ಮೈಸೂರು: ಶಿವನ ಲೀಲೆಗಳನ್ನು ಒಳಗೊಂಡಿರುವ ಶಿವತತ್ವ ಚಿಂತಾಮಣಿ ಅಪೂರ್ವವಾದ ಕಾವ್ಯರತ್ನ ಎಂದು ಡಾ.ಕೆ.ಅನಂತರಾಮು ತಿಳಿಸಿದರು.
ಅವರು ಭಾನುವಾರ ಶ್ರೀ ಸುತ್ತೂರು ಮಠದಲ್ಲಿ ಶ್ರಾವಣ ಮಾಸದ ೨೪ನೇ ದಿನದ ಪ್ರವಚನ ನೀಡಿದರು.
ಕವಿ ವರ್ಣನೆ ಈ ಕಾವ್ಯದಲ್ಲಿಅತ್ಯಂತರಸಭರಿತವಾಗಿ ಮೂಡಿಬಂದಿದೆ. ರಾಕ್ಷಸತಾರಕಾಸುರನ ಸಂಹಾರಕ್ಕಾಗಿ ಶಿವನ ತಪಸ್ಸನ್ನು ಭಗ್ನಗೊಳಿಸಲು ಮನಮೋಹಕ ವಾತಾವರಣವನ್ನು ಸೃಷ್ಟಿಸಲಾಗಿತ್ತು.ಜಾಜಿ, ಮಲ್ಲಿಗೆ, ಸಂಪಿಗೆಗಳು ಅರಳಿ ನಿಂತಿದ್ದವು. ಮಂದ ಮಾರುತಗಳು ಆ ಪುಷ್ಪಗಳ ಪರಿಮಳ ಹೊತ್ತು ಬೀಸುತ್ತಿದ್ದವು. ಮನ್ಮಥನು ಶಿವನನ್ನು ಎಚ್ಚರಿಸಲುಐದು ಹೂವಿನ ಬಾಣಗಳಾದ ಅರವಿಂದನೆಂಬ ಉನ್ಮಾದ, ಅಶೋಕನೆಂಬ ಮದನ, ಚೂಕನೆಂಬ ಮೋಹನ, ನವಮಲ್ಲಿಕನೆಂಬ ಸಂತಾಪನ ಹಾಗೂ ನೀಲೋತ್ಪನವೆಂಬ ವಶೀಕರಣದ ಶಕ್ತಿ ಹೊಂದಿದ್ದ ಪುಷ್ಪ ಬಾಣಗಳನ್ನು ಒಂದೊಂದಾಗಿ ಪ್ರಯೋಗಿಸುತ್ತಾನೆ. ಶಿವನ ತೇಜಸ್ಸಿನ ಮುಂದೆಅವೆಲ್ಲವೂ ನಿಶ್ಶಕ್ತವಾಗುತ್ತವೆ. ಐದು ಬಾಣಗಳನ್ನು ಒಟ್ಟಿಗೆ ಪ್ರಯೋಗಿಸಿದಾಗ ಶಿವನ ತಪೋಭಂಗ ಸಾಧ್ಯವಾಗುತ್ತದೆ.ಇದರಿಂದಆತಕೋಪದಲ್ಲಿತೆರೆದಅಗ್ನಿನೇತ್ರದ ಪ್ರಳಯಕಾಲದ ಅಗ್ನಿಯುಎದುರಿಗಿದ್ದ ಮನ್ಮಥನನ್ನು ಭಸ್ಮ ಮಾಡಿತೆಂದು ಕವಿ ಲಕ್ಕಣ್ಣದಂಡೇಶ ಮನೋಜ್ಞವಾಗಿ ವಿವರಿಸಿದ್ದಾನೆಂದು ತಿಳಿಸಿದರು.
ವಿದ್ವಾನ್ ಕೃ. ರಾಮಚಂದ್ರರವರುಕಾವ್ಯ ವಾಚನ ಮಾಡಿದರು. ಸುನಂದ ಮತ್ತು ಬಿ. ಮಹದೇವಸ್ವಾಮಿ ಕುಟುಂಬದವರು ಸೇವಾರ್ಥ ನೆರವೇರಿಸಿದರು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಕ್ತಾದಿಗಳು ಹಾಗೂ ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.