ಮೈಸೂರು: ಮಕ್ಕಳು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂದು ದೀನಬಂಧು ಟ್ರಸ್ಟ್ ನ ಗೌರವ ಕಾರ್ಯದರ್ಶಿಗಳಾದ ಪ್ರೊ.ಜಿ.ಎಸ್.ಜಯದೇವ ತಿಳಿಸಿದರು.
ಜೂನ್ ೨೧ರಂದು ತಾಳವಾಡಿಯಲ್ಲಿ ಗಡಿನಾಡು ಸಾಂಸ್ಕೃತಿಕ ಉತ್ಸವದ ಸಮಾರೋಪದಲ್ಲಿ ಮಾತನಾಡುತ್ತಾ ಅವರು ತಿಳಿಸಿದರು.
ಇತ್ತೀಚೆಗೆ ಕನ್ನಡ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತದೆ. ತಾಳವಾಡಿಯಲ್ಲಿ ಶೇ.೬೦ರಷ್ಟು ಕನ್ನಡಿಗರಿದ್ದಾರೆ. ಸರ್ಕಾರ ಇದಕ್ಕೆ ಪೂರಕವಾಗಿ ಸ್ಪಂದಿಸಬೇಕು. ಕನ್ನಡದ ಸೋಲಿಗರ ಭಾಷೆ ತಮಿಳು ಮಿಶ್ರಿತ ಕನ್ನಡ. ಇದು ಭಾಷೆಗಳ ಸಾಮರಸ್ಯವನ್ನು ಬಿಂಬಿಸುತ್ತದೆ. ಗಡಿ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿಒತ್ತು ನೀಡಬೇಕು ಎಂದು ಹೇಳಿದರು.
ವಲಯ ಆರಣ್ಯಾಧಿಕಾರಿಗಳಾದ ಡಾ.ಎಸ್. ಸತೀಶ್‌ರವರು ಕನ್ನಡ ಮತ್ತು ತಮಿಳು ಭಾಷೆಗಳು ದ್ರಾವಿಡ ಇವರುಗಳು ಒಗ್ಗಟ್ಟಾಗಿದ್ದಾರೆ. ಸಾಂಸ್ಕೃತಿಕವಾಗಿ ತಮಿಳು ಮತ್ತುಕನ್ನಡ ಪ್ರದೇಶವನ್ನು ಆಳಿದ ಚೋಳರು, ಚೇರರು ಹಾಗೂ ಪಾಂಡ್ಯರ ಕಾಲದ ದೇವಸ್ಥಾನದ ಗೋಪುರಗಳು ಒಂದೇ ರೀತಿಯಾಗಿವೆ. ಸಾಂಸ್ಕೃತಿಕವಾಗಿ ಸಾಮ್ಯತೆಯನ್ನು ಹೊಂದಿವೆ. ಭರತನಾಟ್ಯವು ಕರ್ನಾಟಕದ್ದಾಗಿದ್ದರೂ ಸಹ ತಮಿಳುನಾಡಿನಲ್ಲಿ ಅದನ್ನು ಗೌರವಿಸಿ ಪ್ರಸ್ತುತಪಡಿಸಲಾಗುತ್ತಿದೆ. ಸಾಹಿತ್ಯದಲ್ಲಿಯೂ ಸಹ ತಮಿಳು ಹಾಗೂ ಕನ್ನಡ ಎರಡು ಒಂದೇ ರೀತಿಯಲ್ಲಿವೆೆ. ತಮಿಳರು ಹಾಗೂ ಕನ್ನಡಿಗರು ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದಾರೆ ಎಂದು ತಿಳಿಸಿದರು.
ಸರ್ಕಲ್ ಇನ್ಸ್ ಪೆಕ್ಟರ್ ರಾದ ಕೆ.ಸೆಲ್ವನ್‌ರವರು ಮಾತನಾಡಿದರು.
ಎಂ.ಸೋಮಶೇಖರ ಮೂರ್ತಿ ಸ್ವಾಗತಿಸಿದರು. ಆರ್.ಎಂ.ಸ್ವಾಮಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.