Monday, December 22, 2025
Google search engine

Homeರಾಜಕೀಯದಲಿತ ಸಿಎಂ ಕಾರ್ಡ್ ಪ್ಲೇ ಮಾಡಲು ಸಿದ್ದು ಬಣ ಸಿದ್ದತೆ; ಎಐಸಿಸಿ ಅಧ್ಯಕ್ಷರ ಜೊತೆಗೆ ಪರಮೇಶ್ವರ್...

ದಲಿತ ಸಿಎಂ ಕಾರ್ಡ್ ಪ್ಲೇ ಮಾಡಲು ಸಿದ್ದು ಬಣ ಸಿದ್ದತೆ; ಎಐಸಿಸಿ ಅಧ್ಯಕ್ಷರ ಜೊತೆಗೆ ಪರಮೇಶ್ವರ್ ಮಾತುಕತೆ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಕಿತ್ತಾಟ ವೇಗ ಪಡೆದುಕೊಳ್ಳುತ್ತಿದ್ದು, ಪಕ್ಷದ ಆಂತರಿಕ ಕಿತ್ತಾಟಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ನಾಯಕರು ವಿಫಲವಾಗಿದ್ದಾರೆ. ಇನ್ನೂ ಸಮಸ್ಯೆ ಬಗೆಹರಿಸುವ ಮಾತಿನ ಬದಲಾಗಿ ಕೈಚೆಲ್ಲುವ ಹೇಳಿಕೆ ಕುತೂಹಲ ಕೆರಳಿಸಿದ್ದು ಈ ನಡುವೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.

ಈ ನಡುವೆ ಬಾರಿ ಚರ್ಚೆಗೆ ಗ್ರಾಸವಾಗಿರುವ ಪವರ್ ಶೇರಿಂಗ್ ಫೈಟ್ ನಡುವೆ ಬೆಂಗಳೂರಿನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಭೇಟಿ ನಾನಾ ವ್ಯಾಖ್ಯಾನಕ್ಕೆ ಕಾರಣವಾಗುತ್ತಿದೆ. ಹೈಕಮಾಂಡ್ ಸ್ಪಷ್ಟ ನಿರ್ಧಾರದ ಮೇಲೆ ಸಿಎಂ ಬಣದ ಆಟ ಶುರುವಾಗಿದೆ. ಹೈಕಮಾಂಡ್ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನು ಮುಂದುವರೆಸಿದರೆ ಸಿದ್ದರಾಮಯ್ಯ ಬಣ ಸೈಲೆಂಟ್ ಆಗಿರಲಿದೆ. ಆದರೆ ಬದಲಾವಣೆಗೆ ಮುಂದಾದರಲ್ಲಿ ದಲಿತ ಸಿಎಂ ದಾಳ ಉರುಳಿಸಲು ಸಜ್ಜಾಗಿದೆ ಎನ್ನಲಾಗಿದೆ.

ಇನ್ನೂ ನಾಯಕತ್ವ ಬದಲಾವಣೆಯ ಬಗ್ಗೆ ಸದ್ಯ ಹೈಕಮಾಂಡ್ ಯಾವುದೇ ನಿಲುವು ತೆಗೆದುಕೊಂಡಿಲ್ಲ. ಹೀಗಾಗಿ ಎರಡು ಬಣಗಳಲ್ಲಿ ಗೊಂದಲ ಮುಂದುವರಿದಿದೆ. ಒಂದೊಮ್ಮೆ ಬದಲಾವಣೆ ಅನಿವಾರ್ಯ ಎಂದರೆ ದಲಿತ ಸಿಎಂ ದಾಳ ಹೂಡುವುದು ತಂತ್ರಗಾರಿಕೆಯಾಗಿದೆ. ಈ ಸಂದರ್ಭದಲ್ಲಿ ಡಾ.ಜಿ ಪರಮೇಶ್ವರ್ ಹೆಸರು ಪ್ರಸ್ತಾಪ ಮಾಡಲು ಸಿದ್ದರಾಮಯ್ಯ ಬಣ ಚಿಂತನೆ ನಡೆಸುತ್ತಿದೆ. ಪರಮೇಶ್ವರ್ ಕಾಂಗ್ರೆಸ್ ಪಕ್ಷದಲ್ಲಿ ಪ್ರಭಾವಿ ನಾಯಕರಲ್ಲೊಬ್ಬರಾಗಿದ್ದಾರೆ. ಹಿರಿತನ ಹಾಗೂ ಅನುಭವವೂ ಅವರಿಗಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಎಂಟು ವರ್ಷ ಪಕ್ಷವನ್ನು ಮುನ್ನಡೆಸಿದ್ದಾರೆ. ಪರಮೇಶ್ವರ್ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೂ ಬಂದಿದೆ. ಆದರೆ, ಅಧಿಕಾರಕ್ಕೆ ಬಂದರೂ ಸಿಎಂ ಆಗುವ ಅವಕಾಶ ಸಿಕ್ಕಿಲ್ಲ ಎಂಬುವುದು ಇದೀಗ ಮಹತ್ವದ್ದಾಗಿದೆ.

ಅಲ್ಲದೇ ಆಡಳಿತದಲ್ಲೂ ಪರಮೇಶ್ವರ್‌ ಅವರಿಗೆ ಅನುಭವ ಇದೆ. ಡಿಸಿಎಂ ಆಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಪ್ರಭಾವಿ ಖಾತೆಗಳನ್ನು ನಿಭಾಯಿಸಿದ್ದಾರೆ. ಜೊತೆಗೆ ರಾಜಕೀಯವಾಗಿ ಕ್ಲಿನ್ ಇಮೇಜ್ ಕೂಡಾ ಅವರಿಗೆ ಇದೆ. ಹೀಗಾಗಿ ಅನಿವಾರ್ಯ ಸಂದರ್ಭದಲ್ಲಿ ಪರಮೇಶ್ವರ್ ಪರವಾಗಿ ದಾಳ ಉರುಳಿಸಲು ಸಿದ್ದರಾಮಯ್ಯ ಬಣ ಪ್ಲ್ಯಾನ್ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಎರಡು ಬಣಕ್ಕೂ ಒಮ್ಮತ?
ಜಿ ಪರಮೇಶ್ವರ್ ಅವರು ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಜೊತೆಗೆ ಗುರುತಿಸಿಕೊಂಡಿದ್ದಾರೆ. ಆದರೆ ಅವರು ಎರಡು ಬಣಕ್ಕೂ ಒಮ್ಮತದ ಅಭ್ಯರ್ಥಿ. ಡಿಕೆ ಶಿವಕುಮಾರ್ ಜೊತೆಗೆ ಉತ್ತಮವಾದ ನಂಟು ಇಟ್ಟುಕೊಂಡಿದ್ದು, ಜೊತೆಗೆ ಹೈಕಮಾಂಡ್ ಮಟ್ಟದಲ್ಲಿ ಸಂಪರ್ಕ ಇದೆ. ಪರಮೇಶ್ವರ್ ಆದರೆ ಸಿಎಂಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಹಾಗಾಗಿ ಪರಮೇಶ್ವರ್ ಸೂಕ್ತ ಎಂದು ಪ್ರಸ್ತಾಪ ಮಾಡಲು ತಯಾರಿ ನಡೆಸಲಾಗುತ್ತಿದೆ ಎಂಬುವುದು ಕಾಂಗ್ರೆಸ್ ಮೂಲಗಳ ಮಾಹಿತಿ ಎನ್ನಲಾಗುತ್ತಿದೆ.

ಈ ನಡುವೆ ಎಐಸಿಸಿ ಅಧ್ಯಕ್ಷರ ಭೇಟಿ ಕುರಿತಾಗಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಮಾತುಕತೆಯ ಉದ್ದೇಶ ಇಲ್ಲ. ನಾನು ಖರ್ಗೆಯವ ಜೊತೆಗೆ ರಾಜಕೀಯ ಮಾತಾಡಿಲ್ಲ. ನನ್ನ ಅವರ ಸಂಬಂಧವೇ ಬೇರೆ. ನಮ್ಮ ಮನೆಯ ವಿಷಯಗಳನ್ನು ಮಾತಾಡಿದ್ದೇವೆ ಹೊರತು ರಾಜಕೀಯ ಮಾತಾಡಿಲ್ಲ. ಇಲ್ಲಿ ಈಗ ರಾಜಕೀಯ ಚರ್ಚೆ ಬೇಡ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular