Friday, April 4, 2025
Google search engine

Homeರಾಜ್ಯಮುಂದಿನ ಚುನಾವಣೆ ಗೆಲ್ಲಬೇಕೆಂದರೆ ಸಿದ್ದರಾಮಯ್ಯ ಬೇಕೆ ಬೇಕು: ಸತೀಶ್ ಜಾರಕಿಹೊಳಿ

ಮುಂದಿನ ಚುನಾವಣೆ ಗೆಲ್ಲಬೇಕೆಂದರೆ ಸಿದ್ದರಾಮಯ್ಯ ಬೇಕೆ ಬೇಕು: ಸತೀಶ್ ಜಾರಕಿಹೊಳಿ

ಬೆಂಗಳೂರು: ಸಿದ್ದರಾಮಯ್ಯ ಅವರು ನಮಗೆ ಬೇಕೆ ಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಅಂದರೆ ಸಿದ್ದರಾಮಯ್ಯ ಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವ್ರು ನಮಗೆ ಬೇಕೆ ಬೇಕು. ಹಿಂದೆಯೂ ಇದನ್ನ ಹೇಳಿದ್ದೆ, ಈಗಲೂ ಹೇಳ್ತೇನೆ. ಚುನಾವಣೆಗೆ ನಿಲ್ಲದಿದ್ದರೂ, ರಾಜಕೀಯ ನಿವೃತ್ತಿಯಾದರೂ ಅವರು ಬೇಕು. ಮುಂದಿನ ನಾಯಕತ್ವ ಬೆಳೆಸೋವರೆಗೂ ರಾಜಕಾರಣದಲ್ಲಿ ಇರಬೇಕು ಎಂದರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಗೊತ್ತಿಲ್ಲ. ಈ ಬಗ್ಗೆ ಖರ್ಗೆ ಅವರು ತೀರ್ಮಾನ ಮಾಡ್ತಾರೆ.

ಕರ್ನಾಟಕ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ. ಬೇರೆ ರಾಜ್ಯಗಳ ಚರ್ಚೆ ನಡೆಯುತ್ತಿದೆ. ನಮ್ಮ ರಾಜ್ಯದ ಚರ್ಚೆ ಬಂದಾಗ ಅಭಿಪ್ರಾಯ ಹೇಳುತ್ತೇವೆ ಎಂದು ತಿಳಿಸಿದರು. ನಮ್ಮ ಆಶಯ ಕೂಡ ಅದೇ ಇದೆ. ಚುನಾವಣೆಯಿಂದ ನಿವೃತ್ತಿ ಆದರೂ, ಸಕ್ರಿಯ ರಾಜಕೀಯದಲ್ಲಿ ಸಿದ್ದರಾಮಯ್ಯ ಇರಬೇಕು. ಮುಂದಿನ ಚುನಾವಣೆ ಗೆಲ್ಲಬೇಕು ಅಂದ್ರೆ, ಸಿದ್ದರಾಮಯ್ಯ ಬೇಕು. ಚುನಾವಣೆ ಗೆಲ್ಲಲು ಅನುಕೂಲ ಆಗುತ್ತೆ. ಇನ್ನೊಂದು ಅವಧಿಯವರೆಗೆ ರಾಜಕೀಯದಲ್ಲಿ ಅವರು ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular