ಶಿವಮೊಗ್ಗ : ನಿನ್ನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಳಸವಳ್ಳಿ ಗ್ರಾಮದ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂರು ಯುವಕರು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಮೂವರ ಯುವಕರ ಮೃತ ದೇಹಗಳು ಪತ್ತೆಯಾಗಿವೆ.
ಕಳಸವಳ್ಳಿಯ ಶರಾವತಿ ಹಿನ್ನೀರಿನಲ್ಲಿ ನಿನ್ನೆ ಈ ಒಂದು ದುರಂತ ಸಂಭವಿಸಿತ್ತು. ಚೇತನ ಜೈನ್ (28) ಸಿಗಂದೂರು, ರಾಜು (28) ಗಿಣಿವಾರ, ಹಾಗೂ ಸಂದೀಪ್ (30) ಹುಲಿದೇವರಬನ ನಿವಾಸಿಗಳು ಎಂದು ತಿಳಿದುಬಂದಿದೆ ಯುವಕರ ಮೃತ ದೇಹ ಇದೀಗ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ ಶರಾವತಿ ಹಿನ್ನೀರಿನಲ್ಲಿ ತೆಪ್ಪದಲ್ಲಿದ್ದ ಚೇತನ್ ಸಂದೀಪ್ ರಾಜು ಎನ್ನುವವರು ಕಣ್ಮರೆಯಾಗಿದ್ದರು. ಇವರು ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರದವರು ಎಂದು ತಿಳಿದು ಬಂದಿದೆ.ಈ ವೇಳೆ ಇನ್ನಿಬ್ಬರು ಯುವಕರು ದಡ ಸೇರಿದ್ದಾರೆ. ಶರಾವತಿ ಹಿನ್ನೀರಿನಲ್ಲಿ ನಾಪತ್ತೆಯಾಗಿರುವ ಮೂವರು ಯುವಕರು ಮೃತಪಟ್ಟಿದ್ದಾರೆ. ತೆಪ್ಪದಲ್ಲಿ ಒಟ್ಟು ಐವರು ಯುವಕರು ಪ್ರಯಾಣಿಸುತ್ತಿದ್ದರು. ನಿನ್ನೆಯಿಂದ ಶರಾವತಿ ನೀರಿನಲ್ಲಿ ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧಕಾರ್ಯ ನಡೆಸಿತ್ತು. ಯುವಕರಿಗಾಗಿ ಶೋಧ ಕಾರ್ಯ ನಡೆದಿದ್ದು, ಇದೀಗ ಮೂವರು ಯುವಕರ ಮೃತದೇಹ ಪತ್ತೆಯಾಗಿವೆ.