Tuesday, April 22, 2025
Google search engine

Homeರಾಜಕೀಯಶಿವಮೊಗ್ಗ: ಗಲಭೆಪೀಡಿತ ಪ್ರದೇಶಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ

ಶಿವಮೊಗ್ಗ: ಗಲಭೆಪೀಡಿತ ಪ್ರದೇಶಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ

ಶಿವಮೊಗ್ಗ: ಗಲಭೆಪೀಡಿತ ಪ್ರದೇಶವಾದ ರಾಗಿಗುಡ್ಡಕ್ಕೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭೇಟಿ ಪರಿಸ್ಥಿತಿ ಅವಲೋಕಿಸಿದರು.

ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಎಸ್ಪಿ ಮಿಥುನ್ ಕುಮಾರ್ ಜೊತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸೂಚನೆ ನೀಡಿದರು. ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದಿದೆ.ಘಟನೆ ಸಂಬಂಧ ೨೪ ಪ್ರಕರಣಗಳನ್ನು ದಾಖಲಿಸಿಕೊಂಡು ೬೦ ಜನರನ್ನು ಬಂಧಿಸಲಾಗಿದೆ ಎಂದರು. ಶಿವಮೊಗ್ಗದಲ್ಲಿ ಗಣೇಶ ವಿಸರ್ಜನೆ ಅದ್ಧೂರಿಯಾಗಿ ನಡೆದಿದೆ.ಆದರೆ, ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಗಲಭೆ ನಡೆದಿದೆ.ಈ ಘಟನೆ ನಡೆಯಬಾರದಿತ್ತು.ಘಟನೆ ನಡೆದಿರುವುದಕ್ಕೆ ನನಗೆ ವಿಷಾದವಿದೆ ಎಂದರು.

ಶಿವಮೊಗ್ಗದ ಹಿನ್ನೆಲೆ ಗಮನಿಸಿ ಶಿವಮೊಗ್ಗ ನಗರದಲ್ಲಿ ೧೪೪ ಸೆಕ್ಷನ್ ವಿಧಿಸಲಾಗಿದೆ.ಆದರೆ, ರಾಗಿಗುಡ್ಡ ಹೊರತು ಪಡಿಸಿ ಬಾಕಿ ಕಡೆ ಸಡಿಲಗೊಳಿಸಲಾಗಿದೆ. ರಾಗಿಗುಡ್ಡದಲ್ಲಿ ಮತ್ತೆ ದ್ವೇಷದ ಹಿನ್ನೆಲೆಯಲ್ಲಿ ಯಾವ ಘಟನೆ ನಡೆಯಬಾರದು ಎಂದು ಸಿಯಕ್ಷನ್ ಬಿಗಿ ಮಾಡಲಾಗಿದೆ ಎಂದರು.ಹೊರಗಿನಿಂದ ಬಂದವರು ಕಲ್ಲು ತೂರಾಟ ನಡೆಸಿದ್ದಾರೆಂಬುದರ ಬಗ್ಗೆ ನಾನು ಮಾತನಾಡಲ್ಲ.ಶಿವಮೊಗ್ಗ ಜನತೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ರಾಗಿಗುಡ್ಡದಲ್ಲಿ ನಾನು ಕೆಲವಾರು ಮನೆಗಳಿಗೆ ಭೇಟಿ ನೀಡಿ ಒಡೆದು ಹಾಕಿದ್ದನ್ನು ನೋಡಿದೆ.ಇದನ್ನು ನೋಡಿದಾಗ ಬೇಸರವಾಗುತ್ತೆ.ನಮ್ಮ, ನಿಮ್ಮ ಮನೆಗಳನ್ನು ಒಡೆದಾಗ ಬೇಸರವಾಗುವುದಿಲ್ಲವಾ. ಪಾಪ ಕಷ್ಟಪಟ್ಟು ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಯಾರಿಂದಲೂ ಯಾರಿಗೂ ತೊಂದರೆಯಾಗಬಾರದು ಎಂದರು. ಕೆಲವು ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ.ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕ್ರಮ ಆಗುತ್ತೆ. ಕಾನೂನಿನಲ್ಲಿ ಅವಕಾಶವಿದ್ರೆ ನಷ್ಟವಾದವರಿಗೆ ಪರಿಹಾರ ಕೊಡುತ್ತೇವೆ.ಇಲ್ಲವಾದರೆ ನಾವು ಸೇರಿ ಕೊಡ್ತೆವೆ.ಶಿವಮೊಗ್ಗ ಶಾಂತಿಯಿಂದ ಇರಬೇಕು.ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

RELATED ARTICLES
- Advertisment -
Google search engine

Most Popular