Friday, April 18, 2025
Google search engine

Homeರಾಜ್ಯಸುದ್ದಿಜಾಲಶಿವಣ್ಣಗೆ 6 ಆಪರೇಷನ್‌, 190 ಹೊಲಿಗೆ ಹಾಕಲಾಗಿದೆ: ಮಧು ಬಂಗಾರಪ್ಪ

ಶಿವಣ್ಣಗೆ 6 ಆಪರೇಷನ್‌, 190 ಹೊಲಿಗೆ ಹಾಕಲಾಗಿದೆ: ಮಧು ಬಂಗಾರಪ್ಪ

ಬೆಂಗಳೂರು: ನಟ ಶಿವರಾಜ್‌ಕುಮಾರ್‌ ಅವರಿಗೆ 6 ಆಪರೇಷನ್‌ ಮಾಡಲಾಗಿದ್ದು 190 ಹೊಲಿಗೆ ಹಾಕಲಾಗಿದೆ. ಶಿವಣ್ಣಗೆ ತಲೆಯಲ್ಲಿ ಒಂದು ಸ್ಟಂಟ್ ಇದೆ, ಹೃದಯದಲ್ಲಿ ಒಂದು ಸ್ಟಂಟ್ ಇದ್ದು ಜ.25 ರಂದು ಬೆಂಗಳೂರಿಗೆ ಬರುತ್ತಾರೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಶಿವಣ್ಣ ಆರೋಗ್ಯದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐದೂವರೆ ಗಂಟೆ ಆಪರೇಷನ್‌ಗೆ ಪ್ಲ್ಯಾನ್‌ ಮಾಡಿದ್ದರು. ಆದರೆ ನಾಲ್ಕು ಮುಕ್ಕಾಲು ಗಂಟೆಗೆ ಆಪರೇಷನ್‌ ಮುಗಿಯಿತು. ಮ್ಯಾನ್ಯುವಲಿ ಮಾಡಬೇಕಾ? ಅಥವಾ ರೋಬೋಟಿಕ್ ಮಾಡಬೇಕಾ ಅಂತ ಎರಡು ಪ್ರಕಾರದ ಚರ್ಚೆ ನಡೆಯಿತು. ರೋಬೋಟಿಕ್‌ ಆದರೆ ಏಳೆಂಟು ಹೋಲ್ ಮಾಡಿ ದೇಹವನ್ನು ಉಲ್ಟಾ ಮಲಗಿಸಿ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಕೊನೆಗೆ ಮ್ಯಾನ್ಯುವಲ್ ಮಾಡುವುದು ಸೂಕ್ತ ಅಂತ ನಿರ್ಧಾರ ಮಾಡಲಾಯಿತು ಎಂದರು.

ಶಿವಣ್ಣ ಗೆ 63 ವಯಸ್ಸು, ಈಗ ವಾಪಸ್ ಬಂದಮೇಲೆ 36 ರ ರೀತಿ ಕಾಣಿಸುತ್ತಾರೆ. ವೈದ್ಯರು ನಮ್ಮ ಕುಟುಂಬದ ಸದಸ್ಯರಂತೆ ಇದ್ದರು. ಶಿವಣ್ಣ ಫೋಟೋ ಜೊತೆಗೆ ವೈದ್ಯರ ಫೋಟೋ ಕೂಡ ಇಲ್ಲಿ ಅಭಿಮಾನಿಗಳು ಪೂಜೆ ಮಾಡಿದ್ದರು. ಅದನ್ನು ನೋಡಿ ವೈದ್ಯರು ಪಾಪ ಕಣ್ಣೀರು ಹಾಕಿಕೊಂಡರು ಎಂದು ತಿಳಿಸಿದರು.

ಶಿವಣ್ಣ ಕ್ಯಾನ್ಸರ್‌ ಮುಕ್ತ ಅಂತ ವೈದ್ಯರು ಹೇಳಿದ್ದಾರೆ. ನಾವು ನಾಲ್ಕೈದು ಕಿಮೀ ನಡೆದುಕೊಂಡು ವಾಕಿಂಗ್ ಮಾಡುತ್ತಿದ್ದೆವು. ಮುರುಗೇಶ್ ಮನೋಹರ್ ಸರ್ಜರಿ ಮಾಡಿದ್ದ ಅವರು ಮೂಲತಃ ಬೇಲೂರಿನವರು. ಮದ್ರಾಸ್‌ನಲ್ಲಿ ಹುಟ್ಟಿ ಬೆಳೆದರೂ ಆಗಾಗ ಭಾರತಕ್ಕೆ ಬಂದರು ಸೇವೆ ಸಲ್ಲಿಸುತ್ತಿದ್ದಾರೆ. ಮುಂದಿನ ಸಲ ಬಂದಾಗ ಭೇಟಿ ಆಗುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular