Saturday, April 19, 2025
Google search engine

Homeರಾಜಕೀಯಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಕುರಿತು ಅವಹೇಳನಕಾರಿ ಹೇಳಿಕೆ: ಕುಮಾರಸ್ವಾಮಿ ಹಾಗೂ ಇತರರ ಮೇಲೆ ದೂರು

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಕುರಿತು ಅವಹೇಳನಕಾರಿ ಹೇಳಿಕೆ: ಕುಮಾರಸ್ವಾಮಿ ಹಾಗೂ ಇತರರ ಮೇಲೆ ದೂರು

ಮೈಸೂರು: ನಗರ ಕಾಂಗ್ರೆಸ್ ಸಮಿತಿಯ ಮೈಸೂರು ನಗರ ಮಾಧ್ಯಮ ವಕ್ತಾರರಾದ ಟಿ.ಶ್ರೀನಿವಾಸ್ ಮೈಸೂರಿನ ಲಕ್ಷ್ಮೀಪುರಂ ಪೋಲೀಸ್ ಠಾಣೆಯ ಆರಕ್ಷಕರಾದ ರವಿಶಂಕರ್ ರವರಿಗೆ ದೂರು ನೀಡಿದರು.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕರಾದ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ ರನ್ನು ಕುರಿತು, ಅವಹೇಳನ, ತೇಜೋವಧೆ ಹಾಗೂ ಮಾನನಷ್ಟ ಪದದ ಬಳಕೆ ಮಾಡಿ ಮಾನಹಾನಿ ಮಾಡಿರುವ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಇತರರ ಬಗ್ಗೆ ದೂರು ನೀಡಿದ್ದಾರೆ.

ನಾನು ಮೈಸೂರು ಜಿಲ್ಲಾ ಕಾಂಗ್ರೆಸ್ ವಕ್ತಾರನಾಗಿ ತಿಳಿಸುವುದೇನೆಂದರೆ, ನಾನು ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕದ ಮಾಧ್ಯಮ ಪ್ರತಿನಿಧಿಯಾಗಿದ್ದು, ದಿನಾಂಕ 10-8-24ರಂದು, ಭಾರತೀಯ ಜನತ ಪಕ್ಷ ಹಾಗೂ ಜಾತ್ಯಾತೀತ ಜನತ ದಳದವರು ಜಂಟಿಯಾಗಿ ಆಯೋಜಿಸಿದ್ದ, ನಗರದ ಮಹಾರಾಜ ಕಾಲೇಜಿನ ಮೈದಾನದಲ್ಲಿನ ಸಮಾವೇಶದಲ್ಲಿ ಕೇಂದ್ರ ಮಂತ್ರಿ (ಬೃಹತ್ ಕೈಗಾರಿಕೆ ಮತ್ತು ಉಕ್ಕು) ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿದರು.

“ಭೂಗತಪಾತಕಿ ಕೊತ್ವಾಲ್ ರಾಮಚಂದ್ರ ಜೊತೆ ಇದ್ದ ನಿಮಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ರಾಜಕೀಯ ಜನ್ಮ ನೀಡಿದರು. ಅವರ ಅಳಿಯ ಸಿದ್ಧಾರ್ಥ ಆತ್ಮಹತ್ಯೆಗೆ ಕಾರಣ ಯಾರು ಹೇಳಿ ಶಿವಕುಮಾರ್” ಎಂದು ನೇರವಾಗಿ ನಮ್ಮ ನಾಯಕರಾದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ರವರ ವಿರುದ್ಧ ಮಾನ ಹಾನಿ ಆಗುವಂತಹ, ಹಾಗೂ ಅವರ ವ್ಯಕ್ತಿತ್ವಕ್ಕೆ ಅವಹೇಳನ ಮಾಡುವಂತಹ ಹಾಗೂ ಅವರ ತೇಜೋವಧೆ ಮಾಡುವಂತಹ ಮಾತುಗಳನ್ನು ಅವರ ವಿರುದ್ಧ ಮಾತನಾಡಿರುತ್ತಾರೆ. ಇದಕ್ಕೆ ಯಾವುದೇ ಪುರಾವೆಗಳಾಗಲಿ, ಸಾಕ್ಷ್ಯಗಳಾಗಲಿ ಇರುವುದಿಲ್ಲ. ಸದರಿ ಮಾತುಗಳನ್ನು ಸನ್ಮಾನ್ಯರು ಸಾರ್ವಜನಿಕ ಸಮಾವೇಶದಲ್ಲಿ ಆಡಿದ್ದರಿಂದ ನಮ್ಮ ನಾಯಕರ ವ್ಯಕ್ತಿತ್ವಕ್ಕೆ ಧಕ್ಕೆ ಬಂದಿರುತ್ತದೆ. ಅದಲ್ಲದೆಯೂ ಸಹ “ಸಿಡಿ ಶಿವು” ಎಂದು ಅಶ್ಲೀಲ ಚಿತ್ರಗಳ ಎಂಬುದರಲ್ಲಿಯೂ ಮಾತಾಡಿದ್ದು ನಮ್ಮ ನಾಯಕರ ತೇಜೋವಧೆ ಮಾಡಿದುದಲ್ಲದೆ, ನಮ್ಮಗಳ ಭಾವನೆಗೂ ಧಕ್ಕೆ ತಂದಿರುತ್ತಾರೆ ಎಂದು ಆರೋಪಿಸಿದ್ದಾರೆ.

ಇದಲ್ಲದೆಯೂ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರು, ಮಾಜಿ ಸಚಿವರಾದ ಅಶೋಕ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ವಿಜಯೇಂದ್ರರವರು ಸಹ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿರುದ್ಧ ಇಲ್ಲಸಲ್ಲದ ಆಧಾರರಹಿತ ಆಪಾದನೆಗಳನ್ನು ಮಾಡುತ್ತಾ, ಮೂಡಾ ಮತ್ತು ವಾಲ್ಮೀಕಿ ಹಗರಣಗಳನ್ನು ಸೃಷ್ಟಿ ಮಾಡಿ, ಅದರಲ್ಲಿ ಇವರುಗಳ ಪಾತ್ರವಿದೆ ಎಂದು ಸಾರ್ವಜನಿಕವಾಗಿ ಭಾಷಣ ಮಾಡಿ, ಅವರುಗಳ ಮಾನಹಾನಿ ಹಾಗೂ ತೇಜೋವಧೆಯನ್ನು ಸಾರ್ವನಿಕವಾಗಿ ಮಾಡಿರುತ್ತಾರೆ.

ಅದಲ್ಲದೆಯೂ ಸಹ, ಸದರಿ ಭಾಷಣವು ಜನಾಂಗಗಳ ನಡುವೆ ದ್ವೇಷ ಭಾವನೆ ಉಂಟು ಮಾಡಿ, ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡಿ ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಶಾಂತಿ ನೆಮ್ಮದಿಗೆ ಭಂಗ ತರುವಂತಹ ಪ್ರಯತ್ನವೂ ಸಹ ಪಡೆಯುತ್ತಿದೆಯೆಂದು ಮೇಲ್ನೋಟಕಕ್ಕೆ ಕಂಡು ಬರುತ್ತದೆ. ಇದರಿಂದಾಗಿ ನಮ್ಮ ನಾಯಕರಿಗೆ ಹಾಗೂ ನಮ್ಮಗಳ ಭಾವನೆಗೆ ತುಂಬಲಾರದ ನಷ್ಟವನ್ನೆಸಗಿರುತ್ತಾರೆ. ಈ ರೀತಿಯಲ್ಲಿ ಮೇಲ್ಕಂಡ ವ್ಯಕ್ತಿಗಳು ಒಟ್ಟಗೂಡಿ ಇಲ್ಲಸಲ್ಲದ ಆಧಾರರಹಿತ ಆಪಾದನೆಗಳನ್ನು ಮಾಡುತ್ತಾ ಸರ್ಕಾರವನ್ನು 8 ವಾಮಮಾರ್ಗದಿಂದ ಕಿತ್ತೊಗೆಯಲು, ಸಮಾಜಬಾಹಿರ ಶಕ್ತಿಗಳೊಂದಿಗೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿರುವುದರಿಂದ ಸದರಿಯವರುಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯವನ್ನು ದೊರಕಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular