ಗುಂಡ್ಲುಪೇಟೆ: ತಾಲೂಕಿನ ಶಿವಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ರೈತ ಸಂಘಟನೆಯ ಮಹದೇವಪ್ಪ, ಉಪಾಧ್ಯಕ್ಷರಾಗಿ ಎಂ.ಸುಧಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಿವಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೈಯ ಸಂಘಟನೆ ಮಹದೇವಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಸುಮಾ ಹೊರತು ಪಡಿಸಿ ಇತರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರು ಹಾಗು ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಚುನಾವಣೆ ಅಧಿಕಾರಿಯಾಗಿದ್ದ ಕುಡಿಯುವ ನೀರು ಸರಬರಾಜು ಅಭಿಯಂತರರಾದ ಶಿವಕುಮಾರ್ ಘೋಷಣೆ ಮಾಡಿದರು. ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ವಿತರಿಸುವ ಮೂಲಕ ಹೂವಿನ ಹಾರ ಹಾಕಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ಮಹದೇವಪ್ಪ ಮಾತನಾಡಿ, ಮೂಲಭೂತ ಸೌಕರ್ಯಗಳನ್ನು ನಮ್ಮ ಅಧಿಕಾರ ಅವಧಿಯಲ್ಲಿ ಜನರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲಾಗುವುದು. ಬಾಪೂಜೀ ಸೇವಾ ಕೇಂದ್ರದಲ್ಲಿ 101 ಕಾರ್ಯಕ್ರಮದಡಿಯಲ್ಲಿ ಇ-ಸ್ವತ್ತು ವಂಶವೃಕ್ಷ ಸೇರಿದಂತೆ ಎಲ್ಲಾ ರೀತಿಯ ಸೇವೆಗಳು ಗ್ರಾಪಂನಲ್ಲಿಯೇ ನಡೆಯುವಂತೆ ಮಾಡಿ ಜನರು ಹೋಬಳಿ ಕೇಂದ್ರಗಳಿಗೆ ಅಲೆಯದಂತೆ ಮಾಡಲಾಗುವುದು. ಒಟ್ಟಾರೆ 10 ತಿಂಗಳ ಅಧಿಕಾರದ ಅವಧಿಯಲ್ಲಿ ಗ್ರಾಪಂ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಮಹೇಶ್, ಶಿವಣ್ಣ, ಚೆನ್ನಬಸಪ್ಪ, ಸಿದ್ದರಾಜು, ಮಹೇಶ್, ರತ್ನಮ್ಮ, ಚಿಕ್ಕ ತಾಯಮ್ಮ, ಬಸಮ್ಮಣಮ್ಮ ಗಾಯಿತ್ರಿ, ಪಿಡಿಓ ಮಂಜುನಾಥ್ ರಾವ್, ಮುಖಂಡರಾದ ಕೆ.ಎಸ್.ಜಗದೀಶ್‍ಮೂರ್ತಿ, ಎಸ್.ಕೆ.ಶಿವಕಂಠಮೂರ್ತಿ, ರವೀಂದ್ರ, ಮರಿಬಸಪ್ಪ, ಸುಬ್ಬಪ್ಪ, ಶಿವಪ್ಪ, ಶಿವನಂಜಪ್ಪ, ಅಶೋಕ, ಶಿವಪುರ ಮಂಜಪ್ಪ, ರೈತ ಸಂಘ ಜಿಲ್ಲಾ ಕಾಯಾಧ್ಯಕ್ಷ ಟಿ.ಎಸ್.ಶಾಂತಮಲ್ಲಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ದಿಲೀಪ್, ಶಿವಮಲ್ಲು, ಎಪಿಎಂಸಿ ಸದಸ್ಯ ರಾಜು, ಮಹದೇವೇಗೌಡ ಸೇರಿದಂತೆ ಶಿವಪುರ ಮತ್ತು ಕಲಿಗೌಡನಹಳ್ಳಿ ಗ್ರಾಮಸ್ಥರು ಹಾಜರಿದ್ದರು.