28ಲಕ್ಷ ರೂ ವೆಚ್ಚದ ನವಗ್ರಹ ದೇವಾಲಯ ಅಂಬೇಡ್ಕರ್ ಭವನ ಕಾಮಗಾರಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ದೇವಸ್ಥಾನಗಳನ್ನು ಕಟ್ಟುವಷ್ಟೇ ಉತ್ಸಾಹವನ್ನು ಸಮುದಾಯಗಳನ್ನು,, ಮನಸ್ಸುಗಳನ್ನು ಕಟ್ಟಲು ಭಾತೃತ್ವವನ್ನು ಬೆಳೆಸಲು ತೋರಬೇಕು ಎಂದು ಶಾಸಕ ಡಿ ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಸುಮಾರು 28ಲಕ್ಷ ರೂಗಳ ವೆಚ್ಚದ ನವಗ್ರಹ ದೇವಾಲಯ ಅಂಬೇಡ್ಕರ್ ಭವನ ಮುಂದುವರಿದ ಕಾಮಗಾರಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಡವರ ಪರವಾದ ನಿಲುವನ್ನು ಹೊಂದಿದ್ದು ರಾಜ್ಯದ ಅಭಿವೃದ್ಧಿಗೆ ಕಟಿಬದ್ಧವಾಗಿದೆ ತಾಲೂಕಿನಲ್ಲಿ ಕಳೆದ 20 ವರ್ಷಗಳಿಂದಲೂ ಅಭಿವೃದ್ಧಿ ಹೊಂದದ ಗ್ರಾಮಗಳನ್ನು ಪಟ್ಟಿ ಮಾಡಿದ್ದು ಅವುಗಳ ಅಭಿವೃದ್ಧಿಗೆ ಸೂಕ್ತ ಅನುದಾನವನ್ನು ಒದಗಿಸಲು ನಾನು ಬದ್ಧ ಎಂದು ತಿಳಿಸಿದರು.
ಚುಂಚನಕಟ್ಟೆ ಹೋಬಳಿಯ ವಿವಿಧ ಗ್ರಾಮಗಳ ಅಭಿವೃದ್ಧಿಗಾಗಿ ಹಲವು ಇಲಾಖೆಗಳಿಂದ ಮುಂಬರುವ ದಿನಗಳಲ್ಲಿ ಅನುದಾನ ಮೀಸಲಿಡಲಾಗುತ್ತಿದ್ದು ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ,ಗ್ರಾಪಂ ಉಪಾಧ್ಯಕ್ಷ ಸುಕನ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್ , ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಎಸ್ ಮಾದೇವ, ವಕ್ತಾರ ಜಬೀರ್, ರಂಗೇ ಗೌಡರು, ನಿವೃತ್ತ ಶಿಕ್ಷಕ ನಾಗರಾಜ ಗೌಡ್ರು, ಎಸ್ ಸಿ ಘಟಕದ ಕಂಠಿ ಕುಮಾರ್,ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು ವಿಶ್ವನಾಥ್, ಜಯರಾಮೇಗೌಡ, ಕೃಷ್ಣೇಗೌಡ, ರಾಮರಾಜು, ಪಾಲಾಕ್ಷ, ಯೂಥ್ ಕಾಂಗ್ರೆಸ್ ಅಧ್ಯಕ್ಷರಾದ ಕೆಂಚಿ ಮಂಜು, ಹೇಮಂತ್, ಮಾಜಿ ಅಧ್ಯಕ್ಷ ಗೌರಮ್ಮ, ಶ್ರೀರಾಂಪುರ ಡೈರಿ ಅಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷೆ ಶಶಿಕಲಾ ಗುತ್ತಿಗೆದಾರ ಆನಂದ್ ಸೇರಿದಂತೆ ಮತ್ತಿತರರು ಹಾಜರಿದ್ದರು.