ತುಮಕೂರು: ಗಲಭೆ, ಆಗೋದಕ್ಕೆ ಮೊದಲೇ ನಾವು ಎಲ್ಲಾ ಮುನ್ನೆಚ್ಚರಿಕೆ ತಗೊಂಡಿದ್ದರೂ ಕೂಡ ಒಂದು ಸಣ್ಣ ಘಟನೆ ನಡೆದು ಹೋಗಿದೆ. ಅದಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಸುಮ್ಮನೆ ಅನಾವಶ್ಯಕವಾಗಿ ಮಾತನಾಡಿ ಪ್ರಚೋದನೆ ಮಾಡೋದು ಸರಿಯಲ್ಲ ಎಂದು ಗೃಹ ಸಚಿವ ಡಾ ಜಿ.ಪರಮೇಶ್ವರ್ ತಿಳಿಸಿದರು.
ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದಲೇ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, ಮಾನ್ಯ ಈಶ್ವರಪ್ಪನವರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಮೆರವಣಿಗೆಯಲ್ಲಿ ತಲ್ವಾರ್ ಪ್ರದರ್ಶನ ವಿಚಾರ. ನಾನು ವಿಚಾರ ಮಾಡಿದೆ. ಮರದ ತುಂಡನ್ನ ಕತ್ತಿ ತರ ಮಾಡಿ ಬಣ್ಣ ಹಾಕಿ ಅದನ್ನ ಪ್ರದರ್ಶನ ಮಾಡಿದ್ದಾರೆ ಎಂದು ಎಸ್ ಪಿ ನನಗೆ ಮಾಹಿತಿ ಕೊಟ್ಟಿದ್ದಾರೆ. ಅಂತಹದ್ದು ಏನು ನಡೆದಿಲ್ಲ ಎಂದರು.
ಯಾರಿಗೋ ಚಾಕು ಹಾಕಿದ್ರು, ಯಾರಿಗೋ ಕತ್ತಿಯಲ್ಲಿ ಹೊಡೆದಿದ್ದು. ಇಂತಹದ್ದನೆಲ್ಲಾ ಮಾತನಾಡಬಾರದು ಎಂದು ಹೇಳಿದರು.
ಮೊದಲೇ ನಾವು ಸಾಕಷ್ಟು ಪೊಲೀಸರನ್ನ ನಿಯೋಜನೆ ಮಾಡಿದ್ವಿ. ಮೊದಲೆಲ್ಲ ಶಿವಮೊಗ್ಗದಲ್ಲಿ ನಡೆದ ಘಟನೆಗಳ ಬಗ್ಗೆ ನಮಗೆ ಗೊತ್ತಿದೆ. ಹಾಗಾಗಿ ಮುನ್ನೆಚ್ಚರಿಕೆ ತಗೊಂಡಿದ್ವಿ. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದರು.
ಕಲ್ಲು ಹೊಡೆದ 50 ಜನರನ್ನ ಅರೆಸ್ಟ್ ಮಾಡಿದ್ದೀವಿ. ಸಿಸಿಟಿವಿಯಲ್ಲಿ ಕಂಡವರನ್ನ ವಿಚಾರಣೆ ಮಾಡ್ತಿದ್ದೇವೆ. ಯಾವುದೇ ಗಲಭೆ ಈಗ ಇಲ್ಲ. ನಿನ್ನೆಯೇ ಎಲ್ಲವೂ ಮುಗಿದು ಹೋಗಿದೆ ಎಂದು ಹೇಳಿದರು.
ನಿಜವಾದ ತಲ್ವರ್ ಎಂಬ ಪ್ರಶ್ನೆಗೆ ಗರಂ ಆದ ಪರಮೇಶ್ವರ್, ನಿಜವಾದ ತಲ್ವಾರ್ ಅಂತ ಹೇಳ್ತಿದ್ದಾರೆ. ನಾನು ಅದನ್ನ ಹೋಗಿ ನೋಡಿದ್ನ, ನಿಜವಾದ ತಲ್ವಾರ್ ಇರಬಹುದು. ಆದ್ದರಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೊರರಾಜ್ಯದಿಂದ ಹೊರ ಜಿಲ್ಲೆಯಿಂದಲೂ ಯಾರು ಬಂದಿಲ್ಲ. ಯಾರು ಹೊರಗಡೆಯಿಂದ ಬರಬಾರದು ಅಂತ ಸ್ಕ್ರೀನಿಂಗ್ ಮಾಡಿದ್ದಿವಿ. ಬೇಕಂತ ಆಗಿರಬಹುದು, ಅವರು ಕಲ್ಲು ಹೊಡೆದಿದ್ದಾರೆ ಅಂತ ಇವರು ಕಲ್ಲು ಹೊಡೆದಿದ್ದಾರೆ. ಸೆಲೆಕ್ಟಿವ್ ಆಗಿ ಅಂತ ಪೊಲೀಸರಿಗೆ ಏನು ಹೊಡೆದಿಲ್ಲ. ಸಾಮೂಹಿಕ ಕಲ್ಲು ತೂರಿದಾಗ ಪೊಲೀಸರ ಮೇಲೆ ಕಲ್ಲು ಬಿದ್ದಿದೆ ಎಂದರು.
ಕಲ್ಲು ತೂರಾಟ ಮಾಡಿದವರ ವಿರುದ್ಧ ಯಾವ ರೀತಿ ಕಾನೂನು ಕ್ರಮ ಕೈಗೊಳ್ಳಬೇಕು ಆ ರೀತಿ ಕೈಗೊಂಡಿದ್ದಾರೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ತಿವಿ. ನಾವು ಪರಿಸ್ಥಿತಿ ಲಾಭ ತೆಗೆದುಕೊಳ್ಳಲು ಬಿಡಲ್ಲ. ನಾನು ಶಿವಮೊಗ್ಗಕ್ಕೆ ಹೋಗುವ ಅಗತ್ಯತೆ ಇಲ್ಲ. ಅಂತಹದ್ದು ಏನು ಆಗಿಲ್ಲ. ಘಟನೆಗಳು ದೊಡ್ಡದಾಗೋಕೆ ನಾವು ಬಿಡೋದಿಲ್ಲ ಎಂದರು.
ಸರ್ಕಾರ 6 ತಿಂಗಳಲ್ಲಿ ಬಿಳುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಹೇಳ್ತಾನೆ ಇರ್ತಾರೆ. ನಾವು ಸರ್ಕಾರ ನಡೆಸ್ತಾನೆ ಇರ್ತಿವಿ ಎಂದು ಡಾ ಜಿ ಪರಮೇಶ್ವರ್ ಹೇಳಿದರು.