ಹೊಸೂರು: ಕೆ.ಆರ್.ನಗರ ತಾಲೂಕಿನ ಹೆಬ್ಬಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಶಿವರಾಜ್ ನೇಮಕಗೊಂಡಿದ್ದಾರೆ.
ಉಳಿದಂತೆ ಸದ್ಯಸರಾಗಿ ಇಂಪನಾ ಧನಂಜಯ, ಅಪ್ಪಿಪ್ರಸನ್ನ, ಮಧುಸೂದನ್, ನರಸಿಂಹ, ಮಂಜು, ನಯಾಜ್ ಪಾಷ, ಪೂರ್ಣಿಮಾ, ಕುಮಾರ, ನವೀನ್ ಕುಮಾರ್, ಗಿರೀಶ್, ರಾಜಶೇಖರ್ ಲಕ್ಷ್ಮಿ ಸುರೇಶ್, ಅರುಣಾಕ್ಷಿ, ಕುಮಾರ ನೇಮವಾಗಿದ್ದಾರೆ.
ಇವರನ್ನು ಶಾಸಕ ಡಿ.ರವಿಶಂಕರ್ ಅವರ ಶಿಪಾರಸ್ಸಿನ ಮೇರೆಗೆ ನೇಮಿಸಲಾಗಿದೆ.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಮತ್ತು ಸದಸ್ಯರನ್ನು ಶಾಲೆ ಪ್ರಾಂಶುಪಾಲೆ ಸುಧಾಮಣಿ, ಶಿಕ್ಷಕರಾದ ಜಲೇಂದ್ರ, ರೈತಮುಖಂಡ ಹೆಬ್ಬಾಳ್ ಶಿವಪ್ರಸಾದ್ ಸೇರಿದಂತೆ ಮತ್ತಿತರರು ಅಭಿನಂಧಿಸಿದರು.