Monday, April 21, 2025
Google search engine

Homeರಾಜಕೀಯದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3-4 ಅಭ್ಯರ್ಥಿಗಳ ಶಾರ್ಟ್ ಲಿಸ್ಟ್, ಸರ್ವೇ ಬಳಿಕ ನಿರ್ಧಾರ: ಡಿಸಿಎಂ ಡಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3-4 ಅಭ್ಯರ್ಥಿಗಳ ಶಾರ್ಟ್ ಲಿಸ್ಟ್, ಸರ್ವೇ ಬಳಿಕ ನಿರ್ಧಾರ: ಡಿಸಿಎಂ ಡಿ ಕೆ ಶಿವಕುಮಾರ್

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ನಾಲ್ಕು ಹೆಸರು ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಸರ್ವೇ ಟೀಂ ಸರ್ವೇ ಮಾಡಿದ ಬಳಿಕ ಯಾರು ಅಭ್ಯರ್ಥಿ ಆಗುತ್ತಾರೆ ನೋಡೋಣ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಅವರು ಮಂಗಳೂರಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ಸಮಾವೇಶದ ಮೈದಾನದ ಬಳಿ ಸುದ್ದಿಗಾರರ ಜೊತೆ ಮಾತನಾಡಿದರು.

ರಾಜಕೀಯದಲ್ಲಿ ಯಾವುದೂ ಶಾಶ್ವತನೂ ಅಲ್ಲ, ಅಸಾಧ್ಯನೂ ಇಲ್ಲ. ಬದಲಾವಣೆಯ ವಿಶ್ವಾಸದಿಂದ ನಾವು ಮಂಗಳೂರಿನಲ್ಲಿ ಈ ಬಾರಿ ಸಮಾವೇಶ ಮಾಡ್ತಾ ಇದ್ದೀವಿ. ಈ ಭಾಗದಲ್ಲಿ ನಾವು ಗೆಲ್ಲೋ ಸಾಧ್ಯತೆ ಹೆಚ್ಚಿದೆ, ಹೀಗಾಗಿ ಸಮಾವೇಶ ಮಾಡ್ತಿದ್ದೇವೆ ಎಂದು ಹೇಳಿದರು.

 ಮಂಗಳೂರಲ್ಲಿ ಧರ್ಮ ರಾಜಕೀಯ ಇದೆ, ಬಿಜೆಪಿ ಅಭಿವೃದ್ಧಿ ಮಾಡ್ತಾ ಇಲ್ಲ. ಈ ಜಿಲ್ಲೆಯ ಬಗ್ಗೆ ನಾವು ಹೊಸ ಅಲೋಚನೆ ಮಾಡ್ತೀವಿ. ಉದ್ಯೋಗ ಸೃಷ್ಟಿಸ್ತೇವೆ, ಸಂಜೆ ಏಳು ಗಂಟೆ ಬಳಿಕ ಮಂಗಳೂರು ಡೆಡ್ ಸಿಟಿ ಆಗಿದೆ. ವ್ಯಾಪಾರ ವಹಿವಾಟು ನಡೆದು ಜನರಿಗೆ ಉದ್ಯೋಗ ಸಿಗಬೇಕು. ಇಲ್ಲಿನ ಬ್ಯಾಂಕ್ ಗಳು ಕೂಡ ಇಲ್ಲಿಂದ ಬೇರೆ ಕಡೆ ಹೋಗ್ತಾ ಇದೆ ಎಂದರು.

ಜೆರೋಸಾ ಶಾಲೆ ವಿಚಾರದಲ್ಲಿ ಕಾನೂನು ಪ್ರಕ್ರಿಯೆ ನಡೆಯುತ್ತೆ. ಯಾರೇ ರಾಜಕೀಯ ಮಾಡಿದ್ರೂ ಕಾನೂನು ಕೆಲಸ ಮಾಡಲಿದೆ ಎಂದ ಡಿಕೆಶಿ, ಅವರು ಹೋರಾಟ ಮಾಡ್ತಾ ಇರಲಿ, ಕಾನೂನು ಕೆಲಸ ಮಾಡುತ್ತೆ. ನಾನು ಪೊಲೀಸ್ ಕೆಲಸ ಮಾಡಲು ಆಗಲ್ಲ, ಪೊಲೀಸರು ಮಾಡ್ತಾರೆ. ನಮ್ಮ ರಾಜ್ಯಕ್ಕೆ ಅನ್ಯಾಯ ಆದಾಗ ಬಿಜೆಪಿ ಮಾತನಾಡಿಲ್ಲ. ಬಜೆಟ್‌ನಲ್ಲಿ ದ.ಕ ಜಿಲ್ಲೆಗೂ ಕೊಟ್ಟಿದ್ದೇವೆ, ಮುಸ್ಲಿಮರಿಗೆ ಕೂಡಲೇ ಬಾರದಾ?. ಬಿಜೆಪಿ ರಾಜಕಾರಣ ಮಾಡ್ತಾ ಇದೆ, ಅದು ಮಾಡಲಿ ಎಂದರು.

ನಾನು ದೇವೇಗೌಡ, ಕುಮಾರಸ್ವಾಮಿ ವಿರುದ್ದ ನಿಂತಿದ್ದವನು, ಅನಿತಾ ಕುಮಾರಸ್ವಾಮಿ ನನ್ನ ಸಹೋದರನ ವಿರುದ್ದ ನಿಂತರೂ ಗೆದ್ದಿದ್ದಾನೆ ಎಂದ ಡಿಕೆಶಿ, ಬಿಜೆಪಿ-ಜೆಡಿಎಸ್ ಒಟ್ಟಾಗಿ ನನ್ನ ಸಹೋದರನ ವಿರುದ್ದ ನಿಂತಾಗಲೂ ಗೆದ್ದಿದ್ದಾನೆ. ಸುರೇಶ್ ದೆಹಲಿಯಲ್ಲಿ ಕೂರುವ ಎಂಪಿ ಅಲ್ಲ, ಅವನು ಹಳ್ಳಿಯ ಎಂಪಿ. ಯಾರನ್ನೇ ನಿಲ್ಲಿಸಿದ್ರೂ ಮತದಾರ ಉತ್ತರ ಕೊಡ್ತಾನೆ,‌ ಮತದಾರ ಪ್ರಜ್ಞಾವಂತ ಇದಾನೆ. ಕುಮಾರಸ್ವಾಮಿ ನಿಂತರೂ ನನಗೆ ಯಾವುದೇ ಬೇಜಾರಿಲ್ಲ ಎಂದರು.

RELATED ARTICLES
- Advertisment -
Google search engine

Most Popular