ರಾಮನಗರ: ಆರೋಗ್ಯಕ್ಷೇತ್ರಕ್ಕೆ ಸಂಬಂಧಿಸಿದ ಸಭೆಗಳಲ್ಲಿ ಗಂಭೀರ ವಿಷಯಗಳು ಚರ್ಚೆ ಯಾಗುವ ಕಾರಣ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಇಂದು ನಡೆದ ತ್ರೈಮಾಸಿಕ ಜಿಲ್ಲಾ ಸಮನ್ವಯ ಸಮಿತಿ ಸಭೆಗೆಗೈರು ಹಾಜರಾದ ಅಧಿಕಾರಿಗಳಿಗೆ ಶೋಕಸ್ ನೋಟಿಸ್‌ನೀಡಿ,ಕಟ್ಟುನಿಟ್ಟಿನಕ್ರಮ ಕೈಗೊಳ್ಳಲಾಗುವುದು ಎಂದುಅಪರಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರುಎಚ್ಚರಿಕೆ ನೀಡಿದರು.
ಅವರು ಜೂ.೨೮ರ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಅಪರ ಜಿಲ್ಲಾಧಿಕಾರಿಗಳ ಕೊಠಡಿಯಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತೈಮಾಸಿಕ ಸಮನ್ವಯ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಶೀಲ್ದಾರರು, ತಾಲ್ಲೂಕುಪಂಚಾಯತ್‌ಕಾರ್ಯ ನಿರ್ವಣಾಧಿಕಾರಿಗಳು,ಅಬಕಾರಿ ಇಲಾಖೆ, ಕೆ.ಎಸ್.ಆರ್.ಟಿ.ಸಿ, ನಗರ-ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಆಹಾರ ಮತ್ತು ಗುಣ ಮಟ್ಟದ ಅಂಕಿತಾ ಅಧಿಕಾರಿ, ಕಾನೂನು ಮಾಪನ ಇಲಾಖೆ, ಕಾರ್ಮಿಕ ಇಲಾಖೆ, ಶಿಶು ಅಭಿವೃದ್ಧಿ, ಪರಿಸರ ಮಾಲಿನ್ಯಅಧಿಕಾರಿ,ಪ್ರವಾಸೋದ್ಯಮ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥರು ಸಭೆಗೆ ಹಾಜರಾಗಬೇಕು ಆದರೆಈ ಅಧಿಕಾರಿಗಳು ಗೈರು ಹಾಜರಾದಕಾರಣ ಸಭೆಯಲ್ಲಿ ಗಂಭೀರ ಚರ್ಚೆಗೆ ಅವಕಾಶವಾಗಿರುವುದಿಲ್ಲ ಆದಕಾರಣಇವರೆಲ್ಲರಿಗೂತಮ್ಮ ಸಹಿಯುಳ್ಳ ಶೋಕಾಸ್ ನೋಟಿಸ್‌ಜಾರಿ ಮಾಡುವಂತೆ ಸಂಬಂಧಿಸಿದವರಿಗೆ ಸೂಚನೆ ನೀಡಿದರು.
ಈ ಸಭೆಯನ್ನು ಇದೇ ಜುಲೈ ೮ಕ್ಕೆ ಮುಂದೂಡಿದ್ದು, ಅಷೋರೊಳಗೆ ತಾಲ್ಲೂಕು ಮಟ್ಟದಲ್ಲಿ ಮಾಡಬೇಕಾದ ಸಭೆಗಳನ್ನು ಪೂರ್ಣಗೊಳಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದರು. ಹಿಂದಿನಜಿಲ್ಲಾ ಸಮನ್ವಯ ಸಮಿತಿ ಅನುಪಾಲನ ವರದಿ ನೀಡುವುದು ಹಾಗೂಶಾಲಾ ವಲಯದ ೧೦೦ ಮೀಟರ್ ವ್ಯಾಪ್ತಿಯಲ್ಲಿತಂಬಾಕು ಮುಕ್ತ, ಮಾರಾಟ ನಿಷೇಧಕ್ಕೆ ಸಂಬಂಧಿಸಿದಂತೆ ಬಾಕಿ ಉಳಿದ ಪ್ರಕರಣಗಳಿಗೆ ೨೦೨೪-೨೫ ನೇ ಸಾಲಿನ ಕೋಟ್ಪಾ ಕಾರ್ಯಚರಣೆ ನೀಡುವಗುರಿಯನ್ನು ಅನುಷ್ಠನಗೊಳಿಸಲು ತಾಲ್ಲೂಕು ತನಿಖಾಧಿಕಾರಿಗಳ ಕಾರ್ಯಚರಣೆ ನಡೆಸಿರುವ ಬಗ್ಗೆ ಅಗತ್ಯ ವರದಿ ನೀಡುವಂತೆಸಭೆಯಲ್ಲಿ ತಿಳಿಸಿದರು.
ಆರೋಗ್ಯಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಚುನಾವಣೆಯಯಾವುದೇ ಕೆಲಸಕಾರ್ಯಗಳಿಗೆ ನಿಯೋಜನೆ ಮಾಡುವುದಿಲ್ಲ ಆದಕಾರಣಅವರು ಕಾಲಕಾಲಕ್ಕೆ ತಮ್ಮ ವ್ಯಾಪ್ತಿಯಲ್ಲಿನಿರ್ವಹಿಸಬೇಕಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿನಿರ್ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳುಡಾ.ನಿರಂಜನ್, ಜೆ.ಆರ್.ಸಿ.ಎಚ್.ಅಧಿಕಾರಿಡಾ.ರಾಜು, ಜಿಲ್ಲಾ ಸರ್ವೇಕ್ಷಣಾಧಿಕಾರಿಅಧಿಕಾರಿಕಿರಣ್ ಶಂಕರ್, ಚನ್ನಪಟ್ಟಣದತಾಲ್ಲೂಕುಅರೋಗ್ಯಆಧಿಕಾರಿಡಾ.ರಾಜು ಕೆ. ಮಾಗಡಿಯಆರೋಗ್ಯಆಧಿಕಾರಿಡಾ.ರಾಮಚಂದ್ರ.ಟಿ ಹಾಗೂ ಇತರರು ಉಪಸ್ಥಿತರಿದ್ದರು.