ಪಿರಿಯಾಪಟ್ಟಣ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆಯುವ ಶ್ರೀ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ಅವರನ್ನು ತಾಲೂಕು ಆಡಳಿತ ಮತ್ತು ತಾಲೂಕು ಕುರುಬ ಸಮಾಜ ಹಾಗೂ ಯುವ ಕುರುಬ ಸಮಾಜ ವತಿಯಿಂದ ಸನ್ಮಾನಿಸಿ ಆಹ್ವಾನಿಸಲಾಯಿತು.
ನ.30 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು ಸಮಾಜದ ಬಾಂಧವರು ಸೇರಿದಂತೆ ತಾಲೂಕಿನ ಜನತೆ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸುವಂತೆ ತಾಲೂಕು ಯುವ ಕುರುಬ ಸಮಾಜ ಅಧ್ಯಕ್ಷ ಪಂಚವಳ್ಳಿ ಲೋಹಿತ್ ಕೋರಿದ್ದಾರೆ.
ಇದೆ ವೇಳೆ ಆಶ್ರಯ ಸಮಿತಿ ಅಧ್ಯಕ್ಷ ಕೆಪಿಸಿಸಿ ಸದಸ್ಯ ಸಚಿವರ ಪುತ್ರ ನಿತಿನ್ ವೆಂಕಟೇಶ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.ಈ ಸಂದರ್ಭ ತಹಶೀಲ್ದಾರ್ ಕುಂ ಇ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ ಸ್ವಾಮಿ, ಮುಖಂಡರಾದ ಸಾಲುಕೊಪ್ಪಲು ಪುಟ್ಟರಾಜ್ ಮತ್ತಿತರಿದ್ದರು.
