Friday, April 18, 2025
Google search engine

Homeರಾಜ್ಯಸುದ್ದಿಜಾಲಭಾವಸಾರ ಕ್ಷತ್ರಿಯ ಯುವ ಪರಿಷತ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ, ಗುರುವಂದನ ಕಾರ್ಯಕ್ರಮ

ಭಾವಸಾರ ಕ್ಷತ್ರಿಯ ಯುವ ಪರಿಷತ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ, ಗುರುವಂದನ ಕಾರ್ಯಕ್ರಮ

ಪಿರಿಯಾಪಟ್ಟಣ: ಪಟ್ಟಣದ ಭಾವಸಾರ ಕ್ಷತ್ರಿಯ ಯುವ ಪರಿಷತ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ಗುರುವಂದನ ಕಾರ್ಯಕ್ರಮ ನಡೆಯಿತು.

ಪಟ್ಟಣದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐದು ವರ್ಷ ಹಾಗೂ ಮೇಲ್ಪಟ್ಟ ಮಕ್ಕಳಿಗೆ ರಾಧಾಕೃಷ್ಣ ಛದ್ಮವೇಷ ಸ್ಪರ್ಧೆ ನಡೆಯಿತು, ತೀರ್ಪುಗಾರರಾಗಿ ಆಗಮಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ಮಾತನಾಡಿ ಭಾವಸಾರ ಕ್ಷತ್ರಿಯ ಸಮಾಜದವರೆಲ್ಲ ಸಂಘಟಿತರಾಗುವ ಉದ್ದೇಶದಿಂದ ಶಿಕ್ಷಕರ ದಿನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಒಟ್ಟಾಗಿ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ.

ಮುಂಬರುವ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಗಳು ಮತ್ತಷ್ಟು ಸಾರ್ವಜನಿಕವಾಗಿ ಹೆಚ್ಚಾಗಲಿ, ಸಣ್ಣ ಸಮಾಜಗಳು ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಸಂಘಟನೆ ಬಹುದೊಡ್ಡ ಪಾತ್ರವಹಿಸುತ್ತದೆ ಸಮಾಜದ ಯುವಕರು ಒಟ್ಟಾಗಿ ಸೇರಿ ಯುವ ಪರಿಷತ್ ರಚಿಸಿರುವುದು ಶ್ಲಾಘನೀಯ, ಸ್ಪರ್ಧೆಗಳಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವುದು ಮುಖ್ಯ, ಸಮಾಜದಲ್ಲಿ ಯಾವುದೇ ಉನ್ನತ ಹುದ್ದೆ ಅಲಂಕರಿಸಲು ಶಿಕ್ಷಕರ ಪಾತ್ರ ಪ್ರಮುಖವಾಗಿದ್ದು ಅವರನ್ನು ಗೌರವಿಸುವುದು, ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.

ಗುರುವಂದನೆ ಸನ್ಮಾನ ಸ್ವೀಕರಿಸಿದ ಶಿಕ್ಷಕರಾದ ಭಾರತಿ ಬಾಯಿ, ಪೂರ್ಣಿಮಾ, ಕಿರಣ್ ಕುಮಾರ್, ವಾಸುದೇವರಾವ್ ಅವರು ಮಾತನಾಡಿ ಸಮಾಜ ವತಿಯಿಂದ ಪ್ರಥಮ ಬಾರಿಗೆ ಶಿಕ್ಷಕರನ್ನು ಗೌರವಿಸುತ್ತಿರುವುದು ಸಂತಸ ತಂದಿದೆ ಮುಂಬರುವ ದಿನಗಳಲ್ಲಿ ಸಮಾಜ ವತಿಯಿಂದ ಮತ್ತಷ್ಟು ಸಾಮಾಜಿಕ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದು ಶುಭ ಕೋರಿದರು.

ಯುವ ಪರಿಷತ್ ಅಧ್ಯಕ್ಷ ಬಿ.ಡಿ ಯಶವಂತ್, ಕಾರ್ಯದರ್ಶಿ ರಾಕೇಶ್ ಎಂ ರಾವ್, ಉಪಾಧ್ಯಕ್ಷ ವಿ.ರಘು, ಖಜಾಂಚಿ ಬಿ.ಎಸ್ ರಾಕೇಶ್ ಕುಮಾರ್ ಮಾತನಾಡಿ ಸಮಾಜದವರೆಲ್ಲ ಒಂದುಗೂಡಿ ಪರಸ್ಪರ ಬೇಟಿಯಾಗುವ ಮೂಲಕ ಸಂಘಟನೆಗೆ ಒತ್ತು ನೀಡುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಮುಂಬರುವ ದಿನಗಳಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಿದೆ ಎಂದರು.

ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಹಿತ, ಸಾನ್ವಿ, ದ್ವಿತೀಯ ಸ್ಥಾನ ಗಳಿಸಿದ ಸಯರಾ, ಹೊನಿತಾ, ತೃತೀಯ ಸ್ಥಾನ ಗಳಿಸಿದ ಪೂಜಿತ್ ಆರ್ ರಾವ್ ಅವರಿಗೆ ಬಹುಮಾನ ವಿತರಿಸಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ಈ ಸಂದರ್ಭ ಭಾವಸಾರ ಕ್ಷತ್ರಿಯ ಸಮಾಜ ಅಧ್ಯಕ್ಷ ಎಲ್.ಜೆ ಆನಂದ್ ಹಾಗೂ ಪದಾಧಿಕಾರಿಗಳು, ಪತ್ರಕರ್ತ ರಾಕೇಶ್ ಎಂ ರಾವ್ ಸೇರಿದಂತೆ ಸಮಾಜದವರು ಇದ್ದರು.

RELATED ARTICLES
- Advertisment -
Google search engine

Most Popular