Friday, April 11, 2025
Google search engine

Homeರಾಜಕೀಯಕಾಂಗ್ರೆಸ್ ನಡೆಸಿದ್ದು ಜನಾಂದೋಲನ ಅಲ್ಲ ಧನಾಂದೋಲನ: ಪ್ರಲ್ಹಾದ್​ ಜೋಶಿ ವಾಗ್ದಾಳಿ

ಕಾಂಗ್ರೆಸ್ ನಡೆಸಿದ್ದು ಜನಾಂದೋಲನ ಅಲ್ಲ ಧನಾಂದೋಲನ: ಪ್ರಲ್ಹಾದ್​ ಜೋಶಿ ವಾಗ್ದಾಳಿ

ಮೈಸೂರು: ಕಾಂಗ್ರೆಸ್ ನಡೆಸಿದ್ದು ಜನಾಂದೋಲನ ಅಲ್ಲ ಧನಾಂದೋಲನ. ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ಕೊಡಲು ಮಾಡಿದ ಧನಾಂದೋಲನ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ವಾಗ್ದಾಳಿ ಮಾಡಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಒಂದು ಕಪ್ಪು ಚುಕ್ಕೆ ಅಲ್ಲ. ನಿಮ್ಮ ಮೈ ತುಂಬಾ ಬರೀ ಕಪ್ಪು ಚುಕ್ಕೆ ಇವೆ ನೋಡಿಕೊಳ್ಳಿ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಳಗಡೆ ಹೊಡೆದಾಡುತ್ತಾರೆ‌, ಆದರೆ ಹೊರಗಡೆ ನಾವು ಬಂಡೆ ಎನ್ನುತ್ತಾರೆ. 14 ಸೈಟ್ ವಾಪಾಸ್ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಕಳ್ಳ ಮಾಲು ವಾಪಸ್ಸು ಕೊಟ್ಟ ತಕ್ಷಣ ಎಲ್ಲಾ ಮುಗಿಯಲ್ಲ. ಕಳ್ಳತನಕ್ಕೂ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಡಿಎನ್​ಎನಲ್ಲಿ ಭ್ರಷ್ಟಾಚಾರವಿದೆ ಅಂತಾ ಹೇಳಿದ್ದೆ. ದಲಿತರು, ಹಿಂದುಳಿದವರಿಗೆ ಅನ್ಯಾಯ ಅಪಮಾನ ಮಾಡುವ ಅಂಶ ಸಹಾ ಕಾಂಗ್ರೆಸ್ ಡಿಎನ್​ಎ ನಲ್ಲಿದೆ ಎಂದರು. ಕಾನೂನಿನ ಪ್ರಕಾರವೂ ಸಿದ್ದರಾಮಯ್ಯ ವಿರುದ್ದ ಹೋರಾಟ ಮಾಡಲಾಗುವುದು ಅವರನ್ನು ಮನೆಗೆ ಕಳುಹಿಸುವವರೆಗೂ ನಾವು ವಿರಮಿಸಲ್ಲ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular