Saturday, April 19, 2025
Google search engine

Homeರಾಜ್ಯಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಹಾಕುತ್ತಿದ್ದಾರೆ: ಅರವಿಂದ ಬೆಲ್ಲದ್ ಆರೋಪ

ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಹಾಕುತ್ತಿದ್ದಾರೆ: ಅರವಿಂದ ಬೆಲ್ಲದ್ ಆರೋಪ

ಹುಬ್ಬಳ್ಳಿ: ಈ ಹಿಂದೆ ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ರಾಜ್ಯ ಹಳ್ಳ ಹಿಡಿಸಿದ್ದರು. ಇದೀಗ ಮತ್ತೆ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರ ಸರ್ಕಾರದ ಮೇಲೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದಾರೆ.

ಬಿಜೆಪಿ ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾರಾಯಿ ಕುಡಿಯುವವರು ಅತೀ ಹೆಚ್ಚು ತೆರಿಗೆ ಕಟ್ಟುತ್ತಿದ್ದಾರೆ. ನಮ್ಮ ಸಾರಾಯಿ ನಮ್ಮ ತೆರಿಗೆ ಅನ್ನೋಕೆ ಆಗತ್ತಾ ಎಂದು ಹೇಳುವ ಮೂಲಕ ಕಾಂಗ್ರೆಸ್​ನ ‘ನಮ್ಮ ತೆರಿಗೆ ನಮ್ಮ ಹಕ್ಕು’ ಅಭಿಯಾನಕ್ಕೆ ತಿರುಗೇಟು ನೀಡಿದರು. ತಿಪ್ಪರಲಾಗ ಹಾಕಿದರೂ ಬಿಜೆಪಿಯನ್ನು ಏನೂ‌ ಮಾಡಲು ಆಗಲ್ಲ. ಇದು ಜೋಶಿ, ಮೋದಿ ಚುನಾವಣೆ ಅಲ್ಲ ಇದು ದೇಶದ ಚುನಾವಣೆ. ಭಾರತದ ಸಾರ್ವಭೌಮಕ್ಕಾಗಿ ಚುನಾವಣೆ ಎಂದು ಬೆಲ್ಲದ್ ಹೇಳಿದರು.

ಸಿದ್ದರಾಮಯ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕುರಿಸುವ ‌ಕೆಲಸ ಮಾಡುತ್ತಿದೆ. ರಾಜ್ಯ ಸರ್ಕಾರ ವರ್ಸಸ್ ಕೇಂದ್ರ ಸರ್ಕಾರ ಎಂಬುದು ಅವರ ಪ್ಲ್ಯಾನ್ ಆಗಿದೆ ಎಂದು ಹೇಳಿದ ಬೆಲ್ಲದ್, ಅವರ ಬಳಿ ದುಡ್ಡು ಇಲ್ಲ, ನಾವ ಒಂದೇ ಒಂದು ಕಡಿ ಹಾಕಿಲ್ಲ. ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ದಂಧೆ ಮಾಡಿದ್ದಾರೆ. ಟಾಪ್ ಟು ಬಾಟಮ್ ದಂಧೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಜನರ ಬೇಡಿಕೆ ಈಡೇರಿಸಲು ಆಗುತ್ತಿಲ್ಲ. ಸಂಪೂರ್ಣವಾಗಿ ಭರವಸೆ ಕಳೆದುಕೊಂಡಿದೆ ಎಂದರು.

RELATED ARTICLES
- Advertisment -
Google search engine

Most Popular