Friday, April 18, 2025
Google search engine

Homeರಾಜ್ಯಸುದ್ದಿಜಾಲಸಿದ್ದರಾಮಯ್ಯ ಕಾನೂನಿಗೆ ತಲೆ ಬಾಗಬೇಕು: ಎಚ್.ವಿಶ್ವನಾಥ್

ಸಿದ್ದರಾಮಯ್ಯ ಕಾನೂನಿಗೆ ತಲೆ ಬಾಗಬೇಕು: ಎಚ್.ವಿಶ್ವನಾಥ್

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಠಮಾರಿತನ ಬಿಟ್ಟು ರಾಜೀನಾಮೆ ಕೊಡಬೇಕು. ಈ ಮೂಲಕ ಕಾನೂನಿಗೆ ತಲೆ ಬಾಗುವುದು ಒಳ್ಳೆಯದು ಎಂದು ಎಚ್.ವಿಶ್ವನಾಥ್ ತಿಳಿಸಿದರು.

ನಾನು ಸಿದ್ದರಾಮಯ್ಯರಿಗೆ ಮೊದಲೇ ಹೇಳಿದ್ದೆ, ಕೇವಲ ೧೪ ಸೈಟ್‌ಗಳಿಗೆ ಯಾಕೆ ಹೀಗೆ ಆಡ್ತಿರಾ. ಅದೆಲ್ಲವನ್ನೂ ವಾಪಸ್ ಕೊಡಿ, ತನಿಖೆಗೆ ಸಹಕರಿಸಿ. ನಿಮ್ಮ ದೊಡ್ಡತನ ತೋರಿಸಿ, ನಿಮ್ಮ ಕುರ್ಚಿಗೆ ಗೌರವ ಕೊಡಿ ಅಂದಿದ್ದೆ ಎಂದರು. ತನಿಖೆ ಆದ ಮೇಲೆ ಎಲ್ಲವೂ ಸರಿಯಾಗುತ್ತಿತ್ತು. ಸಿದ್ದರಾಮಯ್ಯರಿಗೆ ನಾವು ಹೇಳಿದ ಮಾತುಗಳು ಮುಖ್ಯವಲ್ಲ. ಅವರ ಸುತ್ತ ಇರೋರು ಹೇಳೋದು ಮುಖ್ಯ ಅನ್ನಿಸಿದೆ. ಅದಕ್ಕೆ ಈಗ ಈ ಸ್ಥಿತಿ ಬಂದಿದೆ. ನಾನು ರಾಜೀನಾಮೆ ಕೊಡಲ್ಲ, ನಾನು ಜಗ್ಗಲ್ಲ, ಬಗ್ಗಲ್ಲ ಅನ್ನೋದೆಲ್ಲ ಬಿಡಬೇಕು. ಕಾನೂನಿಗೆ ಪ್ರತಿಯೊಬ್ಬರು ಗೌರವ ಕೊಡಬೇಕು ಎಂದು ಆಗ್ರಹಿಸಿದರು.

ಹಿಂದುಳಿದ ವರ್ಗಗಳ ನಾಯಕರೆನಿಸಿಕೊಂಡಿದ್ದೀರಿ. ಒಳ್ಳೆಯ ಕೆಲಸ ಮಾಡಿದ್ದೀರಿ. ಈಗಲೂ ನಿಮ್ಮ ಗೌರವ ಹೆಚ್ಚುತ್ತದೆ. ತಕ್ಷಣ ರಾಜೀನಾಮೆ ಕೊಟ್ಟು ಕುರ್ಚಿ ಬಿಟ್ಟು ಬನ್ನಿ. ನಿಮ್ಮ ಬಗ್ಗೆ ನಮಗೆ ಗೌರವವಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular