ಶಿವಮೊಗ್ಗ :ತೆಲಂಗಾಣದ ವಾರಂಗಲ್‍ನಲಿ ಅ.15 ರಿಂದ 17 ರವರೆಗೆ ನಡೆಯುವ 34ನೇ ಸೌತ್ ಜೋನ್ ನ್ಯಾಷನಲ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲಾ ಕ್ರೀಡಾಶಾಲೆಯ ಕ್ರೀಡಾಪುಟಗಳಾದ ಸಿರಿ ಕೆ.ಜೆ.(ಟ್ರೈಯಾಥ್ಲಾನ್), ಅಮೂಲ್ಯ ಎಂ.ವಿ.(3ಕೆ.ವಾಕ್), ಗೌತಮಿಗೌಡ (ಹೈಜಂಪ್), ಶರತ್ ಕೆ.ಜೆ (ಕಿಡ್ಸ್ ಜಾವಲಿನ್), ಸಂಜಯ್ ಎಸ್.ಹೆಚ್. (60 ಮೀ), ನಿತಿನಸಿಂಗ್ ಜಿ. (ಲಾಂಗ್‍ಜಂಪ್) ಹಾಗೂ ಸುದೀಪ್ (ಹೈಜಂಪ್) ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ.
ಈ ಎಲ್ಲಾ ಕ್ರೀಡಾಪಟುಗಳು ತರಬೇತುದಾರರಾದ ಬಾಳಪ್ಪ ಮಾನೆ ಎಂಬುವವರ ಬಳಿ ದೈನಂದಿನ ತರಬೇತಿಯನ್ನು ಪಡೆಯುತ್ತಿದ್ದಾರೆ. ಈ ಕ್ರೀಡಪಟುಗಳಿಗೆ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಮತ್ತು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.