Saturday, April 19, 2025
Google search engine

Homeರಾಜಕೀಯಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್: ರೇಣುಕಾಚಾರ್ಯ ವಾಗ್ದಾಳಿ

ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ, ಕಾಂಗ್ರೆಸ್: ರೇಣುಕಾಚಾರ್ಯ ವಾಗ್ದಾಳಿ

ಬೆಂಗಳೂರು: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಎಂದು ಮಾಜಿ ಸಚಿವ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯಿಂದ ಆಪರೇಷನ್ ಕಮಲ ನಡೆಯುತ್ತಿದೆ ಎಂಬ ಸಿಎಂ ಆರೋಪ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಸಿಎಂ ಆದ್ಮೇಲೆ ದ್ವೇಷದ ರಾಜಕೀಯ ಮಾಡ್ತಿದ್ದಾರೆ. ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ತಮ್ಮ ಮೇಲೆ ವಾಲ್ಮೀಕಿ, ಮುಡಾ, ವಕ್ಫ್ ವಿವಾದ ಇದೆ. ಅಲ್ಪಸಂಖ್ಯಾತರ ಗುತ್ತಿಗೆದಾರಿಗೆ ಶೇ.4 ಮೀಸಲಾತಿ ನೀಡುವ ವಿವಾದ ಇದೆ. ಯಾವಾಗ ಮುಡಾ ತನಿಖೆ ಗಂಭೀರವಾಗಲು ಪ್ರಾರಂಭ ಆಯ್ತೋ ಆಗ ಕೋವಿಡ್ ವಿಚಾರದಲ್ಲಿ ಯಡಿಯೂರಪ್ಪ ಮೇಲೆ ಎಸ್‌ಐಟಿ ರಚನೆ ಮಾಡಿರುವುದಕ್ಕೆ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದಾರೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಮುಡಾ (MUDA) ಸೈಟ್ ವಾಪಸ್ ಕೊಡಲಿಲ್ವಾ? ನೀವು ಅಧಿವೇಶನದಲ್ಲಿ 63 ಕೋಟಿ ರೂ. ಕೇಳಿದ್ರಿ ನಿಮಗೆ ಯಾವ ನೈತಿಕತೆ ಇದೆ? ವರ್ಗಾವಣೆ ದಂಧೆಯಲ್ಲಿ ಹಗಲುದರೋಡೆ ಮಾಡಿದ್ದೀರಾ. ಯಾದಗಿರಿಯಲ್ಲಿ ಪಿಎಸ್‌ಐ ಸಾವು ಆಯ್ತು. ಬೆಳಗಾವಿಯಲ್ಲಿ ಎಸ್‌ಡಿಎ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಸಿದ್ದರಾಮಯ್ಯನವರೇ ಭ್ರಷ್ಟಾಚಾರಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಾ? ಎಸ್‌ಐಟಿ ಅಂದರೆ ಸಿದ್ದರಾಮಯ್ಯ, ಶಿವಕುಮಾರ್ ಇನ್ವೆಸ್ಟಿಗೆಷನ್ ಟೀಮ್ ಎಂದು ಹೇಳಿದರು.

ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಮೇಲೆ ಎಸ್‌ಐಟಿ ರಚನೆ ಮಾಡಿದ್ರಿ. ಇಡಿ ಪ್ರವೇಶ ಆದ್ಮೇಲೆ ಇಂಚಿಂಚಾಗಿ ಭ್ರಷ್ಟಾಚಾರ ಬಯಲಿಗೆ ಎಳೆದರು. ವಾಲ್ಮೀಕಿ ನಿಗಮದ ಹಣ ಎಲ್ಲೆಲ್ಲಿಗೆ ಹೋಯ್ತು? ಭ್ರಷ್ಟಾಚಾರ ಸಾಬೀತು ಆಯ್ತು ನಾಗೇಂದ್ರ ರಾಜೀನಾಮೆ ಕೊಟ್ರು. ನಾಗೇಂದ್ರ ಅವರನ್ನು ಮತ್ತೆ ಸಚಿವರಾಗಿ ಮಾಡ್ತೀವಿ ಅಂತ ಸಿದ್ದರಾಮಯ್ಯ ಹೇಳ್ತಾರೆ. ಮೈಕಲ್ ಡಿ ಕುನ್ಹಾ ಮಧ್ಯಂತರ ವರದಿಯಲ್ಲಿ ಯಡಿಯೂರಪ್ಪ ಹಾಗೂ ಶ್ರೀರಾಮುಲು ಮೇಲೆ ತಮಗೆ ಬೇಕಾದ ರೀತಿಯಲ್ಲಿ ರಾಜಕೀಯ ಪ್ರೇರಿತರಾಗಿ ವರದಿ ತಯಾರಿ ಮಾಡಿದ್ದೀರಾ, ಕೋವಿಡ್‌ನಲ್ಲಿ ಮೋದಿಯವರು ದೇಶದ ರಕ್ಷಣೆ ಮಾಡಿದ್ರು. ನಿಮ್ಮ ಸರ್ಕಾರ ಇರಲ್ಲ ಪತನವಾಗಲಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.

RELATED ARTICLES
- Advertisment -
Google search engine

Most Popular