ಮೈಸೂರು: ಶ್ರಾವಣ ಶನಿವಾರ ಪ್ರಯುಕ್ತ ಶ್ರೀನಿವಾಸ ಭಕ್ತ ಮಂಡಳಿ ವತಿಯಿಂದ ಒಂಟಿಕೊಪ್ಪಲು ಲಕ್ಷ್ಮಿವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ 10ಸಾವಿರ ಲಾಡು ವಿತರಣೆಗೆ ಚಾಮರಾಜ ಕ್ಷೇತ್ರದ ಶಾಸಕರಾದ ಕೆ.ಹರೀಶ್ ಗೌಡ ರವರು ಚಾಲನೆ ನೀಡಿದರು.

ನಂತರ ಶಾಸಕರಾದ ಕೆ. ಹರೀಶ್ ಗೌಡ ರವರು ಮಾತನಾಡಿ ಶ್ರಾವಣ ಮಾಸದ ಶನಿವಾರದಂದು ವೆಂಕಟೇಶ್ವರ ಸನ್ನಿಧಿಯಲ್ಲಿ ಭಕ್ತಸಮೂಹ ಧಾರ್ಮಿಕ ಸೇವೆ ಪ್ರಾರ್ಥನೆ ಸಂಕಲ್ಪ ನೆರವೇರಿಸುತ್ತಾರೆ, ಶ್ರೀನಿವಾಸ ಭಕ್ತ ಮಂಡಳಿ ವತಿಯಿಂದ ದೇವರಿಗೆ ಪ್ರಿಯವಾದ ಲಾಡು ವಿತರಣೆಯಂತಹ ಸೇವಾ ಕಾರ್ಯ ಶ್ಲಾಘನೀಯ, ಮುಂದಿನ ದಿನದಲ್ಲಿ ಸಾಂಸ್ಕೃತಿಕ ಭರಟನಾಟ್ಯ, ಭಜನೆ, ಸಂಗೀತ ಕಾರ್ಯಕ್ರಮಗಳು, ಶ್ರೀನಿವಾಸ ಕಲ್ಯಾಣ, ತಿರುಪತಿ ಪ್ರವಾಸ ಹಮ್ಮಿಕೊಳ್ಳಲು ಶ್ರೀನಿವಾಸ ಭಕ್ತ ಮಂಡಳಿ ವತಿಯಿಂದ ಸಮಿತಿ ರಚಿಸಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಶಾಸಕರಾದ ಕೆ. ಹರೀಶ್ ಗೌಡ, ದೇವಸ್ಥಾನದ ಅಧ್ಯಕ್ಷರಾದ ಕೆ ಆರ್ ಮೋಹನ್ ಕುಮಾರ್, ಟ್ರಸ್ಟಿ ರಾಮಣ್ಣ, ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್, ಉದ್ಯಮಿ ಸ್ವೀಟ್ ಮಹೇಶ್, ಮಹೇಶ್ ಶೆಣೈ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ರವಿ ಮಂಜೇಗೌಡನ ಕೊಪ್ಪಲು, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ವಿಕ್ರಮ್ ಅಯ್ಯಂಗಾರ್, ರಾಕೇಶ್, ಅಜಯ್ ಶಾಸ್ತ್ರಿ, ಜಿ ರಾಘವೇಂದ್ರ, ವಿನಯ್ ಕುಮಾರ್, ದುರ್ಗಾ ಪ್ರಸಾದ್, ಎಸ್ ಎನ್ ರಾಜೇಶ್, ಚೇತನ್ ಕಾಂತರಾಜು, ಬೈರತಿ ಲಿಂಗರಾಜು, ಸುಚಿಂದ್ರ ಹಾಗೂ ಇನ್ನಿತರರು ಇದ್ದರು.