Friday, April 18, 2025
Google search engine

Homeರಾಜ್ಯನಿಮ್ಮ ಪಂಚೆ ಕಪ್ಪು ಮಸಿಯಾಗುವ ಮುಂಚೆ ನಿವೇಶನಗಳ ಒಪ್ಪಿಸಿ ದೊಡ್ಡತನ ತೋರಿಸಿ: ಸಿದ್ದರಾಮಯ್ಯಗೆ ಹೆಚ್ ವಿಶ್ವನಾಥ್...

ನಿಮ್ಮ ಪಂಚೆ ಕಪ್ಪು ಮಸಿಯಾಗುವ ಮುಂಚೆ ನಿವೇಶನಗಳ ಒಪ್ಪಿಸಿ ದೊಡ್ಡತನ ತೋರಿಸಿ: ಸಿದ್ದರಾಮಯ್ಯಗೆ ಹೆಚ್ ವಿಶ್ವನಾಥ್ ಸಲಹೆ

ಮೈಸೂರು: ನಿಮ್ಮ ಪಂಚೆ ಕಪ್ಪು ಮಸಿಯಾಗುವ ಮುಂಚೆ ನಿವೇಶನಗಳ ಒಪ್ಪಿಸಿ ದೊಡ್ಡತನ ತೋರಿಸಪ್ಪಾ ಎಂದು ಸಿಎಂ ಸಿದ್ದರಾಮಯ್ಯಗೆ ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್.ವಿಶ್ವನಾಥ್‌ ಸಲಹೆ ನೀಡಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಇವತ್ತೂ ಕೂಡ ಹೇಳ್ತಾ ಇದ್ದೀನಿ ಸಿದ್ದರಾಮಯ್ಯ , ನಿಮಗೆ ಬಂದಿರುವ 14 ನಿವೇಶನ ವಾಪಸ್ ಕೊಡಿ. ಆಗ ನಿಮ್ಮ ಘನತೆ ಹೆಚ್ಚುತ್ತೆ, ನೀವೊಬ್ಬ ಸಮಾಜವಾದಿ ಅನ್ನುವುದಕ್ಕೆ ಅರ್ಥ ಬರುತ್ತದೆ. ಇರುವ ಒಬ್ಬ ಮಗನಿಗೆ ಇನ್ನೆಷ್ಟು ಬೇಕು‌? ಒಬ್ಬ ಮಗ ಸತ್ತುಹೋದ ಒಬ್ಬ ಇದ್ದಾನೆ ಸಾಕಲ್ವ? ಬಂದಿರುವ ನಿವೇಶನ ವಾಪಸ್ ಮಾಡಿ ದೊಡ್ಡ ತನ ಮೆರಿಯಪ್ಪ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಅವರುಗಳು ತಮ್ಮ ಮಕ್ಕಳಿಗೆ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ ಎಂದರು.

ರಾಜಕೀಯ ನಾಯಕರಿಗೆ ರಾಜ್ಯದ ಹಿತಾಸಕ್ತಿಗಿಂತ ಕೌಟುಂಬಿಕ ಹಿತಾಸಕ್ತಿ ಮುಖ್ಯ

ಎಚ್.ಡಿ.ಕುಮಾರಸ್ವಾಮಿ ತಮ್ಮ ಮಗ ನಿಖಿಲ್‌ ನನ್ನು ಮುಂದೆ ತರಬೇಕು ಅಂತ, ಯಡಿಯೂರಪ್ಪ ಅವರ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ ಅವರನ್ನು ಮುಂದೆ ತರಬೇಕು ಅಂತ, ಸಿದ್ದರಾಮಯ್ಯ ಅವರ ಮಗನಾದ ಯತೀಂದ್ರ ನನ್ನು ಮುಂದೆ ತರಬೇಕು ಅಂತ ಪಣತೊಟ್ಟಿದ್ದಾರೆ. ಆದ್ದರಿಂದ ಈ ರಾಜಕೀಯ ನಾಯಕರಿಗೆ ರಾಜ್ಯದ ಹಿತಾಸಕ್ತಿಗಿಂತ ಅವರ ಕೌಟುಂಬಿಕ ಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ವ್ಯಂಗ್ಯವಾಡಿದರು.

ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡದೆ ಇವರ ಬೇಳೆ ಬೇಯಿಸಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ. ಈಗ ಎರಡು ಯಾತ್ರೆಗಳು ನಡೆಯುತ್ತಿವೆ. ಒಂದು ಕಾಂಗ್ರೆಸ್ ನ ಜನಾಂದೋಲನ ಮತ್ತೊಂದು ಬಿಜೆಪಿ ಜೆಡಿಎಸ್ ಪಾದಯಾತ್ರೆ. ಯಾವ ಪುರುಷಾರ್ಥಕ್ಕೆ ಮಾಡ್ತಾ ಇದ್ದಾರೋ ಗೊತ್ತಿಲ್ಲ. ಪರಸ್ಪರ ಕೆಸರೆರಚಾಟ ಮಾತಿನ ಪ್ರಯೋಗಗಳು ಅಸಹ್ಯ ಹುಟ್ಟಿಸುತ್ತಿವೆ. ನೀನು ಕಳ್ಳ,ನಿಮ್ಮಪ್ಪ ಕಳ್ಳ ಅಂತ ಮೂರು ಪಕ್ಷದವರೂ ಹೊಡೆದಾಡುತ್ತಿದ್ದಾರೆ ಎಂದು ಮೂರು ಪಕ್ಷಗಳ ನಡೆಗೆ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯ ಕಗ್ಗೊಲೆ ಮಾಡ್ತಾ ಇದ್ದಾರೆ . ಎಚ್ಡಿಕೆ, ಡಿಕೆಶಿ ಪರಸ್ಪರ ಏಕವಚನದಲ್ಲಿ ಕಿತ್ತಾಡುತ್ತಿರುವುದು ನೋಡಿದರೆ ಥೂ…ಛೀ…ಎನಿಸುತ್ತಿದೆ. ನಮ್ಮ ಕನ್ನಡ ಚಳುವಳಿಗಾರು ಈಗ ಸಿಡಿದೇಳಬೇಕು ಎಲ್ಲೋದ್ರು ನಮ್ಮ ಕನ್ನಡ ಚಳುವಳಿಗಾರರು.? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ನವರು ಮೂರೂ ಬಿಟ್ಟವರಂತೆ ವರ್ತಿಸುತ್ತಿದ್ದಾರೆ. ಕನ್ನಡ ಭಾಷೆ ಅತ್ಯಾಚಾರ ಆಗ್ತಾ ಇದೆ. ಜನರ ಬಳಿ ಇವರು ಬೆತ್ತಲಾಗುತ್ತಿದ್ದಾರೆ. ಏಕವಚನದ ರೂವಾರಿ ನಮ್ಮ ಸಿದ್ದರಾಮಯ್ಯ. ಹೇ…ಹೇ… ಎಂದು ಮಾತನಾಡುತ್ತ ನಾಂದಿ ಹಾಕೊಟ್ಟಿದ್ದಾರೆ ಎಂದರು.

RELATED ARTICLES
- Advertisment -
Google search engine

Most Popular