ಕುಸಚಿವ ಪ್ರೊ.ಕೆ.ಎನ್.ಮೂರ್ತಿ, ಉರ್ದು ವಿಭಾಗದ ಡೀನ್ ಪ್ರೊ.ಎಂ.ರಮಾನಾಥ ನಾಯ್ಡು, ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಪ್ರೊ.ಕೆ.ಬಿ.ಪ್ರವೀಣ್, ವಿಚಾರ ಸಂಕೀರಣ ಕಾರ್ಯಕ್ರಮದ ಸಂಚಾಲಕ ಡಾ.ಎಂ.ಡಿ.ನಸರುಖಾನ್, ಡಾ.ಸೈಯದ್ ಈಸ್ ರತ್ ಫಾತಿಮಾ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular