Monday, April 21, 2025
Google search engine

Homeರಾಜ್ಯಸುದ್ದಿಜಾಲಶಿರ್ವ ಮಹಿಳಾ ಮಂಡಲ ನೂತನ ಅಧ್ಯಕ್ಷರಾಗಿ ಡಾ.ಸ್ಪೂರ್ತಿ.ಪಿ.ಶೆಟ್ಟಿ ಆಯ್ಕೆ

ಶಿರ್ವ ಮಹಿಳಾ ಮಂಡಲ ನೂತನ ಅಧ್ಯಕ್ಷರಾಗಿ ಡಾ.ಸ್ಪೂರ್ತಿ.ಪಿ.ಶೆಟ್ಟಿ ಆಯ್ಕೆ

ಉಡುಪಿ: ಉಡುಪಿ ಜಿಲ್ಲೆಯ ಅತ್ಯಂತ ಹಿರಿಯ ಮಹಿಳಾ ಮಂಡಲ ಗಳಲ್ಲೊಂದಾಗಿರುವ ಶಿರ್ವ ಮಹಿಳಾ ಮಂಡಲ (ರಿ) ಶಿರ್ವ ಇದರ ನೂತನ ಅಧ್ಯಕ್ಷರಾಗಿ ಡಾ.ಸ್ಪೂರ್ತಿ.ಪಿ.ಶೆಟ್ಟಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಇಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಕಳೆದ ಮೂರು ವರ್ಷಗಳಿಂದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಪೂರ್ತಿ ಶೆಟ್ಟಿ ಅವರು ನಿರ್ಗಮನ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ ಅವರಿಂದ ಅಧಿಕಾರವನ್ನು ಸ್ವೀಕರಿಸಿದರು.ಕಾರ್ಯಕಾರಿ ಮಂಡಳಿಯ ವಿವರ ಇಂತಿದೆ.

ಗೀತಾ ವಾಗ್ಳೆ ಗೌರವ ಸಲಹೆಗಾರರು, ಬಬಿತಾ ಜಗದೀಶ್ ಅರಸ ಗೌರವಾಧ್ಯಕ್ಷರು, ಗೀತಾ ಮೂಲ್ಯ ಉಪಾಧ್ಯಕ್ಷರು, ಐರಿನ್ ಲುಸ್ರಾದೋ ಕಾರ್ಯದರ್ಶಿ, ಗೌರಿ ಶೆಣೈ ಜೊತೆ ಕಾರ್ಯದರ್ಶಿ, ದೀಪಾ ಶೆಟ್ಟಿ ಕೋಶಾಧಿಕಾರಿ, ಸದಸ್ಯರಾಗಿ ಮರಿಯಾ ಜೆಸಿಂತ ಫುರ್ಟಾಡೋ, ಸುಮತಿ ಜಯಪ್ರಕಾಶ್ ಸುವರ್ಣ, ಜಯಶ್ರೀ ಜಯಪಾಲ್ ಶೆಟ್ಟಿ, ಮಾಲತಿ ಮುಡಿತ್ತಾಯ, ಸುನೀತಾ ಸದಾನಂದ್, ಪುಷ್ಪಾ ಆಚಾರ್ಯ, ವಸಂತಿ ಗೋಪಾಲ್, ಗ್ಲಾಡಿಸ್ ಅಲ್ಮೇಡಾ, ಸುಮಾ ಬಾಮನ್, ಆಫ್ರಿನ್ ಬಾನು, ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಶಿರ್ವ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸವಿತಾ ರಾಜೇಶ್ ಅವರನ್ನು ಅಭಿನಂದಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಗೀತಾ ವಾಗ್ಳೆ ಅವರು ತಮಗೆ ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿ, ನೂತನ ಅಧ್ಯಕ್ಷರಿಗೂ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.

ಆರಂಭದಲ್ಲಿ ಪುಷ್ಪಾ ಆಚಾರ್ಯ ಮತ್ತು ಸುನೀತಾ ಸದಾನಂದ್ ಅವರು ಪ್ರಾರ್ಥನೆಗೈದರು. ಬಬಿತಾ ಜಗದೀಶ್ ಅರಸ ಅವರು ಸರ್ವರನ್ನೂ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಐರಿನ್ ಲುಸ್ರಾದೋ ಅವರು ಧನ್ಯವಾದಗಳನ್ನು ಸಲ್ಲಿಸಿದರು. ಸುಮತಿ ಜಯಪ್ರಕಾಶ್ ಸುವರ್ಣ ಅವರು ಕಾರ್ಯಕ್ರಮ ನಿರೂಪಿಸಿದರು.

RELATED ARTICLES
- Advertisment -
Google search engine

Most Popular