ಮೈಸೂರು: ಕಾಂಗ್ರೆಸ್ ಪಕ್ಷದ ಹಲವು ಮುಖಂಡರ ವಿರೋಧದ ನಡುವೆಯು ನನ್ನ ಮೇಲೆ ವಿಶ್ವಾಸವಿಟ್ಟು ಮೂಡಾ ಅಧ್ಯಕ್ಷ ನನ್ನಾಗಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರೇ ನನ್ನ ಮೆಚ್ಚಿನ ಮನೆ ದೇವರು ಎಂದು ಮೂಡಾ ಅಧ್ಯಕ್ಷ ಕೆ.ಮರೀಗೌಡ ಹೇಳಿದರು.
ರಾಮಕೃಷ್ಣನಗರದ ಪುನಿತ್ ಕನ್ವೆಂಷನ್ ಹಾಲ್‌ನಲ್ಲಿ ವಾರ್ಡ್‌ನಂ-೪೪, ೪೫,೪೬, ಹಾಗೂ ೫೮ನೇ ವಾರ್ಡ್‌ನ ಕಾರ್ಯಕರ್ತರು ಮತ್ತು ಮುಖಂಡರು ಚಾಮುಂಡೇಶ್ವರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ರವಿ ನೇತೃತ್ವದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಚಾಮುಂಡೇಶ್ವರಿ ಕ್ಷೇತ್ರದ ಜನತೆಗೆ ಮೂಡಾ ಅಧ್ಯಕ್ಷ ಹುದ್ದೆಯನ್ನು ಸಮರ್ಪಣೆ ಮಾಡುತ್ತೇನೆ. ಕಳೆದ ೧೦ ವರ್ಷಗಳಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟುವನ ನಿಟ್ಟಿನಲ್ಲಿ ಶ್ರಮವಹಿಸಿದ ಕಾಂಗ್ರೆಸ್ ಕಾರ್ಯಕರ್ತರೇ ಪಕ್ಷದ ಬೆನ್ನುಲುಬಾಗಿದ್ದಾರೆ. ಜನರು ನನ್ನ ಮೇಲೆ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗದಿದ್ದರೂ ಸಹ ದ್ರೋಹವನ್ನು ಮಾಡುವುದಿಲ್ಲ. ಹಲವು ಮಹನೀಯರು ಮೂಡಾ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಅವರಂತೆ ನಾನು ಸಹ ಬಡವರಿಗೆ, ಕೂಲಿಕಾರ್ಮಿಕರಿಗೆ, ನಿರಾಶ್ರಿತರಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತೇನೆ.
ಈಗಾಗಲೇ ಗುಂಪು ಮನೆ ಕಟ್ಟಲು ೨೯ ಎಕರೆ ಜಾಗವನ್ನು ಮುಖ್ಯಮಂತ್ರಿಗಳಿಂದ ಮಂಜೂರು ಮಾಡಿಸಿದ್ದೇನೆ. ಹದಗೆಟ್ಟು ಹೋಗಿರುವ ಮೂಡಾ ವ್ಯವಸ್ಥೆಯನ್ನು ಬದಲಾವಣೆ ಮಾಡಿ ಎಷ್ಟೇ ಕಷ್ಟ ಬಂದರೂ ಸಹ ಮೂಡಾ ಆಸ್ತಿಯನ್ನು ರಕ್ಷಣೆ ಮಾಡುತ್ತೇನೆ. ಮೈಸೂರು ತಾಲ್ಲೂಕಿನ ಗ್ರಾಮಗಳ ಅಭಿವೃದ್ಧಿಗೆ ಶ್ರಮವಹಿಸುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ರವರೇ ಎಂ.ಎಲ್.ಎ. ಎಂದು ತಿಳಿದು ಕೆಲಸ ಮಾಡೋಣ, ಸಿದ್ದರಾಮಯ್ಯರವರು ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪಕ್ಷವನ್ನು ಕಟ್ಟೋಣ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಎಲ್ಲರು ಬೆಂಬಲಿಸುಬೇಕು ಹಾಗೂ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಿಳಿಸಬೇಕು ೧೫ ರಂದು ನಡೆಯುವ ಗ್ಯಾರಂಟಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಬರಬೇಕು ಎಂದರು. ಸಭೆಯಲ್ಲಿ ಮಾಜಿ ಮೇಯರ್‌ಗಳಾದ ಟಿ.ಬಿ.ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಗುರುಸ್ವಾಮಿ, ಜಿ.ಕೆ. ಬಸವಣ್ಣ, ಹರೀಶ್ ಮೊಗಣ್ಣ, ಮಹಾದೇವ್, ಮಲ್ಲೇಶ್, ಕೃಷ್ಣಪ್ಪ, ಬಿಎಸ್‌ಎನ್‌ಎಲ್ ಮಾದೇಗೌಡ, ಬಿ.ರವಿ, ಬಸವೇಗೌಡ, ವಿಕ್ಕಿವಾಸು, ಸ್ವಾಮಿ, ಪ್ರಕಾಶ್, ಸುಶೀಲನಂಜಪ್ಪ, ಕೃಷ್ಣಮೂರ್ತಿ, ರಾಜೇಗೌಡ ಹಾಜರಿದ್ದರು.