ಮೈಸೂರು: ಮುಸ್ಲಿಮರಿಗೇ ಮತದಾನದ ಹಕ್ಕನ್ನು ರದ್ದುಗೊಳಿಸಬೇಕೆಂದು ಅಭಿಪ್ರಾಯಿಸಿದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಚಂದ್ರಶೇಖರ ಸ್ವಾಮೀಜಿ ವಿರುದ್ಧ ಪೊಲೀಸರು ಎಫ್. ಐ. ಅರ್. ದಾಖಲಿಸಿರುವುದು ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ ಎಂದು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪಡುವಾರಹಳ್ಳಿ ರವಿ ಖಂಡಿಸಿದ್ದಾರೆ.
ದೇಶದ ಪ್ರಜಾಪ್ರಭುತ್ವದ ಹಿತ ದೃಷ್ಟಿಯಿಂದ ಮತ್ತು ಸಾಮಾಜಿಕ ಕಳಕಳಿಯಿಂದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಮುಸ್ಲಿಮರಿಗೇ, ಈಗಿರುವಂತೆ ಮತದಾನದ ಹಕ್ಕನ್ನು ರದ್ಧು ಪಡಿಸಿ, ಪಾಕಿಸ್ತಾನದಲ್ಲಿ ಪಾಕಿಸ್ತಾನಲ್ಲಿ ಅಲ್ಪ ಸಂಖ್ಯಾತರಿಗಿರುವಂತೆ ಮತ ದಾನದ ಹಕ್ಕು ನೀಡಬೇಕೆಂದು ಹೇಳಿದ್ದಾರೆ. ಇದು ದೇಶದಲ್ಲಿರುವ ಅಭಿವ್ಯಕ್ತಿ ವ್ಯಕ್ತಿ ಸ್ವಾತಂತ್ರ್ಯದ ಅಡಿ ಮಾತಾಡಿದ್ದಾರೆ. ಇವರು ಆಡಿರುವ ಮಾತಲ್ಲಿ ಯಾವ ತಪ್ಪುಗಳು ಇಲ್ಲಾ ಎಂದು ಪಡುವಾರಹಳ್ಳಿ ರವಿ ಅಭಿಪ್ರಾಯ ಪಟ್ಟಿದ್ದಾರೆ.
ಮಹಾನ್ ಪ್ರಾಜ್ಞರಾದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಯಾವ ದೃಷ್ಟಿ ಕೋನದಿಂದ ಮುಸ್ಲಿಮರಿಗೇ ಮತದಾನದ ಹಕ್ಕನ್ನು ರದ್ದು ಪಡಿಸಿ ಎಂದು ಹೇಳಿದ್ದಾರೆ ಅಂತ ವಿಚಾರ ವಿಮರ್ಶೆ ಮಾಡುವ ಬದಲು ಅವರ ವಿರುದ್ಧ ಸರ್ಕಾರ ಎಫ್ ಐ ಅರ್ ಹಾಕಿ ಬೆದರಿಸುವ ತಂತ್ರ ಅನುಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರ್ಮಿಕ ಅಲ್ಪ ಸಂಖ್ಯಾತರ ಮತಗಳನ್ನು ರಾಜಕೀಯ ಪಕ್ಷಗಳು ಆಮಿಷ ಒಡ್ಡಿ ದುರುಪಯೋಗಪಡಿಸಿಕೊಳ್ಳಬಹುದೇಂಬ ಕಾರಣದಿಂದಲೇ ಪಾಕಿಸ್ತಾನದಲ್ಲಿ ಆಯಯಾ ಧರ್ಮದವರು, ತಮ್ಮ ಸ್ವಧರ್ಮಿಯರಿಗೇ ಮತನೀಡಬೇಕೆಂಬ ಕಾನೂನು ತಂದಿದ್ದಾರೆ. ಇದರಿಂದ ಅಲ್ಲಿ ಅಲ್ಫಸಂಖ್ಯಾತರನ್ನು ಬಹುಸಂಖ್ಯಾತರು ಓಲೈಸುವ ಪ್ರಯತ್ನಗಳು ನಡೆಯುತ್ತಿಲ್ಲ. ಆದರೇ ಭಾರತದಲ್ಲಿ ಸರ್ವರಿಗೂ ಒಂದೇ ರೀತಿಯ ಮತದಾನದ ಹಕ್ಕು ಕೊಟ್ಟಿರುವುದರಿಂದ ಅಲ್ಪ ಸಂಖ್ಯಾತರನ್ನು ರಾಜಕೀಯ ಪಕ್ಷಗಳು ಓಲೈಸುತ್ತಾ ಅವರನ್ನು ಹಾದಿ ತಪ್ಪಿಸುತ್ತಿದ್ದಾರೆ. ಇದರಿಂದ ಭಾರತದ ಸಮಗ್ರತೆಗೆ ಮತ್ತು ಜಾತ್ಯತೀತ ವ್ಯವಸ್ಥೆಗೇ ತೊಡಕಾಗಿದೆ. ಹೀಗಾಗಿ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಅವರ ಅಭಿಪ್ರಾಯವನ್ನು ಗೌರವಿಸಿ, ಚರ್ಚೆಗೇ ಸ್ವೀಕರಿಸಬೇಕೇ ಹೊರತು, ಅವರ ವಿರುದ್ಧ ಕೇಸ್ ಹಾಕಿ ಬೇಡರಿಸುವ ತಂತ್ರ ಅನುಸರಿಸ ಬಾರದು ಎಂದು ತಿಳಿದ್ದಾರೆ.
ದೇಶದ ಬಹುತೇಕ ರಾಜಕೀಯ ಪಕ್ಷಗಳು ಅಲ್ಫಸಂಖ್ಯಾತ ಮುಸ್ಲಿಮರನ್ನು ಓಲೈಕೆ ರಾಜಕಾರಣ ಮಾಡುತ್ತಿರುವುದರಿಂದಲೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗುತ್ತಿದೆ. ಧಾರ್ಮಿಕ ಮುಖಂಡರ ಹಿಡಿತಕ್ಕೆ ಸಿಲುಕಿರುವ ಮುಸ್ಲಿಮರು ಸ್ವಬುದ್ದಿಯಿಂದ ಮತ ಚಲಾಯಿಸದೆ, ತಮ್ಮ ಧಾರ್ಮಿಕ ಮುಖಂಡರ ಅಣತಿಯಂತೆ ಮತ ಚಲಾಯಿಸುತ್ತಿದ್ದಾರೆ. ಇದಕ್ಕಾಗಿ ರಾಜಕೀಯ ಪಕ್ಷಗಳು ಧಾರ್ಮಿಕ ಮುಖಂಡರ ಮನೆಗೇ ಎಡತಾಕುವುದು ಸುಳ್ಳೇ ಎಂದು ಅವರು ಪ್ರಶ್ನಿಸಿದ್ದಾರೆ.
ಮುಸ್ಲಿಮರ ಮತಗಳನ್ನು ಅವರ ಧಾರ್ಮಿಕ ಮುಖಂಡರು ಹಿಡಿದಿಟ್ಟುಕೊಳ್ಳುವ ಪ್ರಯತ್ನದಿಂದಾಗಿಯೇ ಜಾತ್ಯತೀತ ಜನತಾದಳ ಇತ್ತೀಚಿನ ಚುನಾವಣೆಗಳಲ್ಲಿ ಮುಸ್ಲಿಮರ ಮತಗಳು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಈ ಹಿಂದೆ ಮುಸ್ಲಿಮರಿಗಾಗಿ ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡರು ಮತ್ತು ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಮಾಡಿದ ತ್ಯಾಗವೆಲ್ಲ ವ್ಯರ್ಥವಾಗಿದೆ ಎಂದು ವಿಷಾದಿಸಿದ್ದಾರೆ.
1997ರಲ್ಲಿ ಕೇಂದ್ರದ ಹೆಚ್. ಡಿ. ದೇವೇಗೌಡರ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಂಡಾಗ ಹಿಂತೆಗೆದುಕೊಂಡಾಗ ಬಿಜೆಪಿ ಬೆಂಬಲ ಕೊಡಲು ಮುಂದಾಗಿತ್ತು. ಆದರೇ ದೇವೇಗೌಡರು ಕೋಮುವಾದಿ ಬಿಜೆಪಿಯೊಂದಿಗೆ ಕೈ ಜೋಡಿಸುವುದಿಲ್ಲ ಅಂತ ರಾಜೀನಾಮೆ ಕೊಟ್ಟು ಹೊರಬಂದರು. ಇದಾದ ಹತ್ತು ವರ್ಷಕ್ಕೆ 2007ರಲ್ಲಿ ಕೋಮುವಾದಿ ಬಿಜೆಪಿಗೆ ಅಧಿಕಾರ ನೀಡಬಾರದು ಅಂತ ಯಡಿಯೂರಪ್ಪರಿಗೇ ಅಧಿಕಾರ ಹಸ್ತಾಂತರ ಮಾಡದೇ ಹೆಚ್. ಡಿ. ಕುಮಾರಸ್ವಾಮಿ ತಮ್ಮ ಉಜ್ವಲವಾದ ರಾಜಕೀಯ ಭವಿಷ್ಯ ಹಾಳು ಮಾಡಿಕೊಂಡರು. ಹೀಗೇ ಜಾತ್ಯತೀತತೆಗಾಗಿ ಅಧಿಕಾರ ತ್ಯಾಗ ಮಾಡಿದ ಜೆಡಿಎಸ್ ಪಕ್ಷವನ್ನು ಮುಸ್ಲಿಮರು ಚನ್ನಪಟ್ಟಣ ಚುನಾವಣೆಯಲ್ಲಿ ಬೆಂಬಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀ ಚಂದ್ರ ಶೇಖರನಾಥ ಸ್ವಾಮೀಜಿ ಮಾತಾಡಿದ್ದಾರೆ. ಇದರಲ್ಲಿ ಯಾವ ಕಾನೂನಿನ ತಪ್ಪುಗಳನ್ನು ಮಾಡಿಲ್ಲ ಎಂದು ಅವರ ಮಾತನ್ನು ಬಲವಾಗಿ ಸಮರ್ಥಿಸಿದ್ದಾರೆ.
ಈಗಲೂ ಸರ್ಕಾರ ತನ್ನ ಅಲ್ಪ ಸಂಖ್ಯಾತ ಓಲೈಕೆ ರಾಜಕಾರಣ ಮಾಡದೇ, ಚಂದ್ರಶೇಖರ ನಾಥ ಸ್ವಾಮೀಜಿ ಯಾವ ದೃಷ್ಟಿ ಕೋನದಿಂದ ಮಾತಾಡಿದ್ದಾರೆ, ಆ ಬಗ್ಗೆ ಸಾರ್ವಜನಿಕ ಹಾಗೂ ಸಾಂವಿಧಾನಿಕ ಚರ್ಚಿಗಳಾಗಲಿ. ಸರಿಯಾದ ಮಾರ್ಗ ಸೂಚಿಗಳು ಚುನಾವಣೆಗಳಲ್ಲಿ ಅಡಕವಾಗಲಿ. ಅಲ್ಪ ಸಂಖ್ಯಾತ ಮುಸ್ಲಿಮರ ಮತಗಳನ್ನು ಬಹುಸಂಖ್ಯಾತರ ರಾಜಕೀಯ ಪಕ್ಷಗಳು ದುರುಪಯೋಗಪಡೀಸಿಕೊಳ್ಳುತ್ತಿರುವುದು ಕಂಡು ಬಂದರೆ, ಮತದಾನದ ಹಕ್ಕುಗಳು ಪುನರ್ ಪರಿಶೀಲನೆಗೊಳಗಾಗಲಿ. ಪ್ರಜ್ಞಾವಂತ ಹಿರಿಯ ಯತಿಗಳ ಮಾತಿಗೆ ಮನ್ನಣೆ ಸಿಗಲಿ ಎಂದು ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಪಡುವಾರಹಳ್ಳಿ ರವಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.