Friday, April 11, 2025
Google search engine

Homeರಾಜ್ಯನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ: ಪೊಲೀಸರ ಹೈ ಅಲರ್ಟ್, ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ

ನಾಡಿನೆಲ್ಲೆಡೆ ಶಿವರಾತ್ರಿ ಸಂಭ್ರಮ: ಪೊಲೀಸರ ಹೈ ಅಲರ್ಟ್, ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ

ಬೆಂಗಳೂರು: ನಾಡಿನೆಲ್ಲೆಡೆ ಇಂದು ಶಿವರಾತ್ರಿ ಹಬ್ಬದ ಸಂಭ್ರಮ.‌ ಶಿವರಾತ್ರಿ ಹಿನ್ನೆಲೆ ರಾಜ್ಯದ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ಬೆಳಗ್ಗೆಯಿಂದಲೇ ಸಾಗಿದೆ.

ನಗರದ ಎಲ್ಲಾ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳನ್ನು ಹಮ್ಮಿಕೊಳ್ಳಲಾಗಿದೆ. ಮತ್ತೊಂದೆಡೆ ಕಳೆದ ಶುಕ್ರವಾರ ಬಾಂಬ್ ಸ್ಫೋಟಗೊಂಡಿದ್ದ ರಾಮೇಶ್ವರಂ ಕೆಫೆ ಮತ್ತೆ ಇಂದು ಶಿವರಾತ್ರಿ ದಿನ ಪುನಾರಂಭಗೊಂಡಿದೆ.

ಶಿವರಾತ್ರಿ ಹಬ್ಬ ಆಚರಣೆ ಹಿನ್ನೆಲೆ ಬೆಂಗಳೂರು ನಗರದಾದ್ಯಂತ ಪೊಲೀಸ್ ಹೈ ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಸಂಚಾರಿ ಮಾರ್ಪಾಡು ಮಾಡಿದ್ದಾರೆ.ನಗರದಲ್ಲಿ ಇಂದು ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ.

ಶಿವ ದೇವಸ್ಥಾನಗಳಿಗೆ ಮುನ್ನೆಚ್ಚರಿಕ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇಂದು ಬೆಳಗಿನ ಜಾವದಿಂದಲೇ ಪೊಲೀಸ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ನಗರದ ಎಲ್ಲ ಠಾಣೆಗಳ ಇನ್ಸ್​ಪೆಕ್ಟರ್, ಸಿಬ್ಬಂದಿ ಗಸ್ತಿನಲ್ಲಿರುವಂತೆ ಸೂಚನೆ ನೀಡಲಾಗಿದೆ. ರಾಮೇಶ್ವರಂ ಕೆಫೆಯಲ್ಲಿ ಬ್ಲಾಸ್ಟ್ ನಂತರ ಹೈಅಲರ್ಟ್ ಆಗಿರುವ ಪೊಲೀಸರು ಯಾವುದೇ ವಿಧ್ವಂಸಕ ಕೃತ್ಯ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಿನ ಹಲವೆಡೆ ಸಂಚಾರ ನಿರ್ಬಂಧ: ಬೆಂಗಳೂರಿನಲ್ಲಿ ಇಂದು ಕೆಲ ರಸ್ತೆಗಳಲ್ಲಿ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಜೀವನಹಳ್ಳಿ, ಚಾರ್ಲ್ಸ್ ಕ್ಯಾಂಬೇಜ್ ಮುಖ್ಯರಸ್ತೆ, ಬೈಯ್ಯಪ್ಪನಹಳ್ಳಿ ರಸ್ತೆ, ಕಲ್ಲಲ್ಲಿ ಸ್ಮಶಾನದ ರಸ್ತೆ, ಗರುಡಾಚಾರಪಾಳ್ಯ ಜಂಕ್ಷನ್‌ನಿಂದ ರಾಯಣ್ಣ ಸರ್ಕಲ್, ಗೋಶಾಲ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಸರ್ಕಲ್​ವರೆಗೆ ಸಂಚಾರ ನಿರ್ಬಂಧ ಇರಲಿದೆ.

ಇಂದು ಮಧ್ಯಾಹ್ನ 12 ಗಂಟೆಯಿಂದ ಸಿಎಂಹೆಚ್​ ರಸ್ತೆಯ ಆದರ್ಶ ಜಂಕ್ಷನ್​ನಿಂದ ಶಾಂತಿ ಸಾಗರ್ ಜಂಕ್ಷನ್​ವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10ರವರೆಗೆ ವಾಹನಗಳ ಸಂಚಾರ ನಿರ್ಬಂಧ ಹೇರಲಾಗಿದೆ. ಬಜಾರ್ ಸ್ಟ್ರೀಟ್ ಬೇಗಂ ಮಾಲ್​ನಿಂದ ರಾಮಯ್ಯ ಜಂಕ್ಷನ್​ವರೆಗೆ ನಿರ್ಬಂಧ ಇರಲಿದೆ.

ಓ.ಎಂ.ಸರ್ಕಾರಿ ಕಾಲೇಜ್ ರಸ್ತೆ ಬೆಳಗ್ಗೆ 6ರಿಂದ ನಾಳೆ ಬೆಳಗ್ಗೆ 6ರವರೆಗೆ ನಿರ್ಬಂಧ ಹೇರಲಾಗಿದೆ. ಯಮಲೂರು ಓಂ ಶಕ್ತಿ ದೇಗುಲದಿಂದ ಸರ್ಕಾರಿ ಶಾಲೆವರೆಗಿನ ರಸ್ತೆ ನಿರ್ಬಂಧ. ಕೆಲ ರಸ್ತೆಗಳಲ್ಲಿ ನಿರ್ಬಂಧ ಹಿನ್ನೆಲೆ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ: ದೊಡ್ಡಗುಂಟೆ ಸರ್ಕಲ್, ಕೆನ್ಸಿಂಗ್​ಟನ್ ರಸ್ತೆ ಮೂಲಕ ಬೈಯ್ಯಪ್ಪನಹಳ್ಳಿ ಓವರ್ ಬ್ರಿಡ್ಜ್ ಎಡರಸ್ತೆ, ಹೂಡಿ ಕೃಷ್ಣ ಟೆಂಪಲ್. ಐಟಿಪಿಎಲ್ ರಸ್ತೆ, ಬಿಎಂಶ್ರೀ ಜಂಕ್ಷನ್​ನಿಂದ ಆದರ್ಶ ಜಂಕ್ಷನ್ ಮೂಲಕ ತೆರಳಬಹುದು. ಬಜಾರ್ ಸ್ಟ್ರೀಟ್ ಸವಾರರಿಗೆ ಗುರುದ್ವಾರ ಜಂಕ್ಷನ್. ರಾಮಯ್ಯ ಜಂಕ್ಷನ್ ಸವಾರರಿಗೆ ಟ್ರಿನಿಟಿ ಜಂಕ್ಷನ್. ಓ.ಎಂ.ರಸ್ತೆ ಸವಾರರಿಗೆ ಕೆ ಆರ್.ಪುರಂ ಎಕ್ಸ್​ಟೆನ್ಷನ್ ರಸ್ತೆ ಬಳಸುವಂತೆ ಮನವಿ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular