ವರದಿ ಎಡತೊರೆ ಮಹೇಶ್
ಎಚ್ ಡಿ ಕೋಟೆ : ಈ ದಿನ ಕೋಟೆ ತಾಲೂಕಿನ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಏಕ ಲವ್ಯ ಮಾದರಿ ವಸತಿ, ಶಾಲೆ ಸೊಳ್ಳೆ ಪುರ, ಶಾಲೆಯಲ್ಲಿ ಮಕ್ಕಳಿಗೆ ಸಿಕಲ್ ಸೆಲ್ ಅನೀಮಿಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ,ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಟಿ. ರವಿಕುಮಾರ್ ರವರು ಅಧ್ಯಕ್ಷತೆಯನ್ನು ವಹಿಸಿ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳು ಮಾತನಾಡಿ ಸಿಕ್ಕಲ್ ಸೆಲ್ ಅನಿಮಿಯ ಕಾಯಿಲೆ ಎಂಬುದು ಕುಡುಗೋಲು ಅಥವಾ ಕುಡ್ಲು ಕಾಯಿದೆ ಎಂದು ಕರೆಯುತ್ತಾರೆ ,ಈ ಕಾಯಿಲೆಯಲ್ಲಿ ಕೆಂಪು ರಕ್ತಕಣಗಳು ಕುಡುಗೋಲು ಆಕಾರಕ್ಕೆ ಪರಿವರ್ತನೆಗೊಂಡು ಅನಾರೋಗ್ಯಕ್ಕೆ ಕಾರಣವಾಗುತ್ತದೆ,ಇದು ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಒಂದು ಅನುವಂಶಿಕ ಕಾಯಿಲೆ ಆದರೂ ಆರೋಗ್ಯವಂತ ಪೋಷಕರಿಗೆ ಸಿಕಲ್ ಸೆಲ್ ಕಾಯಿಲೆ ಇರುವ ಮಕ್ಕಳು ಹುಟ್ಟಬಹುದು, ಪದೇ ಪದೇ ಜ್ವರ, ತೀವ್ರ ಮೂಳೆ ನೋವು, ತೀವ್ರ ಹೊಟ್ಟೆ ನೋವು, ಆಗಾಗ ಕಾಮಲೆ ರೋಗ ,ರಕ್ತ ಹೀನತೆ ,ವಾಸಿಯಾಗದ ಹುಣ್ಣುಗಳು, ಲಕ್ವಾ, ಈ ಲಕ್ಷಣಗಳು ಮಕ್ಕಳಲ್ಲಿ ಕಂಡುಬರುತ್ತವೆ.
ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡು ಬಂದಲ್ಲಿ ಅಥವಾ ಸಂಬಂಧಿಕರಿಗೆ ಸಿಕ್ಕಲ್ ಸೆಲ್ ಕಾಯಿಲೆ ಇದ್ದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಆರೋಗ್ಯ ಸಿಬ್ಬಂದಿಯವರಿಂದ ರಕ್ತ ಪರೀಕ್ಷೆ ಮಾಡಿಸಿ ಪತ್ತೆ ಹಚ್ಚಬಹುದು. ಮಕ್ಕಳಿಗೆ ಸಿಕ್ಕಲ್ ಸೆಲ್ ಕಾಯಿಲೆ ಇದೆ ಎಂದು ದೃಢಪಡಿಸಿದಲ್ಲಿ ಎಲ್ಲಾ ಕುಟುಂಬದ ಸದಸ್ಯರು ಮತ್ತು ಸಂಬಂಧಿಕರು ವ್ಯಕ್ತಪಡಿಸಿ ಗೆ ಒಳಪಡಿಸಿ ತಕ್ಕದ್ದು. ಬೇಗ ಕಂಡು ಹಿಡಿದ್ದಲ್ಲಿ ಸಿಕ್ಕಲ್ ಸೆಲ್ ಕಾಯಿಲೆ ಮಗುವಿನ ಜೀವನವನ್ನು ಉಳಿಸಿ, ಆರೋಗ್ಯವನ್ನು ಕಾಪಾಡಬಹುದು. ಸಿಕ್ಕಲ್ ಸೆಲ್ ಕಾಯಿಲೆಗೆ ಚಿಕಿತ್ಸೆ ಪಡೆಯದೆ ಕಡೆಗಣಿಸಿದಲ್ಲಿ ಜೀವಕ್ಕೆ ಅಪಾಯವಾಗಬಹುದು. ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದು ಮತ್ತು ಆರೋಗ್ಯಕರ ಜೀವನ ಕಾಪಾಡಿಕೊಂಡಲ್ಲಿ ಕಾಯಿಲೆಯಿಂದ ಆಗುವ ತೊಂದರೆಯನ್ನು ತಪ್ಪಿಸಿಕೊಳ್ಳಿ,

ಪ್ರಧಾನಮಂತ್ರಿ ರವರ ಕನಸಿನ ಕಾರ್ಯಕ್ರಮವಾದ್ದರಿಂದ ಇವಾಗ ಎಲ್ಲಾ ವಸತಿ ಶಾಲೆಗಳಲ್ಲಿ ಪರೀಕ್ಷೆ ಮಾಡಿದ್ದೇವೆ ಮುಂದಿನ ದಿನಗಳಲ್ಲಿ ಎಲ್ಲಾ ಹಾಡಿಯ ಎಲ್ಲಾ ಹಾದಿವಾಸಿ ಗಳಿಗೂ ಮತ್ತು ಎಲ್ಲಾ ಮಕ್ಕಳಿಗೂ ಸಿಕ್ಕಲ್ ಸೆಲ್ ಅನಿಮಿಯ ತಪಾಸಣೆಯನ್ನು ಮಾಡುತ್ತೇವೆ ,ಎಲ್ಲರೂ ಪರೀಕ್ಷಿಸಿ ಕೊಳ್ಳಿ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ, ಕಾಲೇಜಿನ ಪ್ರಾಂಶುಪಾಲರಾದ, ಜಿ .ಆರ್ ಮಹೇಶ್, ಹಿರಿಯ ಆರೋಗ್ಯ ನಿರೀಕ್ಷಣಾದಿಕಾರಿಗಳಾದ ನಾಗೇಂದ್ರ , ರವಿರಾಜ್,, ಆದಿವಾಸಿ ಮುಖಂಡರಾದ ಪುಟ್ಟ ಬಸವಯ್ಯ, ಸಿದ್ದರಾಜು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರಾದ ಕೃಷ್ಣ ಸುಜಾತ,ಅಂಬಿಕಾ ಬೀರಪ್ಪ, ಕಮಲಮ್ಮ,ಆಶಾ ಕಾರ್ಯಕರ್ತೆಯರು ವಸತಿ ಶಾಲೆಯ ಉಪನ್ಯಾಸಕರು, ಆಡಳಿತ ವರ್ಗ ಮತ್ತು ಶಿಕ್ಷಕರು, ಮಕ್ಕಳು ಇನ್ನಿತರರು ಹಾಜರಿದ್ದರು.